ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರಿಗೆ ಸಹಾಯವಾಗಲೆಂದು 10 ಹಲವಾರು ಯೋಜನೆಗಳು ಈಗಾಗಲೇ ಲಭ್ಯವಿದ್ದು ಯಾವ ಯಾವ ಯೋಜನೆಗಳು ಲಭ್ಯವಿವೆ ಇಲ್ಲಿದೆ ನೋಡಿ ಮಾಹಿತಿ…
1) ಕೃಷಿ ಸಂಜೀವಿನಿ
2) ಐದು ಲಕ್ಷ ರೂಪಾಯಿ ವರೆಗೂ ಬಡ್ಡಿ ರೈತ ಸಾಲ
3) ಸರ್ಕಾರದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ವತಿಯಿಂದ ರೈತರ ಖಾತೆಗೆ 10 ಸಾವಿರ ರೂಪಾಯಿ ಜಮಾ
4) ಬೆಳೆ ಪರಿಹಾರ ಅರ್ಜಿ ಸಲ್ಲಿಕೆ
5) ವಿದ್ಯಾರ್ಥಿಗಳಿಗೆ ರೈತನಿಧಿ ಸ್ಕಾಲರ್ಶಿಪ್
6) ಕೃಷಿ ಸಿಂಚಾಯಿ
7) ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳ ವಿತರಣೆ
ಈ ಮೇಲ್ಕಂಡ ಎಲ್ಲ ಯೋಜನೆಗಳು ಈಗಾಗಲೇ ಲಭ್ಯವಿದ್ದು ಇವುಗಳನ್ನು ಹೇಗೆ ಪಡೆದುಕೊಳ್ಳಬೇಕು ಏನಿದರ ಉದ್ದೇಶ ಎಲ್ಲಾ ಮಾಹಿತಿ ಕೆಳಗೆ ಸಂಪೂರ್ಣ ಮಾಹಿತಿ ಇದೆ ಓದೋಣ ಬನ್ನಿ …
1) 5 ಲಕ್ಷ ಬಡ್ಡಿ ರಹಿತ ಸಾಲವನ್ನು ಪಡೆಯಬೇಕೆಂದರೆ ಏನು ಮಾಡಬೇಕು..?
ನೀವು ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಮೊದಲು ನಿಮ್ಮ ಹತ್ತಿರ ಪರಿಪೂರ್ಣವಾದಂತಹ ದಾಖಲಾತಿಗಳು ಇರಬೇಕಾಗುತ್ತದೆ..
ಆ ದಾಖಲಾತಿಗಳು ಪರಿಪೂರ್ಣವಾಗಿದ್ದರೆ ಬ್ಯಾಂಕಿನವರು ನಿಮಗೆ ಯಾವುದೇ ತರಹದ ತೊಂದರೆ ಇಲ್ಲದೆ ಸಾಲವನ್ನು ನೀಡುತ್ತಾರೆ..
ದಾಖಲಾತಿಗಳು ಯಾವವು..?
1) ಮೊದಲನೆಯದಾಗಿ ನೀವು ನಿಮ್ಮ ಹೊಲದ ಕರೆಂಟ್ ವ್ಯಾಲ್ಯೂಯೇಷನ್ ಅಂದರೆ EC ಎಂಬ ಒಂದು ದಾಖಲಾತಿಯನ್ನು ನಿಮ್ಮ ಜಿಲ್ಲೆಯಗಳಿಂದ ಪಡೆದುಕೊಳ್ಳಬೇಕಾಗಿರುತ್ತದೆ..
2) ರೈತನ ಆಧಾರ್ ಕಾರ್ಡ್
3) ಹೊಲದ ಪಹಣಿ ಪತ್ರ
4) ಡಿಸಿಸಿ ಬ್ಯಾಂಕ್ ನಲ್ಲಿ ರೈತನ ಹೆಸರಿನಲ್ಲಿ ಒಂದು ಖಾತೆ
5) ಕಡ್ಡಾಯವಾಗಿ ಇಬ್ಬರು ಜಾಮೀನ್ದಾರರು ಬೇಕು
ಈ ಮೇಲ್ಕಂಡ ದಾಖಲಾತಿಗಳು ಹಾಗೆಯೇ ಇಬ್ಬರು ಜಾಮೀನ್ದಾರರು ನಿಮ್ಮ ಹತ್ತಿರ ಇದ್ದರೆ ನಿಮಗೆ ಯಾವುದೇ ತೊಂದರೆ ಇಲ್ಲದೆ 5 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ ದೊರೆಯುತ್ತದೆ..
ಈ ಮೇಲಿನ ದಾಖಲಾತಿಗಳನ್ನು ನೀವು ಮೊದಲು ಹೊಂದಿಸಿಕೊಂಡು ನಂತರ ಬ್ಯಾಂಕಿಗೆ ಹೋಗಿ ಸಂಪೂರ್ಣವಾದಂತಹ ದಾಖಲಾತಿಗಳನ್ನು ನೀಡಿದರೆ ಅವರು ಮೊದಲು ಅವುಗಳನ್ನು ಪರಿಶೀಲನೆ ಮಾಡುತ್ತಾರೆ..
ಇದಾದ ನಂತರ ನೀವು ನೀಡಿರುವಂತಹ ದಾಖಲಾತಿಗಳು ಪರಿಪೂರ್ಣವಾಗಿದ್ದರೆ ಯಾವುದೇ ತೊಂದರೆ ಇಲ್ಲದೆ ನಿಮಗೆ ಸಾಲವನ್ನು ನೀಡುತ್ತಾರೆ..
ಬಡ್ಡಿ ರಹಿತ ಸಾಲವನ್ನು ಪಡೆಯಬೇಕೆಂದರೆ ಯಾವ ಬ್ಯಾಂಕ್ ಉತ್ತಮವಾಗಿದೆ..?

ಅದುವೇ ಡಿಸಿಸಿ ಬ್ಯಾಂಕ್…
ಹೌದು ಸ್ನೇಹಿತರೆ ಡಿಸಿಸಿ ಬ್ಯಾಂಕ್ ಒಂದು ರೈತರಿಗೆ ಸಹಾಯವಾಗಲೆಂದು ಇದನ್ನು ಕೃಷಿಕರ ಬ್ಯಾಂಕ್ ಎಂದು ಸಹ ಕರೆಯಲಾಗುತ್ತದೆ…
ಬ್ಯಾಂಕಿನಲ್ಲಿ ನಿಮಗೆ ಬಡ್ಡಿ ರಹಿತ ಸಾಲವನ್ನು ನೀಡುತ್ತಾರೆ…
ಬಡ್ಡಿ ರಹಿತ ಸಾಲವನ್ನು ಪಡೆದುಕೊಂಡ ನಂತರ ಪಾಲಿಸಬೇಕಾದ ಕ್ರಮಗಳು ಯಾವುವು..?
ಯಾವುದೇ ತರಹದ ಬಡ್ಡಿ ರಹಿತ ಸಾಲವನ್ನು ಪಡೆಯಬೇಕಾದರೆ ಅದಕ್ಕೆ ಹತ್ತು ಹಲವಾರು ಕಠಿಣ ಕ್ರಮಗಳಿವೆ..
ಈ ಕ್ರಮಗಳಿಗೆ ನೀವು ಬದ್ಧವಾಗಿದ್ದರೆ ಮಾತ್ರ ಬ್ಯಾಂಕಿನವರು ನಿಮಗೆ ಹಣವನ್ನು ನೀಡುತ್ತಾರೆ..
ಮೊದಲನೇದಾಗಿ ಬಡ್ಡಿ ರೈತ ಸಾಲ ತೆಗೆದುಕೊಂಡ ಮೇಲೆ ಒಂದು ವರ್ಷದ ಒಳಗೆ ಪೂರ್ತಿ ಹಣವನ್ನು ಮರುಪಾವತಿಸಿ ಮತ್ತೊಮ್ಮೆ ಹಣವನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ…
ಆಕಸ್ಮಿಕವಾಗಿ ನೀವೇನಾದರೂ ಪೂರ್ತಿ ಹಣವನ್ನು ಮಂಗಳವಾಗಿ ತುಂಬಿ ತೆಗೆದುಕೊಳ್ಳದಿದ್ದರೆ ಒಂದು ವರ್ಷದ ಪೂರ್ತಿ ಬಡ್ಡಿ ಹಣವನ್ನು ನಿಮ್ಮ ಮೇಲೆ ಅವರು ಹಾಕುತ್ತಾರೆ..
ಹೌದು ಸ್ನೇಹಿತರೆ, ಇದೊಂದು ಸವಾಲ ಆಗಿದ್ದು ಈ ಸವಾಲಿಗೆ ನೀವು ಬದ್ಧವಾಗಿದ್ದರೆ ಮಾತ್ರ ಬಡ್ಡಿ ರಹಿತ ಸಾಲವನ್ನು ತೆಗೆದುಕೊಳ್ಳಿ ಅಥವಾ ನಿಮಗೆ ಎಷ್ಟು ಹಣ ಪಾವತಿ ಮಾಡಿ ತೆಗೆದುಕೊಳ್ಳಲು ಸಹಾಯವಾಗುತ್ತದೆ ಅಷ್ಟನ್ನು ಮಾತ್ರ ಬಡ್ಡಿ ರೈತ ಹಣವನ್ನು ಪಡೆದುಕೊಳ್ಳುವುದು ಒಂದು ಉತ್ತಮ ಕರವಾದ ಕೆಲಸವಾಗಿದೆ..
ಬಡ್ಡಿ ರಹಿತ ಸಾಲದ ಪ್ರಾಮುಖ್ಯತೆ…
ಖುಷಿ ರೈತರ ಸಂಕಷ್ಟವನ್ನು ಅರಿತ ರಾಜ್ಯ ಸರ್ಕಾರವು ಕೃಷಿಕರಿಗೆ ಉತ್ತೇಜನವನ್ನು ನೀಡಲು 2023ರ ಬಜೆಟ್ ನಲ್ಲಿ 3, ಲಕ್ಷ ಬಡ್ಡಿ ರಹಿತ ಹಣವನ್ನು ಐದು ಲಕ್ಷದವರೆಗೆ ಏರಿಕೆ ಮಾಡಿದ್ದಾರೆ..
ಅದಕ್ಕಾಗಿ ಹಲವು ರೈತರು ಈ ಉಪಯೋಗವನ್ನು ಪಡೆದುಕೊಂಡು ತಮ್ಮ ಕೃಷಿ ಕೆಲಸಗಳಲ್ಲಿ ಈ ಹಣವನ್ನು ತೊಡಗಿಸಿಕೊಂಡು ಉತ್ತಮ ಸಾಧನೆಯನ್ನು ಕೈಯ ಬೇಕೆಂಬುದು ಕರ್ನಾಟಕ ರಾಜ್ಯ ಸರ್ಕಾರದ ಒಂದು ಉತ್ತಮವಾದಂತಹ ನಿಲುವು ಆಗಿದೆ..
ಅದಕ್ಕಾಗಿ ಪ್ರೀತಿಯ ರೈತ ಬಾಂಧವರೇ ಈ ಹಣವನ್ನು ದುರುಪಯೋಗಪಡಿಸಿಕೊಳ್ಳದೆ ಕೃಷಿ ಕೆಲಸಕ್ಕೆ ಹಾಗೆ ನಿಮ್ಮ ಸ್ವಂತ ಹೊಲದ ಉದ್ದಾರದ ಕೆಲಸಕ್ಕೆ ಬಳಸಿಕೊಂಡರೆ ಈ ಬಡ್ಡಿ ರಹಿತ ಸಾಲ ನೀಡುವ ಯೋಜನೆಯು ಒಂದು ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ..