2023ರ ಬಜೆಟ್ ನಲ್ಲಿ ಕೃಷಿಕರಿಗೆ ಅತಿ ಹೆಚ್ಚು ಯೋಜನೆಗಳನ್ನು ನೇಮಕ ಮಾಡಲಾಗಿದ್ದು ಈ ಯೋಜನೆಗಳು ಈ ಕೆಳಗಿನಂತಿವೆ ನೋಡೋಣ ಬನ್ನಿ..
1) ಕುಷಿಕರಿಗೆ ಐದು ಲಕ್ಷ ರೂಪಾಯಿವರೆಗೂ ಬಡ್ಡಿ ರೈತ ಸಾಲ ನೀಡಲು ನಿರ್ಧರಿಸಲಾಗಿದೆ
2) ಚಿಕ್ಕ ರೈತರಿಗೆ ಹೊಸ ಹೊಸ ಯೋಜನೆಗಳು ನೇಮಕ ಮಾಡಲಾಗಿದೆ
3) 10 ಲಕ್ಷ ರೂಪಾಯಿ ಮೇಲ್ಪಟ್ಟ ಸಾಲಗಳಿಗೆ ದರ ನಾಲ್ಕು ಪರ್ಸೆಂಟ್ ನಷ್ಟು ಬಡ್ಡಿ ದರವನ್ನು ಸರ್ಕಾರವು ತುಂಬಲು ನಿರ್ಧಾರ ಮಾಡಿದೆ
4) 40 ಲಕ್ಷ ರೈತರಿಗೆ ಸಾಲವನ್ನು ಹೊಸ ಯೋಜನೆಯ ರೂಪದಲ್ಲಿ ನೀಡಲು ನಿರ್ಧಾರ ಮಾಡಲಾಗಿದೆ
5) ಹೊಸದಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ರೂಪದಲ್ಲಿ 10,000 ಬೀಜ ಮತ್ತು ಗೊಬ್ಬರಗಳನ್ನು ಖರೀದಿಸಲು ಸಹಾಯವಾಗಲೆಂದು ಹೊಸ ಯೋಜನೆ ತರಲಾಗಿದೆ
ಹೀಗೆ ಹತ್ತು ಹಲವಾರು ಅನೇಕ ಹೊಸ ಯೋಜನೆಗಳನ್ನು ಕೃಷಿಗೆಂದೆ ಮೀಸಲಿಟ್ಟು ರೈತರಿಗೆ ನಿರೀಕ್ಷೆಯಂತೆ ಅವರಿಗೆ ಹೊಸ ಯೋಜನೆಗಳನ್ನು ತಂದಿದ್ದಾರೆ..
ಬಡ್ಡಿ ರಹಿತ ಸಾಲ ಪಡೆಯುವುದು ಹೇಗೆ..?
ಈ ಬಜೆಟ್ ನಲ್ಲಿ ರೈತರಿಗೆ 5 ಲಕ್ಷ ರೂಪಾಯಿ ವರೆಗೂ ಬಡ್ಡಿ ರೈತ ಸಾಲವನ್ನು ನೀಡಲು ನಿರ್ಧರಿಸಿದ್ದು ಈ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಕೆಲವು ನಿಯಮಗಳು.
ಯಾವ ಬ್ಯಾಂಕ್ ಎಂದು ಚಿಂತಿಸುತ್ತಿದ್ದೀರಾ..?
ಇಲ್ಲಿದೆ ನೋಡಿ
ಅದುವೇ DCC ಬ್ಯಾಂಕ್..
ನಿಮ್ಮ ಹತ್ತಿರ ಸರಿಯಾದ ದಾಖಲೆಗಳು ಇದ್ದರೆ ನಿಮ್ಮ ದಾಖಲೆಗಳ ಪರಿಶೀಲನೆ ಮಾಡಿ 5 ಲಕ್ಷ ರೂಪಾಯಿವರೆಗೂ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದಾರೆ..
ಈ ಬಡ್ಡಿ ರಹಿತ ಹಣವನ್ನು ಪಡೆದುಕೊಳ್ಳಬೇಕೆಂದರೆ ಶರತ್ತುಗಳೇನು.?
1)ನೀವು ಸರಿಯಾದ ಮೊದಲು ಸರಿಯಾದ ದಾಖಲಾತಿಗಳನ್ನು ಬ್ಯಾಂಕಿಗೆ ನೀಡಬೇಕು
2) ವರ್ಷಕ್ಕೆ ಒಮ್ಮೆ ಪೂರ್ತಿ ಹಣವನ್ನು ತುಂಬಿ ರಿನಿವಲ್ ಅನ್ನು ಮಾಡಿಸಿಕೊಳ್ಳಬೇಕು
3) ಯಾವುದೇ ಕಾರಣಕ್ಕೂ ರಿನಿವಲ್ ಅನ್ನು ತಪ್ಪಿಸಲೇಬಾರದು
ಈ ಮೇಲಿನ ಷರತ್ತುಗಳಿಗೆ ನೀವು ಒಪ್ಪಿದಾಗ ಮಾತ್ರ ಬ್ಯಾಂಕಿನವರು ನಿಮಗೆ ಐದು ಲಕ್ಷ ರೂಪಾಯಿವರೆಗೂ ಬಡ್ಡಿ ರಹಿತ ಸಾಲವನ್ನು ನೀಡುತ್ತಾರೆ.
ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮಲ್ಲಿ ಇರಬೇಕಾದ ದಾಖಲಾತಿಗಳು.
1) ಬ್ಯಾಂಕಿನಲ್ಲಿ ಅಕೌಂಟ್ ಹೊಂದಿರಬೇಕು
2) ನಿಮ್ಮ ಹೊಲದ ಪಹಣಿಯನ್ನು ಬ್ಯಾಂಕಿನವರಿಗೆ ನೀಡಲೇಬೇಕು
3) ಬ್ಯಾಂಕಿನ ಶರತ್ತುಗಳಿಗೆ ಬದ್ಧರಾಗಿರಬೇಕು
4) ಸಾಕ್ಷಿದಾರರು ಇಬ್ಬರು ಇರಲೇಬೇಕು
ಬಡ್ಡಿ ರಹಿತ ಸಾಲದ ಪ್ರಾಮುಖ್ಯತೆ..
ರೈತರಿಗೆ ಸಹಾಯವಾಗಲೆಂದು ಈ ಹೊಸ ಯೋಜನೆಯನ್ನು ಬ್ಯಾಂಕಿನಲ್ಲಿ ತಂದಿದ್ದು ಅತಿ ಹೆಚ್ಚು ರೈತರು ಬಡ್ಡಿಗೆ ಹೆದರಿ ಸಾಲವನ್ನು ತೆಗೆದುಕೊಳ್ಳುವುದಿಲ್ಲ ಎಂದು ಅರಿತು ಈಗ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದಾರೆ.
ಇದು ಕೇವಲ ಸೀಮಿತ ಹಣಕ್ಕೆ ಮಾತ್ರ ಅವಲಂಬಣಿಯಾಗಿದ್ದು ಕೇವಲ ಐದು ಲಕ್ಷ ರೂಪಾಯಿವರೆಗೂ ಮಾತ್ರ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದಾರೆ.
ಇದಕ್ಕಿಂತ ಹೆಚ್ಚಿನ ಹಣ ನಿಮಗೆ ಏನಾದರೂ ಬೇಕಾದರೆ ಅತಿ ಕಡಿಮೆ ಪ್ರಮಾಣದ ಬಡ್ಡಿ ದರದಲ್ಲಿ ಸಾಲವನ್ನು ನಿಮಗೆ ನೀಡುತ್ತಾರೆ..
ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರಿಗೆ ಸಹಾಯವಾಗಲೆಂದು ದನದ ಕೊಟ್ಟಿಗೆಗೆ ಸಹಾಯಧನ ನೀಡುತ್ತಿದ್ದಾರೆ..
ಹಾಗೆಯೇ ಹಸು ಸಾಕಾಣಿಕೆ ಮಾಡಲು ಸಹ ಬಡ್ಡಿ ರೈತ ಸಾಲವನ್ನು ನೀಡುತ್ತಿದ್ದು ಈ ಸಾಲವನ್ನು ಹೇಗೆ ಪಡೆದುಕೊಳ್ಳಬೇಕು ಹಾಗೆ ಈ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಾವು ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡೋಣ ಬನ್ನಿ..
ದನದ ಕೊಟ್ಟಿಗೆಯ ಸಹಾಯಧನ ಹೇಗೆ ಪಡೆದುಕೊಳ್ಳಬೇಕು…?
ದನದ ಕೊಟ್ಟಿಗೆಗೆ ಯಾವುದೇ ತರಹದ ಅರ್ಜಿ ಏಕಕಾಲಕ್ಕೆ ಆಹ್ವಾನಿಸುವುದಿಲ್ಲ ಅದಕ್ಕಾಗಿ ನೀವು ದನದ ಕೊಟ್ಟಿಗೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ನಿಮ್ಮ ಸಮೀಪದ ಪಂಚಾಯತಿಗೆ ಹೋಗಿ ದನದ ಕೊಟ್ಟಿಗೆಗೆ ಅರ್ಜಿಗಳು ಲಭ್ಯವೇಯು ಅಥವಾ ಎಲ್ಲವೂ ಎಂಬುದನ್ನು ಮೊದಲು ಅರಿತುಕೊಳ್ಳಬೇಕಾಗುತ್ತದೆ.
ಏಕೆಂದರೆ ಜಿಲ್ಲೆಗಳ ಮೇಲೆ ಬೇರೆ ಬೇರೆ ಪಂಚಾಯಿತಿಗಳಿಗೆ ಕೇವಲ ಬೆರಳಂಕಿ ಅಷ್ಟೇ ಮಾತ್ರ ದನದ ಕೊಟ್ಟಿಗೆಗೆ ಅವಕಾಶಗಳನ್ನು ನೀಡಿದ್ದು ನಿಮ್ಮ ಪಂಚಾಯತಿಯಲ್ಲಿ ಲಭ್ಯವಿದ್ದರೆ ಈಗಲೇ ಹೋಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ನೀವು ದನದ ಕೊಟ್ಟಿಗೆ ಕಡಿಮೆ ಅಂದರೂ ಸಹ 35000 ಇಂದ 75000 ವರೆಗೂ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ…
ಇದಕ್ಕೆ ಬೇಕಾಗಿರುವಂತಹ ಡಾಕ್ಯುಮೆಂಟ್ಸ್ ಗಳು ಯಾವುವು..?
ಅರ್ಜಿ ಸಲ್ಲಿಸಬೇಕೆಂದರೆ ರೈತನ ಆಧಾರ್ ಕಾರ್ಡ್ ರೈತನ ಬ್ಯಾಂಕ್ ಖಾತೆ ಹಾಗೆ ನೀವು ಈಗಾಗಲೇ ಕಟ್ಟಿಸಿರುವಂತಹ ದನದ ಕೊಟ್ಟಿಗೆಯ ಜಿಪಿಆರ್ಎಸ್ ಮಾಡಬೇಕಾಗುತ್ತದೆ ಅದಕ್ಕಾಗಿ ಅದರದೊಂದು ಫೋಟೋವನ್ನು ಗ್ರಾಮ ಪಂಚಾಯತಿಯವರೇ ತೆಗೆದುಕೊಂಡು ಹೋಗುತ್ತಾರೆ ಅದಕ್ಕಾಗಿ ಈ ಮೇಲ್ಕಂಡ ಎಲ್ಲಾ ಡಾಕ್ಯುಮೆಂಟ್ಸ್ ಗಳು ನಿಮ್ಮ ಕಡೆ ಸರಿಯಾಗಿ ಇದ್ದರೆ ನಿಮಗೆ ಯಾವುದೇ ತೊಂದರೆ ಇಲ್ಲದೆ ಹಣವು ನೇರವಾಗಿ ರೈತನ ಖಾತೆಗೆ ಜಮಾ ಆಗುತ್ತದೆ…