ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅರ್ಜಿ ಸಲ್ಲಿಕೆ ಆರಂಭ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉಪಯುಕ್ತವಾಗುವಂತ ಮಾಹಿತಿ ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಈ ಲೇಬರ್ ಕಾರ್ಡ್ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೆಯೇ ಅರ್ಜಿ ಸಲ್ಲಿಸಲು ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಅರ್ಜಿ ಸಲ್ಲಿಸಲು ಬೇಕಾಗಿರುವ ಡೈರೆಕ್ಟ್ ಲಿಂಕ್ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
2023 – 24 ನೇ ಸಾಲಿನಲ್ಲಿ ಪ್ರಸ್ತುತವಾಗಿ ಯಾರೆಲ್ಲಾ ಶಿಕ್ಷಣವನ್ನು ಮಾಡುತ್ತಿದ್ದಾರೋ ಅಂತವರಿಗೆ ಕಾರ್ಮಿಕರ ವಿದ್ಯಾರ್ಥಿ ವೇತನದ ಹಣ ಕೂಡ ದೊರೆಯುತ್ತದೆ.
ಆ ಒಂದು ಹಣದಿಂದ ನೀವು ಕೂಡ ನಿಮ್ಮ ಕಾಲೇಜಿನ ಶುಲ್ಕ ಅಥವಾ ಶಾಲಾ ಶುಲ್ಕವನ್ನು ಕೂಡ ಪಾವತಿಸಿ. ಮುಂದಿನ ಶಿಕ್ಷಣವನ್ನು ಕೂಡ ಮುಂದುವರಿಸಬಹುದಾಗಿದೆ. ಈ ಒಂದು ವಿದ್ಯಾರ್ಥಿ ವೇತನದ ಉದ್ದೇಶ ಏನೆಂದರೆ, ವಿದ್ಯಾರ್ಥಿಗಳಿಗೆ ಸಹಾಯವಾಗಬೇಕು.
ವಾರ್ಷಿಕವಾಗಿಯೂ ಕೂಡ ಪ್ರತಿ ವರ್ಷವೂ ಈ ವಿದ್ಯಾರ್ಥಿ ವೇತನ ಆವರ ಖಾತೆಗೆ ಜಮಾ ಆಗಬೇಕು, ಯಾವ ಶಿಕ್ಷಣವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹತೆಯನ್ನು ಹೊಂದಿರುತ್ತದೆ, ಆ ಒಂದು ಶಿಕ್ಷಣದ ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ಪ್ರತಿ ತಿಂಗಳು ಕೂಡ ದೊರೆಯುತ್ತದೆ.
ಯಾರಿಗೆಲ್ಲ ಈ ವಿದ್ಯಾರ್ಥಿವೇತನ ದೊರೆಯುತ್ತದೆ.
ಸ್ನೇಹಿತರೆ ಈ ಒಂದು ವಿದ್ಯಾರ್ಥಿ ವೇತನ ಯಾರು ಕಾರ್ಮಿಕರ ಮಕ್ಕಳಾಗಿರುತ್ತಾರೆ ಅಂತಹ ವಿದ್ಯಾರ್ಥಿಗಳಿಗೆ ಈ ಒಂದು ಹಣ ಅವರ ಖಾತೆಗೆ ಜಮಾ ಆಗುತ್ತದೆ. ಮತ್ತು ಕೆಲವೊಂದು ಅರ್ಹತಾ ಮಾನದಂಡಗಳನ್ನು ಅವರು ಹೊಂದಿರಬೇಕಾಗುತ್ತದೆ. ತಮ್ಮ ಪೋಷಕರಲ್ಲಿ ಯಾರಾದರೂ ಒಬ್ಬರು ಕೂಡ ಕಾರ್ಮಿಕರಾಗಿರಲೇಬೇಕು, ಕಡ್ಡಾಯವಾಗಿ ಈ ಒಂದು ನಿಯಮ ಪಾಲಿಸತಕ್ಕದ್ದು. ಹಾಗೂ ಅವರ ಪೋಷಕರು ಕಾರ್ಮಿಕರ ಕಾರ್ಡ್ಗಳನ್ನು ಕೂಡ ಹೊಂದಿರಬೇಕಾಗುತ್ತದೆ.
ಈ ಅರ್ಹತೆ ಹೊಂದಿದವರಿಗೆ ಶೈಕ್ಷಣಿಕ ಹಣ ಸಹಾಯ.
• ಕಾರ್ಮಿಕರ ಕಾರ್ಡ್ಗಳನ್ನು ಮೊದಲಿಗೆ ಹೊಂದಿರಬೇಕಾಗುತ್ತದೆ.
• ಅವರ ಪೋಷಕರು ಕಾರ್ಮಿಕರಾಗಿರಬೇಕು.
• ಅವರ ಕುಟುಂಬದ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
• ಕಾರ್ಮಿಕರ ಕುಟುಂಬದ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಹಣ.
• 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಡಿಗ್ರಿ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿ ದರರು ಅರ್ಹರಾಗಿರುತ್ತಾರೆ. ಈ ಎಲ್ಲಾ ಶಿಕ್ಷಣಗಳಲ್ಲಿ ಯಾವುದಾದರು ಒಂದು ಶಿಕ್ಷಣವನ್ನು ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಹಣದ ಸಹಾಯ ಕೂಡ ದೊರೆಯುತ್ತದೆ.
ಅರ್ಜಿ ಸಲ್ಲಿಕೆಗೆ ಈ ದಾಖಲಾತಿಗಳು ಬೇಕು.
• ತಮ್ಮ ಪೋಷಕರ ಕಾರ್ಮಿಕರ ಕಾರ್ಡ್ ಅರ್ಜಿ ಸಲ್ಲಿಕೆಗೆ ಬೇಕಾಗುತ್ತದೆ.
• ಕಾರ್ಮಿಕರ ಇಲಾಖೆಯಿಂದ ಕೂಡ ತಮ್ಮ ಪೋಷಕರು ನೋಂದಣಿ ಕಾರ್ಡ್ಗಳನ್ನು ಕೂಡ ಪಡೆದಿರಬೇಕು.
• ವಿದ್ಯಾರ್ಥಿಯ ಆಧಾರ್ ಕಾರ್ಡ್
• ಪೋಷಕರ ಆಧಾರ್ ಕಾರ್ಡ್ ಗಳು
• ಐಡಿ ಕಾರ್ಡ್
• ಬ್ಯಾಂಕ್ ಖಾತೆ ಮಾಹಿತಿ
• ವಿಳಾಸ ಪುರಾವೆ
• ಶಿಕ್ಷಣ ಮಾಡುತ್ತಿರುವಂತಹ ಪ್ರಸ್ತುತ ವ್ಯಾಸಂಗ ಪ್ರಮಾಣ ಪತ್ರ
• ತಮ್ಮ ಪೋಷಕರು ಉದ್ಯೋಗದ ದೃಢೀಕರಣ ಪತ್ರ ಹಾಗೂ ಸ್ವಯಂ ಘೋಷಣೆ ದೃಢೀಕರಣ ಪತ್ರವನ್ನು ಹೊಂದಿರತಕ್ಕದ್ದು.
ಅರ್ಜಿ ಸಲ್ಲಿಕೆಯ ಮಾಹಿತಿ !
• ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳು ಕೂಡ ಕರ್ನಾಟಕ ಕಾರ್ಮಿಕ ಇಲಾಖೆ ಮಂಡಳಿಯಿಂದ ಜಾರಿಯಾಗಿರುವಂತಹ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ.
• ಆ ಒಂದು ವೆಬ್ಸೈಟ್ನ ಲಿಂಕ್ ಇಲ್ಲಿದೆ ನೋಡಿ. ಈ ಒಂದು https://klwbapps.karnataka.gov.in/ ಲಿಂಕ್ ಮುಖಾಂತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ.
• ಲಿಂಕ್ ಕ್ಲಿಕ್ ಮಾಡಿದ ಬಳಿಕ ವಿದ್ಯಾರ್ಥಿ ಲಾಗಿನ್ ಮಾಡಿ ಎಂಬುದನ್ನು ಕ್ಲಿಕ್ಕಿಸಿ.
• ಇದೇ ಬಾರಿಗೆ ಅರ್ಜಿಯನ್ನು ಈ ಒಂದು ವೆಬ್ಸೈಟ್ ಮುಖಾಂತರ ಸಲ್ಲಿಸುತ್ತಿದ್ದೀರಿ ಎಂದರೆ, ನೀವು ಲಾಗಿನ್ ಆಗಬೇಕು, ಮೊಬೈಲ್ ಸಂಖ್ಯೆ ಹಾಗೂ ನಿಮ್ಮ ಹೆಸರನ್ನು ನೋಂದಾಯಿಸಿ ನೋಂದಾವಣೆಯಾಗಿ.
• ಈಗಾಗಲೇ ಒಂದು ವಿದ್ಯಾರ್ಥಿ ವೇತನದ ಮುಖಾಂತರ ಹಣ ಪಡೆದಿದ್ದೇವೆ ಎನ್ನುವವರು ಈ ಒಂದು ವಿದ್ಯಾರ್ಥಿ ವೇತನದ ವೆಬ್ಸೈಟ್ ಗೆ ಲಾಗಿನ್ ಆಗುವ ಅವಶ್ಯಕತೆ ಇಲ್ಲ.
• ನಂತರ ಕೇಳಲಾಗುವಂತಹ ಎಲ್ಲಾ ದಾಖಲಾತಿಗಳ ಮಾಹಿತಿ ಹಾಗೂ ವಿಷಯವನ್ನು ನೀವು ಈ ಒಂದು ಪುಟದಲ್ಲಿ ಒದಗಿಸಲೇಬೇಕು. ಕಡ್ಡಾಯವಾಗಿ ಎಲ್ಲಾ ವಿದ್ಯಾರ್ಥಿಗಳು ಕೂಡ ಒಂದು ಬಾರಿ ಎಚ್ಚರಿಕೆಯಿಂದ ಓದಿಕೊಳ್ಳುವ ಮುಖಾಂತರ ಅರ್ಜಿ ಸಲ್ಲಿಕೆಯ ಮಾಹಿತಿಯನ್ನು ಕೂಡ ತುಂಬಿರಿ.
• ಎಲ್ಲಾ ಅರ್ಜಿ ಸಲ್ಲಿಕೆಯ ದಾಖಲಾತಿ ಭರ್ತಿ ಮಾಡಿದ ಬಳಿಕ ಸಲ್ಲಿಸು ಎಂಬುದನ್ನು ಕ್ಲಿಕ್ಕಿಸಿ.