ಪೋಲಿಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಒಟ್ಟು 1500+ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಪಿಯುಸಿ ಪಾಸ್ ಆಗಿದ್ದರೆ ಈ ಕೊಡಲೇ ಅರ್ಜಿ ಸಲ್ಲಿಸಿ..! Apply Now..!

ಪೋಲಿಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

WhatsApp Group Join Now
Telegram Group Join Now

ಪ್ರೀತಿಯ ಓದುಗರೇ ಪ್ರಸ್ತುತ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ನಿಮಗೆ ಉಪಯುಕ್ತ ಆಗುವಂತಹ ಮಾಹಿತಿಯನ್ನು ನೀಡುತ್ತದೆ ಇದೀಗ ಪ್ರಸ್ತುತ ಲೇಖನದಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾಂಸ್ಟೇಬಲ್ ಹುದ್ದೆಗಳ ಬಗ್ಗೆ ಮಾಹಿತಿ..!

Post Office ನಲ್ಲಿ 10ನೇ ತರಗತಿ ಪಾಸಾದವರಿಗೆ ಸುವರ್ಣ ಉದ್ಯೋಗಾವಕಾಶ..! ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ಅರ್ಜಿ ಸಲ್ಲಿಸುವುದು ಹೇಗೆ ಈಗಲೇ ತಿಳಿಯಿರಿ..! Click Here..!Click Here
More Information Click Here
job news


ಹೌದು ಸ್ನೇಹಿತರೆ 1500 ಅಧಿಕ ಹುದ್ದೆಗಳಿಗೆ ಅರ್ಜಿಯನ್ನು ಅವನಿಸಲು ಸಜಾತಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

Upcoming Karnataka Police Job Recruitment 2024:

ರಾಜ್ಯ ಸರ್ಕಾರವು 1500 ಪೊಲೀಸ್‌ ಹುದ್ದೆ ಭರ್ತಿಗೆ ಸಮ್ಮತಿಸಿದೆ. ಈ ಕುರಿತು ಲೇಟೆಸ್ಟ್‌ ಮಾಹಿತಿ ಈಗ ಹೊರಬಿದ್ದಿದೆ. ಆದರೆ ಕಳೆದ ವರ್ಷ ಹೇಳಿದ್ದ 6000 ಪೇದೆಗಳ ನೇಮಕ ಕ್ರಮದ ಕುರಿತು ಯಾವುದೇ ಪ್ರಗತಿ ಗೃಹ ಇಲಾಖೆಯಿಂದ ನಡೆದಿರುವುದು ಕಾಣಿಸುತ್ತಿಲ್ಲ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ), ಆರ್‌ಪಿಸಿ ವಿಭಾಗದಲ್ಲಿ ಖಾಲಿ ಇರುವ 1500 ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ.

2023-24ನೇ ಸಾಲಿನ ಕೆಎಸ್‌ಆರ್‌ಪಿ, ಆರ್‌ಪಿಸಿ (ಪುರುಷ, ಮಹಿಳಾ) 1500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಇದರಲ್ಲಿ ಕ್ರೀಡಾ ಪಟುಗಳಿಗೆ ಶೇಕಡ.2, ಕಲ್ಯಾಣ ಕರ್ನಾಟಕೇತರ ಒಟ್ಟು 30 ಹುದ್ದೆಗಳು, ಸಿಆರ್‌ಪಿಸಿ ಕಲ್ಯಾಣ ಕರ್ನಾಟಕ 614 ಹುದ್ದೆಗಳಲ್ಲಿ 12 ಹುದ್ದೆಗಳು ಕ್ರೀಡಾಪಟುಗಳಿಗೆ ಶೇಕಡ.2 ರಂತೆ ಮೀಸಲಿರಿಸಲಾಗಿದೆ.

3064 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗೆ ಪರೀಕ್ಷೆ ಅಂಕ ಪ್ರಕಟ

2022ನೇ ಸಾಲಿನಲ್ಲಿ ಅಧಿಸೂಚಿಸಿದ್ದ 3064 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ನಿನ್ನೆಯಷ್ಟೇ ಪೊಲೀಸ್‌ ಇಲಾಖೆಯು ಲಿಖಿತ ಪರೀಕ್ಷೆಗಳ ಅಂಕಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಚೆಕ್‌ ಮಾಡಲು, ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್‌ ಅನ್ನು ಕ್ಲಿಕ್ ಮಾಡಿರಿ.
ರಾಜ್ಯದಲ್ಲಿ 20,000 ಪೊಲೀಸ್‌ ಹುದ್ದೆಗಳು ಖಾಲಿ

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಬರೋಬರಿ ಇನ್ನು 20,000 ಹುದ್ದೆಗಳು ಖಾಲಿ ಇವೆ. ಇವುಗಳ ಪೈಕಿ 2500 ಪೇದೆಗಳ ನೇಮಕಕ್ಕೆ ಆರ್ಥಿಕ ಇಲಾಖೆ ಕಳೆದ 2023 ರಲ್ಲೇ ಅನುಮೋದನೆ ನೀಡಿತ್ತು.

ಈ ಹುದ್ದೆಗಳ ನೇಮಕಕ್ಕೆ ಇನ್ನೂ ಅಧಿಕೃತ ಚಾಲನೆ ಸಿಕ್ಕಿಲ್ಲ. ಅಲ್ಲದೇ 3500 ಪೊಲೀಸ್‌ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದರು. ಆದರೆ ಅದರ ಕುರಿತು ಸಹ ಯಾವುದೇ ಅಪ್‌ಡೇಟ್‌ ಇನ್ನು ಸಿಕ್ಕಿಲ್ಲ.

ಹೀಗೆ ಒಟ್ಟು 6000 ಪೇದೆಗಳ ನೇಮಕ ಕ್ರಮದ ಕುರಿತು ಒಂದು ವರ್ಷದ ಹಿಂದೆಯೇ ಸುದ್ದಿ ನೀಡಲಾಗಿತ್ತು. ಆದರೆ ಯಾವುದೇ ಪ್ರಗತಿ ಈ ಹುದ್ದೆಗಳ ಭರ್ತಿ ಕಾರ್ಯದಲ್ಲಿ ಗೃಹ ಇಲಾಖೆಯಿಂದ ಆಗಿಲ್ಲ.

ಅಲ್ಲದೇ 10 ಸಾವಿರ ಪೇದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಕುರಿತು ಸಚಿವರು ಹೇಳಿದ್ದರು. ಇದು ಸಹ ಪ್ರಗತಿಯ ಹಾದಿ ಹಿಡಿದಿಲ್ಲ. ಇದನ್ನು ಗಮನಿಸಿರುವ ಕರ್ನಾಟಕ ನಿರುದ್ಯೋಗಿಗಳು, ಪೊಲೀಸ್‌ ಉದ್ಯೋಗ ಆಕಾಂಕ್ಷಿಗಳು ಅಸಮಾಧಾನ ಹೊರಹಾಕಿದ್ದಾರೆ.

ಹೊಸ 400 ಪಿಎಸ್‌ಐ ಗೆ ಪ್ರಸ್ತಾವನೆ ಸಿದ್ದವಾಗಿದೆ ಎಂದಿದ್ದ ಸಚಿವರು

ಗೃಹ ಸಚಿವ ಡಾ ಪರವೇಶ್ವರ್‌ ರವರು ಕಳೆದ ವರ್ಷವೇ 400 0 ಪಿಎಸ್‌ಐ ನೇಮಕಕ್ಕೆ ಪ್ರಸ್ತಾವನೆ ಸಿದ್ಧವಾಗಿದೆ, ಆದರೆ 545 ಪಿಎಸ್‌ಐ’ಗೆ ಪರೀಕ್ಷೆ ಬರೆದವರು ಸೇವಾ ಹಿರಿತನ ಹೋಗುತ್ತದೆ ಎಂಬ ಕಾರಣಕ್ಕೆ ಮತ್ತೆ ನ್ಯಾಯಾಲಯಕ್ಕೆ ಮೊರೆ ಹೋಗುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ಈ ಪ್ರಕ್ರಿಯೆ ತಡೆ ಹಿಡಿದಿದ್ದೇವೆ. ಈ ಕೊರತೆ / ಸೇವೆ ತುಂಬುವ ಹಿನ್ನೆಲೆಯಲ್ಲಿ ಎಎಸ್‌ಐಗಳಿಗೆ ಬಡ್ತಿ ನೀಡಲು ಕಡತ ಸಿದ್ಧವಾಗುತ್ತಿದೆ. 700 ಎಎಸ್‌ಐಗಳಿಗೆ ಬಡ್ತಿ ಸಿಕ್ಕಲ್ಲಿ ಅವರ ಕೆಳಹಂತದ ಮುಖ್ಯ ಪೇದೆ ಹಾಗೂ ಪೇದೆಗಳಿಗೂ ಬಡ್ತಿ ಸಿಗಲಿದೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *