ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು..!
ಪ್ರೀತಿಯ ರೈತ ಬಾಂಧವರಿಗೆ ಪ್ರಸ್ತುತ ಲೇಖನದಲ್ಲಿ ತಿಳಿಸುವುದೇನೆಂದರೆ ನಿನ್ನೆ ಉತ್ತರ ಕರ್ನಾಟಕದ ರೈತರ ಖಾತೆಗೆ 25, ಸಾವಿರ ದಿಂದ ಒಂದು ಲಕ್ಷದವರೆಗೂ ಬೆಳೆ ವಿಮೆ ಜಮಾ ಆಗಿದೆ..
ಹೌದು ಸ್ನೇಹಿತರೆ ಗುಲ್ಬರ್ಗ ವಿಜಯಪುರ ಬೀದರ್, ಬೆಳಗಾವಿ ಇನ್ನಿತರೆ ಸೇರಿದಂತೆ ಜಿಲ್ಲೆಗಳ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗಿದೆ…!
ಬರೋಬ್ಬರಿ ೨೫ ಸಾವಿರದಿಂದ ಒಂದು ಲಕ್ಷದವರೆಗೂ ರೈತರ ಖಾತೆಗೆ ಬೆಳೆ ವಿಮೆ ಬಿಡುಗಡೆ ಮಾಡಲಾಗಿದ್ದು ಕಳೆದ ಎರಡು ಜನಗಳಿಂದ ರೈತರ ಖಾತೆಗೆ ಬೆಳೆ ವಿಮೆಯ ಜಮಾ ಆಗುತ್ತಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಈ ಕೂಡಲೇ ಚೆಕ್ ಮಾಡಿಕೊಳ್ಳುವುದು ಉತ್ತಮ..!
ಬೆಂಗಳೂರು: ರಾಜ್ಯದ 17.09 ಲಕ್ಷ ಸಣ್ಣ, ಅತಿ ಸಣ್ಣ ರೈತ
ಕುಟುಂಬಗಳಿಗೆ ಜೀವನೋಪಾಯ ನಷ್ಟ ಪರಿಹಾರವಾಗಿ ತಲಾ ₹2,800ರಿಂದ ₹3,000 ಸಾವಿರ ನೀಡಲು ಸರ್ಕಾರ ನಿರ್ಧರಿಸಿದೆ.
12 ಲಕ್ಷ ರೈತರ ಖಾತೆಗೆ ಬೆಳೆ ವಿಮೆ ಬಿಡುಗಡೆ..!
ಕರ್ನಾಟಕದ ಜನತೆಗೆ ನಮನಗಳು..!
Crop Insurance credited 2024 | Check it Now |
More Information | Click Here |
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಲೇಖನಗಳಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ಪ್ರತಿನಿತ್ಯ ನಾವು ನೀಡುತ್ತಿದ್ದು ಇದೀಗ ಬೆಳೆ ವಿಮೆ ಜಮಾ ಆಗಿದ್ದು ಅದರ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ..!
ಹೌದು ಸ್ನೇಹಿತರೆ 2023 ನೇ ಸಾಲಿನಲ್ಲಿ ಮುಂಗಾರು ಬೆಳೆ ವಿಮೆಗೆ ಅರ್ಜಿ ಹವಾನಿಸಲಾಗಿತ್ತು ಅಂತಹ ಸಮಯದಲ್ಲಿ ಅರ್ಜಿ ಸಲ್ಲಿಸಿದಂತಹ ರೈತರ ಖಾತೆಗೆ ಬೆಳೆ ವಿಮೆ ಬಿಡುಗಡೆಯಾಗಿದ್ದು ಎಷ್ಟು ಬೆಳೆ ವಿಮೆ ಜಮಾ ಆಗಿದೆ ಈಗಲೇ ತಿಳಿದುಕೊಳ್ಳಿ..!
ಪ್ರತಿ ಹೆಕ್ಟರ್ ಗೆ ತಲಾ 25,000 ಬೆಳೆವಿಮೆ ಬಿಡುಗಡೆಯಾಗಿದ್ದು ಈಗಾಗಲೇ ಹಲವು ಜಿಲ್ಲೆಗಳ ಭಾಗಗಳಲ್ಲಿ ರೈತರ ಖಾತೆಗೆ ನೇರವಾಗಿ ಬೆಳೆ ವಿಮೆ ಜಮಾ ಆಗಿದೆ..
ನಿಮ್ಮ ಖಾತೆಗೂ ಬೆಳೆ ವಿಮೆ ಜಮಾ ಆಗಿದೆಯಾ? ಈಗಲೇ ಚೆಕ್ ಮಾಡಿಕೊಳ್ಳಿ..
https://samrakshane.karnataka.gov.in
ಸ್ನೇಹಿತರೆ ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಇಲ್ಲವೇ ಮೊಬೈಲ್ ನಂಬರ್ ಅಥವಾ ಅಪ್ಲಿಕೇಶನ್ ನಂಬರ್ ಮುಖಾಂತರ ನೀವು ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗಿದೆಯಾ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬಹುದು.
ಇಲ್ಲವಾದಲ್ಲಿ ನಿಮ್ಮ ಸಮೀಪವಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಮುಖಾಂತರ ಅವರು ಸಹ ನಿಮಗೆ ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಿ ಹೇಳುತ್ತಾರೆ.
ಬೆಳೆ ವಿಮೆಯ ಮೌಲ್ಯವು ಬೆಳೆಗಳ ಆಧಾರದ ಮೇಲೆ ಈಗಾಗಲೇ ಸರ್ಕಾರವು ನಿಗದಿಪಡಿಸಲಾಗಿದ್ದು ನಿಮ್ಮ ಖಾತೆಗೆ ಎಷ್ಟು ಬೆಳೆ ವಿಮೆ ಜಮಾ ಆಗಿದೆ ನೀವು ಕೂಡಲೇ ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಿ..
ಇನ್ನುಳಿದ ರೈತರ ಕತ್ತೆಗೆ ಬೆಳೆ ವಿಮೆ ಜಮಾ ಯಾವಾಗ..?
ಈಗಾಗಲೇ ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಬೆಳೆ ವಿಮೆ ಬಿಡುಗಡೆಯಾಗಿದ್ದು ಇನ್ನುಳಿದ ಜಿಲ್ಲೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಬೆಳೆವಿಮೆ ಬಿಡುಗಡೆಯಾಗುತ್ತದೆ.
ನೀವು ಮೊದಲು ಯಾವ ಬೆಳೆಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ನಂತರ ನಿಮ್ಮ ಬೆಳೆ ವಿಮೆ ಜಮಾ ಯಾವಾಗ ಆಗುತ್ತದೆ ಎಂದು ನಿಮಗೆ ತಿಳಿದಿರುತ್ತದೆ..
ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಿ, ನಿರ್ಣಯ ಕೈಗೊಳ್ಳಲು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯ ಸಭೆಯ ಬಳಿಕ ಈ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಜೀವನೋಪಾಯ ನಷ್ಟ ಪರಿಹಾರ ವಿತರಿಸಲು ರೈತರ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದರು.
‘ಮಳೆ ಆಶ್ರಿತ ಮತ್ತು ನಾಲೆಗಳ ಕೊನೆಯ ಭಾಗದಲ್ಲಿರುವ ರೈತರಿಗೂ ಬೆಳೆ ನಷ್ಟ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಸುಮಾರು 7 ಲಕ್ಷ ರೈತರಿಗೆ ಲಾಭವಾಗಲಿದೆ. ಜಿಲ್ಲಾಧಿಕಾರಿಗಳ ವರದಿ ಆಧಾರದಲ್ಲಿ ಈ ಪರಿಹಾರ ವಿತರಿಸಲಾಗುವುದು’ ಎಂದರು.
‘ಕೇಂದ್ರದಿಂದ ಎನ್ಡಿಆರ್ಎಫ್ ಪರಿಹಾರ ₹3,454 ಕೋಟಿ ಬಂದಿತ್ತು. 27.50 ಲಕ್ಷ ರೈತರಿಗೆ ₹2,451 ಕೋಟಿಯನ್ನು ಮೇ ತಿಂಗಳ ಮೊದಲ ವಾರದಲ್ಲಿಯೇ ವಿತರಿಸಲಾಗಿದೆ. ಎನ್ಡಿಆರ್ಎಫ್ನ ಉಳಿದ ಹಣ ಮತ್ತು ರಾಜ್ಯ ಸರ್ಕಾರದಿಂದ ₹272 ಕೋಟಿ ಸೇರಿಸಿ ನಷ್ಟ ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಇನ್ನೊಂದು ವಾರದಲ್ಲಿ ಪರಿಹಾರ ಪಾವತಿಸಲು ಸಾಧ್ಯವಾಗುವಂತೆ ಅಧಿಕಾರಿಗಳು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ’ ಎಂದರು.
ಮುಂಗಾರು ಸ್ಥಿತಿಯ ಬಗ್ಗೆಯೂ ಸಭೆಯಲ್ಲಿ ಅವಲೋಕನ ನಡೆಸಲಾಗಿದೆ. ವಾಡಿಕೆಯಂತೆ ಪೂರ್ವ ಮುಂಗಾರು ಮಳೆ 115 ಮಿಮೀ ಆಗುತ್ತದೆ. ಆದರೆ, ಈ ಬಾರಿ 150 ಮಿಮೀ ಮಳೆ ಆಗಿದೆ.
ಕಳೆದ ವರ್ಷ ಶೇ 71ರಷ್ಟು ಮಳೆ ಕೊರತೆ ಆಗಿತ್ತು. ಈ ಬಾರಿ ಒಂದು ಭಾಗಕ್ಕೆ ಸೀಮಿತವಾಗದೆ, ಎಲ್ಲ ಭಾಗಗಳಲ್ಲೂ ಮಳೆ ಬಂದಿದೆ. ಐದು ಜಿಲ್ಲೆಗಳಲ್ಲಿ ವಾಡಿಕೆ, ನಾಲ್ಕು ಜಿಲ್ಲೆಗಳಲ್ಲಿ ಅಧಿಕ ಮತ್ತು ಉಳಿದ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದೆ’ ಎಂದರು.
‘ಕೃಷಿ ವಿಮೆ ಮೂಲಕವೂ ರೈತರಿಗೆ ಈ ಬಾರಿ ಅತೀ ಹೆಚ್ಚು ₹1,654 ಕೋಟಿ ಪರಿಹಾರ ಸಿಕ್ಕಿದೆ. ಇನ್ನೂ ₹130 ಕೋಟಿ ಪರಿಹಾರ ನೀಡಲು ಬಾಕಿ ಇದೆ’ ಎಂದರು.
‘ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಬಗ್ಗೆ ಹವಾಮಾನ ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಮಳೆ ಸಮಯದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದೇ ಶನಿವಾರದಿಂದ ವಿಭಾಗವಾರು ಸಭೆ ನಡೆಸುತ್ತೇನೆ’ ಎಂದೂ ಕೃಷ್ಣ ಬೈರೇಗೌಡ ತಿಳಿಸಿದರು.