ಬೆಳೆ ಪರಿಹಾರ ಜಮಾ ಆಗಲಿಲ್ಲವೆಂದು ಆಕ್ರೋಶಗೊಂಡ ರೈತರಿಂದ ಎಚ್ಚರಿಕೆಗೊಂಡ ಬೆಳೆ ಪರಿಹಾರದ ಸಂಸ್ಥೆಗಳು…
ಅರ್ಜಿ ಸಲ್ಲಿಸಿದ ನಂತರ ರೈತರು ತಮ್ಮ ಜಿಪಿಆರ್ಎಸ್ ಮಾಡಿದ್ದರು ಸಹ ಇನ್ನುವರೆಗೂ ಬೆಳೆ ಪರಿಹಾರ ಜಮಾ ಆಗಿಲ್ಲವೆಂದು ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನು ಕೇಂದ್ರ ಸರ್ಕಾರವು ಬೆಳೆ ಪರಿಹಾರ ಜಮಾ ಹಾಗೂ ಅಲ್ಲಿ ಯಾವುದೇ ತರನಾದಂತಹ ಗೋಲ್ಮಾಲ್ ಕೆಲಸಗಳಿಗೆ ಆಸ್ಪದ ನೀಡಬಾರದೆಂದು ಕಟ್ಟೇಚ್ಚರಿಕೆಯನ್ನು ವಹಿಸಿ ರೈತರಿಗೆ ಸರಿಯಾದ ಕ್ರಮದಲ್ಲಿ ಯಾವುದೇ ರೈತರಿಗೆ ತಾರತಮ್ಯ ವಾಗದಂತೆ ಯಾವ ಬೆಳೆಗೆ ಎಷ್ಟು ಬೆಲೆ ಪರಿಹಾರವನ್ನು ನಿಗದಿಪಡಿಸಲಾಗಿದೆಯೋ ಅಷ್ಟು ರೈತರಿಗೆ ಬರುವ ಮುಂದಿನ ತಿಂಗಳಿನಲ್ಲಿ ಜಮಾ ಆಗುವುದು ಎಂದು ಕೇಂದ್ರ ಸರ್ಕಾರವು ತಿಳಿಸಿದೆ..
2022-23 ಸಾಲಿನ ಬೆಳೆ ವಿಮೆ ಬಿಡುಗಡೆ ಯಾಗುತ್ತಿದ್ದು ಈ ವರ್ಷದಲ್ಲಿ ಅತಿ ಹೆಚ್ಚು ಬೆಳೆ ಪರಿಹಾರವನ್ನು ಪ್ರತಿ ಎಕರೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಬೆಳೆ ಆಧಾರದ ಮೇಲೆ ಬೆಳೆ ವಿಮೆಯನ್ನು ನಿರ್ಧರಿಸಲಾಗಿದ್ದು ಯಾವ ಯಾವ ಬೆಳೆಗಳಿಗೆ ಎಷ್ಟು ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ನಿರ್ಧರಿಸಿದ್ದಾರೆ ಎಂಬುದರ ಬಗ್ಗೆ ಇಲ್ಲಿ ನೋಡೋಣ ಬನ್ನಿ.
1) ದ್ರಾಕ್ಷಿ ಬೆಳೆ- 70000 ರಿಂದ 75,000 ವರೆಗೆ
ಬೆಳೆ ವಿಮೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ
2) ತೊಗರಿ ಬೆಳೆ ವಿಮೆ- ಪ್ರತಿ ಎಕರೆಗೆ ರೂ.7,000 ಬಿಡುಗಡೆ
3) ಜೋಳ ಹಾಗೂ ಕಡಲೆ- 2000 ಇಂದ 3500 ವರೆಗೆ ಬೆಳೆ ವಿಮೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ
ಹಾಗೂ ಇನ್ನಿತರ ಬೆಳೆಗಳಿಗೆ ಬೆಳೆ ಪರಿಹಾರವನ್ನು ನೀಡುತ್ತಿದ್ದು ನೀವು ಗಮನಿಸಬೇಕಾದದ್ದು ಏನೆಂದರೆ ಕೇವಲ ಮಳೆ ಆಶ್ರತ ಬೆಳೆಗಳಿಗೆ ಮಾತ್ರ ಬೆಳೆ ವಿಮೆಯನ್ನು ಅತಿ ಹೆಚ್ಚು ನೀಡುತ್ತಾರೆ..
ಅದಕ್ಕಾಗಿ ನೀವು ಮುಂದಿನ ಬಾರಿ ಅರ್ಜಿಯನ್ನು ಸಲ್ಲಿಸಬೇಕಾದರೆ ಬೆಳೆಯುವ ಮಳೆ ಆಶ್ರಿತ ಇದೆ ಎಂದು ಅರ್ಜಿಯಲ್ಲಿ ನಮೂದಿಸಬೇಕಾಗಿರುತ್ತದೆ ಇದರಿಂದ ನಿಮಗೆ ಅತಿ ಹೆಚ್ಚು ಬೆಳೆ ಪರಿಹಾರ ದೊರಕುವಲ್ಲಿ ಸಾಧ್ಯತೆ ಇರುತ್ತದೆ.
ನೀವು ಅರ್ಹತೆಯನ್ನು ಪಡೆದಿದ್ದೀರ ಅಥವಾ ಇಲ್ಲವೋ ಹೇಗೆ ನೋಡುವುದು..?
ಇಲ್ಲಿದೆ ಸಂಪೂರ್ಣ ಮಾಹಿತಿ –
https://play.google.com/store/apps/details?id=com.crop.offcskharif_2021
ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಅರ್ಹತೆಯನ್ನು ನೋಡಿಕೊಳ್ಳಬಹುದಾಗಿದೆ..
ಅಂದರೆ ಈ ಆಪ್ ಅನ್ನು ನೀವು ಮೊದಲು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ.
ಇದಾದ ನಂತರ ಈ ಅಪ್ಲಿಕೇಶನ್ ನಲ್ಲಿ ಕೇಳುವಂತಹ ಸಂಪೂರ್ಣ ಮಾಹಿತಿಯನ್ನು ನೀವು ಒದಗಿಸಬೇಕಾಗುತ್ತದೆ ಅಂದರೆ ರೈತರ ಜಿಲ್ಲೆ ಊರು ಹಾಗೆ ನಿಮ್ಮ ಹೊಲದ ಪಹಣಿ ನಂಬರ್ ಹಾಗೆ ನೀವು ಯಾವ ಬೆಳೆಯ ಅಪ್ಲಿಕೇಶನ್ ಅನ್ನು ಹಾಕಿದ್ದೀರಾ ಅದನ್ನು ನೀವು ನೀಡಬೇಕಾಗುತ್ತದೆ ಅಂದರೆ ಉದಾಹರಣೆಗೆ ಮುಂಗಾರು ಬೆಳೆ ಪರಿಹಾರ ಅಥವಾ ಹಿಂಗಾರು ಬೆಳೆ ಪರಿಹಾರ..
ಈ ಮಾಹಿತಿಯನ್ನು ನೀಡಿದ ನಂತರ ನಿಮಗೆ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಗೊತ್ತಾಗುತ್ತದೆ ನಿಮ್ಮ ಹೊಲದಲ್ಲಿ ಬೆಳೆದಿರುವ ಬೆಳೆ ಜಿಪಿಆರ್ಎಸ್ ಆಗಿದೆಯೋ ಅಥವಾ ಇಲ್ಲವೋ ಎಂಬ ಸಂಪೂರ್ಣ ಮಾಹಿತಿಯೂ ಸಹ ನಿಮಗೆ ದೊರೆಯುತ್ತದೆ..
ಹೆಚ್ಚಿನ ಮಾಹಿತಿಗಾಗಿ-
ವಾತಾವರಣದಲ್ಲಿ ಬದಲಾವಣೆಯಾಗುವುದರಿಂದ ಅಂದರೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಾಗುವುದರಿಂದ ಬೆಳೆಗಳು ಹಾನಿಯ ಒಳಗಾಗುತ್ತಿರುವುದರಿಂದ ರೈತರು ಸಂಕಷ್ಟದಲ್ಲಿ ತನ್ನ ಜೀವನವನ್ನು ಕಳೆಯುತ್ತಿದ್ದಾನೆ.
ಇದನ್ನು ಆರಿತ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೈತನಿಗೆ ಯಾವುದೇ ತರಹದ ಕೊರತೆ ಉಂಟಾಗಬಾರದು ಎಂದು ವರ್ಷಕ್ಕೆ ಎರಡು ಬಾರಿ ಬೆಳೆ ಪರಿಹಾರವನ್ನು ನೀಡಲು ಮುಂದಾಗಿದ್ದಾರೆ..
ಬೆಳೆಯ ಆಧಾರದ ಮೇಲೆ ಬೆಳೆ ಪರಿಹಾರವನ್ನು ನೀಡುತ್ತಿದ್ದು ಅದರಲ್ಲಿ ಮುಂಗಾರು ಬೆಳೆ ಪರಿಹಾರ ಹಾಗೆ ಹಿಂಗಾರು ಬೆಳೆ ಪರಿಹಾರ ಎಂದು ಬೇರೆ ಬೇರೆ ಮಾಡಿ ಅವುಗಳ ಆಧಾರದ ಮೇಲೆ ಪರಿಹಾರವನ್ನು ನೀಡುತ್ತಾ ಬಂದಿದ್ದಾರೆ.
2016ರ ನಂತರ ಯಾವುದೇ ವರ್ಷವೂ ತಪ್ಪದೇ ವರ್ಷಕ್ಕೆ ಎರಡು ಬಾರಿ ಬೆಳೆ ಪರಿಹಾರವನ್ನು ನೀಡುತ್ತಿದ್ದಾರೆ ರೈತರಿಗೆ ಸಹಾಯವಾಗಲೆಂದು ಅಂದರೆ ಈ ಬೆಳೆ ಪರಿಹಾರ ಅತಿ ಸುಲಭವಾಗಿ ದೊರಕಬೇಕೆಂದು ಚಿಂತಿಸಿದ ಸರ್ಕಾರಗಳು ಅಪ್ಲಿಕೇಶನ್ ಅನ್ನು ಯಾವುದೇ ಸೆಂಟರ್ ನಲ್ಲಿ ಹೋಗಿ ಹಾಕಲು ಒಂದು ಉತ್ತಮವಾದ ಕೆಲಸವನ್ನು ಕೈಗೊಂಡಿದ್ದಾರೆ..
ಹಾಗೆಯೇ ರೈತರು ಹೊಲದಲ್ಲಿ ಬೆಳೆದಿರುವಂತ ಬೆಳೆಯ ಜಿಪಿಆರ್ಎಸ್ ಮಾಡಲು ಸಹ ಒಂದು ಅಪ್ಲಿಕೇಶನ್ ಅನ್ನು ತಂದಿದ್ದು ಅಂದರೆ ಹುಟ್ಟು ಹಾಕಿದ್ದು ಅದನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ಕೂಡಲೇ ನೀವು ನಿಮ್ಮ ಹೊಲದಲ್ಲಿ ಬೆಳೆದಿರುವಂತಹ ಬೆಳೆಯ ಫೋಟೋವನ್ನು ಅಪ್ಲೋಡ್ ಮಾಡಲು ಸಹಾಯಕವಾಗುವಂತೆ ಒಂದು ಉತ್ತಮವಾದ ಕಾರ್ಯಕ್ಕೆ ಸೈ ಎಂದಿದ್ದಾರೆ..