ಸರ್ಕಾರದ ಕಂದಾಯ ಇಲಾಖೆಯಿಂದ ಮಹತ್ವದ ಘೋಷಣೆ : ನಿಮ್ಮ ಹೊಲದ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಈಗ ಮತ್ತಷ್ಟು ಸುಲಭ : RTC Adhar link

ಸರ್ಕಾರದ ಕಂದಾಯ ಇಲಾಖೆಯಿಂದ ಮಹತ್ವದ ಘೋಷಣೆ : ನಿಮ್ಮ ಹೊಲದ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಈಗ ಮತ್ತಷ್ಟು ಸುಲಭ : RTC Adhar link

Gnanagharjane.com

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ರೈತರಿಗೆ ಪಹಣಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಇಲ್ಲಿಯವರೆಗೆ ಹಲವಾರು ಅವಕಾಶಗಳನ್ನು ಕೊಟ್ಟರು ಕೂಡ ಹಲವಾರು ರೈತರು ವಿವಿಧ ಕಾರಣಗಳಿಂದಾಗಿ ಆಧಾರ್ ಕಾರ್ಡ್ ಮತ್ತು ಆರ್ ಟಿ ಸಿ ಯನ್ನು ಲಿಂಕ್ ಮಾಡಿಸಲು ಸಾಧ್ಯವಾಗಿಲ್ಲ.

ಇಂಥವರಿಗೆ ಇದೀಗ ಕಂದಾಯ ಇಲಾಖೆಯು ಮಹತ್ವದ ಗುಡ್ ನ್ಯೂಸ್ ನೀಡಿದ್ದು ಆಧಾರ್ ಕಾರ್ಡ್ ಮತ್ತು ಪಹಣಿಯನ್ನು ಲಿಂಕ್ ಮಾಡಿಸುವುದು ಈಗ ಅತ್ಯಂತ ಸುಲಭವಾಗಿದೆ.

ಕಂದಾಯ ಇಲಾಖೆಯ ಗುಡ್ ನ್ಯೂಸ್ ಏನು?

ಜೂನ್ ಮತ್ತು ಜುಲೈ ತಿಂಗಳಿನ ಒಳಗಾಗಿ ಕರ್ನಾಟಕ ರಾಜ್ಯಾದ್ಯಂತ ಯಾವ ರೈತರು ಇಲ್ಲಿಯವರೆಗೆ ಉತ್ತರ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲವೋ ಅಂತವರಿಗಾಗಿ ಕರ್ನಾಟಕ ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ.

ಅದೇನೆಂದರೆ ಈಗ ಗ್ರಾಮ ಆಡಳಿತ ಅಧಿಕಾರಿಗಳು ರೈತರ ಮನೆ ಮನೆಗೆ ಭೇಟಿ ನೀಡಿ ಆರ್‌ಟಿಸಿ ಆಧಾರ್ ಕಾರ್ಡ್ ಲಿಂಕ್ ಅನ್ನು ಮಾಡಿಸಿಕೊಳ್ಳಲು ಮಾಹಿತಿಯನ್ನು ನೀಡುತ್ತಿದ್ದಾರೆ.

ಕರ್ನಾಟಕ ಸರ್ಕಾರದಿಂದ ಇದು ಒಂದು ಉತ್ತಮ ನಿರ್ಧಾರವಾಗಿದ್ದು ರಾಜ್ಯದ್ಯಂತ ಹಲವಾರು ರೈತರಿಗೆ ಇದರಿಂದ ಅನುಕೂಲವಾಗಲಿದೆ.

ಪಹಣಿ ಜೊತೆಗೆ ಆಧಾರ್ ಲಿಂಕ್ ಮಾಡುವುದರ ಉಪಯೋಗಗಳೇನು?

ಆತ್ಮೀಯ ರೈತ ಬಾಂಧವರೇ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಮಾಡಿಸುವುದರಿಂದ ನಿಮಗೆ ಸರ್ಕಾರದಿಂದ ಹಲವಾರು ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಉಪಯುಕ್ತವಾಗುತ್ತದೆ. ಇದರಿಂದ ನಿಮ್ಮ ಜಮೀನಿನ ಸುರಕ್ಷತೆಗೆ ಕೂಡ ಸಹಾಯವಾಗುತ್ತಿತ್ತು ಭೂಗಳ್ಳರಿಂದ ತಪ್ಪಿಸಿಕೊಳ್ಳಲು ಇದು ಸೂಕ್ತವಾಗಿದೆ.

ನಿಮ್ಮ ಪಹಣಿಗೆ ಆಧಾರ್ ಜೋಡಣೆ ಮಾಡಿಸುವುದು ಹೇಗೆ?

ನಿಮ್ಮ ಹೊಲದ ಪಹಣಿಗೆ ನೀವು ಎಲ್ಲಿಯವರೆಗೆ ಆಧಾರ್ ಲಿಂಕ್ ಮಾಡಿಸದೆ ಇದ್ದರೆ ನೀವು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡುವುದರ ಮುಖಾಂತರ ಅಥವಾ ನಿಮ್ಮ ತಾಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಹಣಿ ಆಧಾರ್ ಲಿಂಕ್ ಮಾಡಿಸುವುದರ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡು ನೀವು ಸುಲಭವಾಗಿ ಪಹಣಿ ಆಧಾರ್ ಲಿಂಕ್ ಮಾಡಿಸಬಹುದಾಗಿದೆ.

ನೀವು ಒಂದು ವೇಳೆ ಇಲ್ಲಿಯವರೆಗೆ ಪಹಣಿ ಆಧಾರ್ ಲಿಂಕ್ ಮಾಡಿಸದೆ ಇದ್ದರೆ ನೀವೇ ಖುದ್ದಾಗಿ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ನಿಮ್ಮ ಆಧಾರ್ ಪಹಣಿ ಜೋಡಣೆಯಾಗದಿದ್ದಲ್ಲಿ,

ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಅನ್ನು ತೆಗೆದುಕೊಂಡು ಹೋಗಿ ನಿಮ್ಮ ಪಹಣಿ ಮತ್ತು ಆಧಾರ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಿಸಿ ಏಕೆಂದರೆ ಇದರಿಂದ ಸರ್ಕಾರದ ಹಲವಾರು ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ನಿಮಗೆ ಅನುಕೂಲವಾಗಲಿದೆ. ಯೋಜನೆಗಳ ಲಾಭವನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ ನಿಮ್ಮ ಹೊಲದ ಸುರಕ್ಷತೆಗಾಗಿಯು ಕೂಡ ಇದು ಅತ್ಯಂತ ಉಪಕಾರಿಯಾಗಲಿದೆ.

ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ದಿನನಿತ್ಯ ಇಂತಹದೇ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದು ಇವತ್ತಿನ ಈ ಪಹಣಿ ಆಧಾರ್ ಲಿಂಕ್ ಮಾಡಿಸುವುದರ ಉಪಯುಕ್ತ ಮಾಹಿತಿ ನಿಮಗೆ ಪ್ರಯೋಜನವಾದಲ್ಲಿ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೂ ಶೇರ್ ಮಾಡಿರಿ.

Leave a Reply

Your email address will not be published. Required fields are marked *