ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಾವಕಾಶ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೇ ಪ್ರಸ್ತುತ ಈ ನಮ್ಮ ಜ್ಞಾನ ಗರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ನಿಮಗೆ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
ಹೌದು ಸ್ನೇಹಿತರೆ ಒಟ್ಟು 400 ಕ್ಕೆ ಹುದ್ದೆಗಳಿಗೆ ಅರ್ಜಿಯನ್ನು ಆಗಮಿಸಿದ್ದು ಅರ್ಜಿ ಸಲ್ಲಿಸುವುದು ಹೇಗೆ..?
ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಈಗಲೇ ತಿಳಿದುಕೊಳ್ಳಿ
ನಮಸ್ಕಾರ ಕರ್ನಾಟಕದ ನಮಸ್ಕಾರಗಳು ಜನತೆಗೆ ಸ್ನೇಹಿತರೆ ಇವತ್ತಿನ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ವಿದ್ಯುತ್ ಇಲಾಖೆಯಲ್ಲಿ 400+ ಅಧಿಕ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಅರ್ಹತೆ ಹೊಂದಿರುವಂತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿಯನ್ನು ನೀಡುವ ಮೂಲಕ ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು, ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ವಯೋಮಿತಿ ಹಾಗೂ ಶೈಕ್ಷಣಿಕ ಅರ್ಹತೆಗಳು ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ಅಧಿಸೂಚನೆಯಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಇಲಾಖೆ ಹೆಸರು: ಪವರ್ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ಹುದ್ದೆಗಳ ಸಂಖ್ಯೆ: 435 ಹುದ್ದೆಗಳು
ಹುದ್ದೆಯ ಹೆಸರು: ಇಂಜಿನಿಯರ್ ಟ್ರೈನಿ
ಉದ್ಯೋಗ ಸ್ಥಳ: ಭಾರತದಲ್ಲಿ
ಅಪ್ಲಿಕೇಶನ್ ಬಗೆ: ಆನ್ಲೈನ್ ನಲ್ಲಿ
ಹುದ್ದೆಗಳ ವಿವರ:
• ವಿದ್ಯುತ್: 331 ಹುದ್ದೆಗಳು
• ಸಿವಿಲ್: 53 ಹುದ್ದೆಗಳು
• ಗಣಕ ಯಂತ್ರ ವಿಜ್ಞಾನ: 37 ಹುದ್ದೆಗಳು
• ಎಲೆಕ್ಟ್ರಾನಿಕ್ಸ್: 14 ಹುದ್ದೆಗಳು
ಸಂಬಳದ ಮಾಹಿತಿ:
ಪವರ್ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 40000 – 1,60,000/- ಸಂಬಳವನ್ನು ನೀಡಲಾಗುವುದು.
ವಯೋಮಿತಿ ಮಾಹಿತಿ:
ಪವರ್ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿಯ ಅಧಿಸೂಚನೆಯ ಪ್ರಕಾರ ಆಯ್ಕೆಯಾದಂತಹ ಅಭ್ಯರ್ಥಿಗೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆಯ ಮಾಹಿತಿ:
• OBC ಅಭ್ಯರ್ಥಿಗಳಿಗೆ: 3 ವರ್ಷಗಳು
• SC ಮತ್ತು ST ಅಭ್ಯರ್ಥಿಗಳಿಗೆ: 5 ವರ್ಷಗಳು
• PWBD ಅಭ್ಯರ್ಥಿಗಳಿಗೆ: 10 ವರ್ಷಗಳ ಕಾಲ ವಯೋಮಿತಿ ಸಡಿಲಿಕೆಯನ್ನು ನಿಡುತ್ತದೆ.
ಅರ್ಜಿ ಶುಲ್ಕದ ಮಾಹಿತಿ:
• ಎಲ್ಲಾ ಇತರ ಅಭ್ಯರ್ಥಿಗಳಿಗೆ: 500/- ರೂ
• SC/ST/PwBD/ ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
• ಪಾವತಿಸುವ ವಿಧಾನ: ಆನ್ಲೈನ್ ನಲ್ಲಿ ಇರುತ್ತದೆ
ಶೈಕ್ಷಣಿಕ ಅರ್ಹತೆ ಮಾಹಿತಿ:
PGCIL ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು B.Sc BE/ B.Tech ಮುಗಿಸಿರಬೇಕು.
ಆಯ್ಕೆ ವಿಧಾನದ ಮಾಹಿತಿ:
• GATE 2024 ಸ್ಕೋರ್ ಆಧರಿಸಿ.
• ವೈಯಕ್ತಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಹುದ್ದೆಯ ಪ್ರಮುಖ ದಿನಾಂಕಗಳು:
• ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12/06/2024
• ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04/07/2024
ಹುದ್ದೆಯ ಪ್ರಮುಖ ಅರ್ಜಿಯನ್ನು ಸಲ್ಲಿಸುವ ಲಿಂಕ್: https://careers.powergrid.in/recruitment-nextgen/h/login.aspx
ಸ್ನೇಹಿತರೆ ಆಸಕ್ತ ಅಭ್ಯರ್ಥಿಗಳು ಕೊಟ್ಟ ದಿನಾಂಕದ ವಳಗಾಗಿ ಅರ್ಜಿಯನ್ನು ಸಲ್ಲಿಸಿ.