ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್ವೆಲ್ ಪಡೆದುಕೊಳ್ಳಿ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ರೈತ ಬಾಂಧವರಿಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಚಿಕ್ಕ ಹಾಗೂ ಅತಿ ಚಿಕ್ಕ ರೈತರಿಗೆ ಸಹಾಯವಾಗಲೆಂದು ಗಂಗಾ ಕಲ್ಯಾಣ ಯೋಜನಾ ಅಡಿಯಲ್ಲಿ ಸರ್ಕಾರವೇ ಬೋರ್ವೆಲ್ ಕೊರೆಸುವ ಸಹಾಯಧನವನ್ನು ನೀಡುತ್ತಿದ್ದು,
ಈ ಯೋಜನೆಯು ಯಾರಿಗೆ ಸಿಗಲಿದೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಹೇಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೆ ಯಾವ ಯಾವ ಜಿಲ್ಲೆಗಳಲ್ಲಿ ಈ ಗಂಗಾ ಕಲ್ಯಾಣ ಯೋಜನೆ ಚಾಲ್ತಿಯಲ್ಲಿದೆ ಈಗ ತಿಳಿದುಕೊಳ್ಳೋಣ ಬನ್ನಿ..!
BSF ಭಾರತೀಯ ಸೇನಾ ನೇಮಕಾತಿಯಲ್ಲಿ 2000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ..! 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಅರ್ಜಿ ಸಲ್ಲಿಸಬಹುದಾಗಿದೆ..! Click Here Now..! | Click Here |
More Information | Click Here |
ಹೌದು ಸ್ನೇಹಿತರೆ ಗಂಗಾ ಕಲ್ಯಾಣ ಯೋಜನೆಯು ಚಿಕ್ಕ ಹಾಗೂ ಅತಿ ಚಿಕ್ಕ ರೈತರಿಗೆ ಸಹಾಯವಾಗಲೆಂದು ಬಿಡುಗಡೆ ಆಗಿರುವಂತಹ ಯೋಜನೆಯಾಗಿದ್ದು ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ..
ಕರ್ನಾಟಕ ಮಿನಿರಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಯೋಜನೆ ಅಡಿ ಪ್ರಾರಂಭಿಸಲಾಗಿದ್ದು ಈ ಯೋಜನೆ ಮೂಲಕ ಕೃಷಿಯ ಬೆಳೆಯ ಹೊಲಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ . ಇದರಲ್ಲಿ ಕೊಳವೆಬಾವಿ ಮತ್ತು ತೆರೆದ ಬಾವಿಯನ್ನು ರಚಿಸಲು , ಪಂಪ್ ಸೆಟ್‌ಗಳನ್ನು ಮತ್ತು ಎಕ್ಸೆಸರೀಸ್ ಗಳನ್ನು ಸ್ಥಾಪಿಸುವುದು ಸೇರಿದೆ.
ಪ್ರತಿ ಬೋರ್ವೆಲ್ ಯೋಜನೆಯ ( Free Borewell ) ಸರ್ಕಾರವು 1.50 ಲಕ್ಷ ರೂಪಾಯಿ ವರಿಗೆ ಸಂಪೂರ್ಣ ಉಚಿತ ಸಹಾಯಧನವನ್ನು ನಿಗದಿ ಮಾಡಿದ್ದು ಈ ಹಣವನ್ನು ಬೋರ್ವೆಲ್ ಕೊರೆಯಲು ,
ಪಂಪ್ ಸರಬರಾಜು ಮತ್ತು ವಿದ್ಯುತ್ ಉಪಕರಣ ಅಳವಡಿಸಲು ನೀಡಲಾಗುತ್ತಿದೆ. ಬೆಂಗಳೂರು ಅರ್ಬನ್ ,ಬೆಂಗಳೂರು ಗ್ರಾಮೀಣ ,ರಾಮನಗರ ,ಕೋಲಾರ , ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ 3.5 ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗುತ್ತಿದೆ.
Ganga Kalyana Yojana Karnataka Eligibility | ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡ
• ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ರೂ 90,000 ಹಾಗೂ ನಗರ ಪ್ರದೇಶದಲ್ಲಿ 1.03 ಲಕ್ಷ ಮೀರಿರಬಾರದು
• ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
• ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು
• ಅರ್ಜಿದಾರರು ಕನಿಷ್ಠ ಅಥವಾ ಸಣ್ಣ ಕೃಷಿಕರಾಗಿರಬೇಕು.
Ganga Kalyana Yojana Required Documents | ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
• ಯೋಜನೆಯ ಅರ್ಜಿದಾರರ ಪ್ರಮಾಣ ಪತ್ರ
• ಜಾತಿ ಪ್ರಮಾಣ ಪತ್ರ
• ಆದಾಯ ಪ್ರಮಾಣ ಪತ್ರ
• ಆಧಾರ್ ಕಾರ್ಡ್
• ಬಿಪಿಎಲ್ ಕಾರ್ಡ್
• ಹೊಲದ ಹೊಲದ ಕೂಡುವಿಕೆ ರಸ್ತೆಯ ಕಡತದ ನಕಲು
• ಬ್ಯಾಂಕ್ ಪಾಸ್ ಪುಸ್ತಕ ನಕಲು
• ಭೂ ಕಂದಾಯ ರಸಿದಿ ಪಾವತಿ
• ಸ್ವಯಂ ಘೋಷಣಾ ಪತ್ರ
• ಸುರಕ್ಷಿತ ಸ್ವಯಂ ಘೋಷಣ ಪತ್ರ.
Ganga Kalyana Yojana Karnataka Apply Online | ಅರ್ಜಿ ಸಲ್ಲಿಸುವ ವಿಧಾನ
• ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ – https://kmdc.karnataka.gov.in/31/ganga-kalyana-schmeme/en
• ಯೋಜನೆಯ ಪುಟ ಆಯ್ಕೆ ಮಾಡಿ
• ಅರ್ಜಿಗೆ ಸಂಬಂಧಿಸಿದ ಮುಖಪುಟ ಪ್ರದರ್ಶಿತವಾಗುತ್ತದೆ.
• ಎಲ್ಲಾ ಅವಶ್ಯಕತೆ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ
• ಈ ಮೇಲೆ ತಿಳಿಸಿದ ಸಂಬಂಧಿತ ದಾಖಲೆಯನ್ನು ಅಪ್ಲೋಡ್ ಮಾಡಿ
• ಕೊನೆಯದಾಗಿ ಸಬ್ಮಿಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ