ಪ್ರತಿಯೊಬ್ಬ ರೈತರು ನೋಡಲೇಬೇಕಾದ ಮಾಹಿತಿ… ನಿಮ್ಮ ಎಲ್ಲಾ ದಾಖಲಾತಿಗಳಲ್ಲಿ ನಿಮ್ಮ ಮಾಹಿತಿ ಒಂದೇ ತರನಾಗಿ ಇದೆಯಾ..? ಹಾಗೆಯೇ ಪೂರ್ಣವಾಗಿ ಇದೆಯಾ..? ಈಗಲೇ ನೋಡಿಕೊಳ್ಳಿ

ಹಲವಾರು ರೈತರ ದಾಖಲಾತಿಗಳಲ್ಲಿ ಅವರ ಮಾಹಿತಿ ಅಪೂರ್ಣ ಅಥವಾ ಬೇರೆ ಬೇರೆ ತರನಾಗಿ ಇರುವುದರಿಂದ ಇನ್ನು ಮುಂದೆ ಹೊಸ ಕಾಯ್ದೆಗಳು ಅನ್ವಯವಾಗುವುದರಿಂದ ಈ ಎಲ್ಲ ಮಾಹಿತಿಗಳು ಸಂಪೂರ್ಣವಾಗಿ ಒಂದೇ ತರನಾಗಿ ಇನ್ನು ಮುಂದೆ ಇರಬೇಕಾಗುತ್ತದೆ..

WhatsApp Group Join Now
Telegram Group Join Now

ಅದಕ್ಕಾಗಿ ಇನ್ನು ಮುಂದೆ ಡಿಜಿಟಲ್ ಯುಗ ಇರುವುದಕ್ಕಾಗಿ ರೈತರ ಮಾಹಿತಿ ಒಂದೇ ತರನಾಗಿ ಇರದೆ ಇದ್ದರೆ ನೀವು ಆನ್ಲೈನ್ ನಲ್ಲಿ ಯಾವುದೇ ತರನಾದಂತಹ ಅರ್ಜಿ ಸಲ್ಲಿಸಲು ಹೋದರೆ ನಿಮಗೆ ಅರ್ಜಿಯನ್ನು ಸಲ್ಲಿಸಲು ಅಡ್ಡಿಯಾಗುತ್ತದೆ..

ಅದಕ್ಕಾಗಿ ನಿಮ್ಮ ಎಲ್ಲ ದಾಖಲಾತಿಗಳಲ್ಲಿ ನಿಮ್ಮ ಹೆಸರು ನಿಮ್ಮ ತಂದೆ ಹೆಸರು ನಿಮ್ಮ ವಿಳಾಸ ಎಲ್ಲಾ ಒಂದೇ ತರನಾಗಿ ಇದೆಯೋ ಅಥವಾ ಇಲ್ಲವೋ ಈಗಲೇ ಪರೀಕ್ಷಿಸಿಕೊಳ್ಳಿ..

ಕೆಲವೊಮ್ಮೆ ರೈತರ ಆಧಾರ್ ಕಾರ್ಡ್ ನಲ್ಲಿ ಇರುವಂತೆ ಅವರ ಹೆಸರು ಪ್ಯಾನ್ ಕಾರ್ಡ್ ನಲ್ಲಿ ಅಥವಾ ಅವರ ಹೊಲದ ಪಹಣಿಯಲ್ಲಿ ಇರುವುದಿಲ್ಲ.
ಇದಕ್ಕಾಗಿ ಬರುವ ಮುಂದಿನ ದಿನಗಳಲ್ಲಿ ಬಹು ದೊಡ್ಡ ಸಮಸ್ಯೆ ಆಗುವುದಕ್ಕಾಗಿ ನೀವು ಕೂಡಲೇ ಇದನ್ನು ತಿಳಿದುಕೊಂಡು ಈ ಸಮಸ್ಯೆಯಿಂದ ಈಗಲೇ ಪಾರಾಗಿ.

ಮೊದಲು ನಿಮ್ಮ ಯಾವ ಯಾವ ದಾಖಲಾತಿಗಳಲ್ಲಿ ಹೆಸರು ಸರಿಯಾಗಿದೆ ಅಥವಾ ಇಲ್ಲವೋ ಎಂಬುದು ನೋಡಿಕೊಳ್ಳುವುದು ಉತ್ತಮ.

ರೈತರಿಗೆ ಎಚ್ಚರಿಕೆ..!

ಈಗಾಗಲೇ ರೈತರಿಗೆ ಹಲವು ಬಾರಿ ಈ ಮಾಹಿತಿಯನ್ನು ಸರ್ಕಾರವು ನೀಡಿದ್ದರೂ ಸಹ ರೈತರು ತಿದ್ದಿಕೊಳ್ಳದೆ ಇರೋದಕ್ಕಾಗಿ ಇನ್ನು ಮುಂದೆ ರೈತರು ಈ ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ..

ಏನದು ಸೂಚನೆ..?

ರೈತರ ಹತ್ತಿರ ಇರುವಂತಹ ಎಲ್ಲಾ ದಾಖಲಾತಿಗಳಲ್ಲಿ ಸ್ವಲ್ಪ ಸ್ವಲ್ಪ ಮಾಹಿತಿ ಅದಲು ಬದಲಾಗಿದ್ದು ಆದ್ದರಿಂದ ಈ ಮಾಹಿತಿಗಳು ಇನ್ನು ಮುಂದೆ ಎಲ್ಲ ದಾಖಲಾತಿಗಳಲ್ಲಿ ಒಂದೇ ತರನಾಗಿ ಇದ್ದಾಗ ಮಾತ್ರ ಹೊಸ ಯೋಜನೆಗಳನ್ನು ಅವರು ಪಡೆದುಕೊಳ್ಳಬಹುದಾಗಿದೆ..

ಉದಾಹರಣೆಗೆ..

ರೈತರ ಹೆಸರು ಆಧಾರ್ ಕಾರ್ಡ್ ನಲ್ಲಿ ಇರುವಂತೆ ಅವರ ಪಹಣಿಯಲ್ಲಿ ಇರುವುದಿಲ್ಲ.
ಹೇಗೆಂದರೆ ಅವರ ಆಧಾರ್ ಕಾರ್ಡ್ ನಲ್ಲಿ ಅವರ ಹೆಸರು ಮತ್ತು ಅವರ ಅಡ್ರೆಸ್ ಮಾತ್ರ ಇರುವುದು ಹಾಗೆ ಅವರ ಪಹಣಿಯಲ್ಲಿ ಅವರ ಹೆಸರು ಹಾಗೆ ಅವರ ತಂದೆ ಹೆಸರು ಹೀಗೆ ಸ್ವಲ್ಪ ಸ್ವಲ್ಪ ಅದಲು ಬದಲು ಇರುವುದರಿಂದಾಗಿ ಇನ್ನು ಮುಂದೆ ರೈತರು ಇನ್ನು ಮುಂದೆ ಸಂಕಟವನ್ನು ಅನುಭವಿಸುತ್ತಾರೆ..

ಅದಕ್ಕಾಗಿ ನಿಮ್ಮ ಹತ್ತಿರ ಇರುವ ಎಲ್ಲ ದಾಖಲಾತಿಗಳು ಅಂದರೆ ಆಧಾರ್ ಕಾರ್ಡ್ ಪಹಣಿ ಪಾನ್ ಕಾರ್ಡ್ ಹಾಗೆ ಬ್ಯಾಂಕ್ ಖಾತೆ ಈ ಎಲ್ಲಾ ದಾಖಲಾತಿಗಳಲ್ಲಿ ಒಂದೇ ತರದ ಹೆಸರನ್ನು ಸೇರ್ಪಡೆ ಮಾಡಿಕೊಳ್ಳುವುದು ಒಂದು ಉತ್ತಮ ಕರವಾಗಿದೆ.

ಒಂದೇ ತರನಾದಂತಹ ಸರಿಯಾದ ಮಾಹಿತಿ ಸೇರ್ಪಡೆ ಮಾಡಲು ಏನು ಮಾಡಬೇಕು..?

ನಿಮಗೆ ಗೊತ್ತಿರುವಂತೆ ಆಧಾರ್ ಕಾರ್ಡ್ ನಲ್ಲಿ ಕೇವಲ ಎರಡು ಬಾರಿ ಮಾತ್ರ ನೀವು ನಿಮ್ಮ ಹೆಸರನ್ನು ಬದಲಾಯಿಸಬಹುದು ಹಾಗೆ ಕೇವಲ ಎರಡು ಬಾರಿ ಮಾತ್ರ ನಿಮ್ಮ ಮನೆಯ ಅಡ್ರೆಸ್ ಹಾಗೆ ನಿಮ್ಮ ಜನ್ಮ ದಿನಾಂಕ ಎಲ್ಲವೂ ಕೇವಲ ಎರಡು ಬಾರಿ ಮಾತ್ರ ಬದಲಾಯಿಸಿಕೊಳ್ಳಲು ಅವಕಾಶವಿರುತ್ತದೆ..

ಅದಕ್ಕಾಗಿ ನಿಮಗೆ ಯಾವ ಮಾಹಿತಿ ಸಮಂಜಸವಾಗಿರುತ್ತದೆಯೋ ಅದನ್ನು ಹೊರತುಪಡಿಸಿ ಇನ್ನು ಉಳಿದ ಎಲ್ಲಾ ದಾಖಲಾತಿಗಳಲ್ಲಿ ಅದರಂತೆ ನಿಮ್ಮ ಮಾಹಿತಿಯನ್ನು ಸೇರ್ಪಡೆ ಮಾಡಿ..

ನಿಮ್ಮ ಎಲ್ಲ ದಾಖಲಾತಿಗಳಲ್ಲಿ ಈ ಕೆಳಕಂಡ ಮಾಹಿತಿಗಳು ಸರಿಯಾಗಿರಬೇಕು..

1) ನಿಮ್ಮ ಪೂರ್ಣ ಹೆಸರು
2)Date of Birth.
3) ನಿಮ್ಮ ಮನೆಯ Adress.
4) ನಿಮ್ಮ ತಂದೆಯ ಹೆಸರು.
5) ಹೀಗೆ ಅನೇಕ ತರಹದ ಮಾಹಿತಿ..

ಈ ಮೇಲ್ಕಂಡ ಮಾಹಿತಿಗಳು ನಿಮ್ಮ ದಾಖಲಾತಿಗಳಲ್ಲಿ ಸರಿಯಾಗಿ ಇರಬೇಕು.
ಅಂದರೆ ನಿಮ್ಮ ಪೂರ್ಣ ಹೆಸರು ಆಧಾರ್ ಕಾರ್ಡ್ ನಲ್ಲಿ ಹೇಗೆ ಇರುತ್ತದೆಯೋ ಇನ್ನು ಉಳಿದ ಎಲ್ಲಾ ದಾಖಲಾತಿಗಳಲ್ಲೂ ಸಹ ಹಾಗೆ ಇರಬೇಕು..

ಅದಕ್ಕಾಗಿ ಹೀಗೆ ಎಲ್ಲದ ಕಲತಿಗಳನ್ನು ಇನ್ನೊಮ್ಮೆ ಪರಿಶೀಲಿಸಿಕೊಂಡು ಏನಾದರೂ ತಪ್ಪುಗಳಿದ್ದರೆ ಈಗಲೇ ತಿಳಿದುಕೊಳ್ಳಿ..

ಮುಂಬರುವ ದಿನಗಳಲ್ಲಿ ಡಿಜಿಟಲ್ ಯುಗ ಆಗಿದ್ದರಿಂದ ಸರಿಯಾಗಿ ಮಾಹಿತಿ ಇದ್ದರೆ ಮಾತ್ರ ನೀವು ಇನ್ನು ಮುಂದೆ ಅರ್ಜಿಗಳನ್ನು ಸಲ್ಲಿಸಲು ಅರ್ಹತೆ ಪಡೆದಿರುತ್ತೀರಿ.

ಅದಕ್ಕಾಗಿ ಈ ಮೇಲ್ಕಂಡ ಮಾಹಿತಿಯನ್ನು ಪಡೆದುಕೊಂಡು ದಾಖಲಾತಿಗಳನ್ನು ಈಗಲೇ ಪರಿಶೀಲನೆ ಮಾಡಿಕೊಂಡು ಸರಿಯಾಗಿ ತಿಳಿದುಕೊಂಡರೆ ನೀವು ಇನ್ನು ಮುಂದೆ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳುವಲ್ಲಿ ಅರ್ಹತೆ ಪಡೆದಿರುತೀರಿ..

Leave a Reply

Your email address will not be published. Required fields are marked *