ವಾಯುಪಡೆಯಲ್ಲಿ ಅಗ್ನಿವೀರ ಹುದ್ದೆಗಳಿಗೆ ನೇಮಕಾತಿ ಅರ್ಜಿ ಸಲ್ಲಿಕೆ ಆರಂಭ :
ಈ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು! ಆಯ್ಕೆಯಾದವರಿಗೆ ₹40,000/- ವೇತನ
ಭಾರತ ದೇಶದ ರಕ್ಷಣೆಯಲ್ಲಿ ಅತಿ ಮುಖ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಅಂತಹ ವಾಯುಪಡೆಯಲ್ಲಿ ದ್ವಿತೀಯ ಪಿಯುಸಿ ಪಾಸಾದವರಿಗೆ ಹಾಗೂ ಡಿಪ್ಲೋಮೋ ಪಾಸಾದವರಿಗೆ ಅಗ್ನಿದೇವತೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಕರೆಯಲಾಗಿದೆ. ಮಹಿಳೆಯರಿಗೂ ಅತ್ಯುತ್ತಮ ಅವಕಾಶವಿದ್ದು ಆಸಕ್ತರು ಬೇಗನೆ ಅರ್ಜಿ ಸಲ್ಲಿಸಿ.
ನಮ್ಮ ಈ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು.
Job news | Agniveer 2024 |
Requirement | Apply Now |
ನಮ್ಮ ಈಜಾಲತಾಣದಲ್ಲಿ ದಿನನಿತ್ಯ ಅನೇಕ ರೀತಿಯ ಹಾಗೂ ಅನೇಕ ವಿಷಯಗಳಿಗೆ ಸಂಬಂಧಿಸಿದಂತಹ ಪ್ರಮುಖ ಮಾಹಿತಿಗಳನ್ನು ನೀಡುತ್ತಿದ್ದು,
ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತಹ ಅಪ್ಡೇಟ್ಸ್ಗಳು ಮಾಹಿತಿಗಳು ಹಾಗೂ ವಿದ್ಯಾರ್ಥಿ ವೇತನದ ಮಾಹಿತಿಗಳು ಸೇರಿದಂತೆ ಸರ್ಕಾರಿ ಉದ್ಯೋಗಗಳ ಮಾಹಿತಿಗಳನ್ನು ನೀಡುತ್ತಿದ್ದು ಇವತ್ತಿನ ಈ ಲೇಖನದಲ್ಲಿ ನಾವು ವಾಯುಪಡೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವಂತ ಅಗ್ನಿವೀರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡುತ್ತಿದ್ದೇವೆ.
Air force Agniveer Recruitment 2024 –
ಭಾರತೀಯ ವಾಯುಪಡೆಯಲ್ಲಿ ಅಗ್ನಿ ವೀರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಈ ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದರೆ ಶಿಕ್ಷಣ ಮಂಡಳಿಯಿಂದ 12ನೇ ತರಗತಿ, ಡಿಪ್ಲೋಮಾ ಪದವೀಧರರು ಹಾಗೂ ಕೈಗಾರಿಕಾ ತರಬೇತಿ ಪಡೆದಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿದ್ದಾರೆ.
ಅರ್ಜಿ ಸಲ್ಲಿಸಲು ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ತಿಗಳು ಮಾತ್ರ ಅರ್ಹರು ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ವಯೋಮಿತಿ ಅರ್ಹತೆಗಳ ಮಾಹಿತಿ –
ವಾಯುಪಡೆಯ ಈ ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 3 ಜುಲೈ 2004 ರಿಂದ 3 ಜನವರಿ 2008ರ ನಡುವಿನ ಅವಧಿಯಲ್ಲಿ ಜನಿಸಿರುವವರು ಮಾತ್ರ ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಿದ್ದಾರೆ. ಅಂದರೆ ಗರಿಷ್ಠ 21 ವರ್ಷದ ವಯೋಮಿತಿ ಒಳಗಡೆ ಇರಬೇಕು.
ಆಯ್ಕೆಯಾದವರಿಗೆ ಸಿಗುವ ವೇತನ ಶ್ರೇಣಿ :
ಈ ನೇಮಕಾತಿಯಲ್ಲಿ ಅಂತಿಮವಾಗಿ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ಮೊದಲ ವರ್ಷದಲ್ಲಿ ರೂ.30000 ವೇತನ ಸಿಗಲಿದೆ. ಎರಡನೇ ವರ್ಷದ ಅವಧಿಯಲ್ಲಿ ಅಗ್ನಿ ವೀರರಿಗೆ 33,000 ರೂಪಾಯಿ ವೇತನ, ಮೂರನೇ ವರ್ಷದಲ್ಲಿ 36,500/- ಹಾಗೂ ನಾಲ್ಕನೇ ವರ್ಷದಲ್ಲಿ 40,000 ವೇತನ ಸಿಗಲಿದೆ.
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳ ಮಾಹಿತಿ :
• ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ ಈ ನೇಮಕಾತಿಗೆ ಅರ್ಜಿ ಸಲ್ಲಿಕೆಯು ಜುಲೈ 8 ರಿಂದ ಆರಂಭವಾಗಲಿದೆ.
ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜುಲೈ 28, 2024 ಆಗಿದೆ.
ಅರ್ಜಿ ಸಲ್ಲಿಸುವಂತಹ ಆಸಕ್ತ ಅಭ್ಯರ್ಥಿಗಳು ಏರ್ ಫೋರ್ಸ್ ಇಲಾಖೆಯ ಅಗ್ನಿಪತ್ ಯೋಜನೆಯ ಅಡಿಯಲ್ಲಿ ಈ ನೇಮಕಾತಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಆಸಕ್ತರು ಬೇಗನೆ ಕೊನೆಯ ದಿನಾಂಕದ ಒಳಗಾಗಿಯೇ ಈ ನೇಮಕಾತಿಗೆ ಅರ್ಜಿ ಸಲ್ಲಿಸಿ ಹಾಗೂ ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಇದೇ ರೀತಿ ನಮ್ಮ ಈ ಜಾಲತಾಣದಲ್ಲಿ ದಿನನಿತ್ಯ ಅನೇಕ ರೀತಿ ಇಂತಹ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದು ಪ್ರತಿಯೊಬ್ಬರ ದಿನನಿತ್ಯ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಲು ನಮ್ಮ ವ್ಯಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿರಿ.