ಸರ್ಕಾರದಿಂದ ಬಿತ್ತನೆಯ ಬೀಜ ಸಬ್ಸಿಡಿ ದರದಲ್ಲಿ ವಿತರಣೆ ಆರಂಭ…
Gnanagharjane
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..
ಪ್ರೀತಿಯ ರೈತ ಬಾಂಧವರಿಗೆ ಪ್ರಸ್ತುತ ಲೇಖನದಲ್ಲಿ ತಿಳಿಸುವುದೇನೆಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಬಿತ್ತನೆಯ ಸಮಯ ಪ್ರಾರಂಭವಾಗಲಿದ್ದು ಈಗಾಗಲೇ ರಾಜ್ಯ ಸರ್ಕಾರದಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆಯ ಬೀಜಗಳನ್ನು ಮಾರಾಟ ಮಾಡಲಾಗುತ್ತಿದ್ದು ಈ ಬೀಜಗಳನ್ನು ಪಡೆದುಕೊಳ್ಳುವುದು ಹೇಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ..
Gnanagharjane
ಹೌದು ಸ್ನೇಹಿತರೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಜ್ಯ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಬೀಜಗಳ ಮಾರಾಟವಾಗುತ್ತಿದ್ದು ಈ ಬೀಜಗಳನ್ನು ಪಡೆದುಕೊಳ್ಳಬೇಕೆಂದರೆ ನೀವು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಅಥವಾ ಹೊಲದ ಪಹಣಿ ಜೆರಾಕ್ಸ್ ಪ್ರತಿ ಮುಖಾಂತರ ನೀವು ಈ ಬೀಜಗಳನ್ನು ಪಡೆದುಕೊಳ್ಳಬಹುದಾಗಿದೆ…!
ಈಗ ಮುಂಗಾರು ಬಿತ್ತನೆಯ ಸಮಯವಾಗಿದ್ದು ಕೇವಲ ಮುಂಗಾರು ಬಿತ್ತನೆಯ ಸಮಯದಲ್ಲಿ ಯಾವ ಬೀಜಗಳನ್ನು ಬಿತ್ತುತ್ತಾರೋ ಅಂತಹ ಬೀಜಗಳ ವಿತರಣೆ ಮಾತ್ರ ಪ್ರಾರಂಭವಾಗಿದೆ..
ರೈತ ಬಾಂಧವರೇ ಈ ಕೂಡಲೇ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೀವು ಈ ಸರ್ಕಾರ ನೀಡುವಂತಹ ಬಿತ್ತನೆಯ ಬೀಜಗಳನ್ನು ಪಡೆದುಕೊಳ್ಳಿ..
For More Information Read It Now
ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…!
ಕರುನಾಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಕೃಷಿ ಕೆಲಸಕ್ಕಾಗಿ ಹಲವಾರು ಬ್ಯಾಂಕಿನಲ್ಲಿ ಸಾಲವನ್ನು ನೀಡುತ್ತಿದ್ದು ಆದರೆ ಈ ಬ್ಯಾಂಕಿನಲ್ಲಿ ಬಡ್ಡಿ ರಹಿತವಾಗಿ ಸಾಲವನ್ನು ನೀಡುತ್ತಿದ್ದು ಯಾವ ಬ್ಯಾಂಕ್ ಹಾಗೆ ಹೇಗೆ ಈ ಸಾಲವನ್ನು ಪಡೆದುಕೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!
ರೈತರಿಗೆ ಸಹಾಯವಾಗಲೆಂದು ಕರ್ನಾಟಕ ರಾಜ್ಯ ಸರ್ಕಾರ ಹೊಸ ಯೋಜನೆ ಅಡಿಯಲ್ಲಿ 5 ಲಕ್ಷ ವರೆಗೂ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಡಿಸಿಸಿ ಬ್ಯಾಂಕ್ ನಲ್ಲಿ ಈ ಸಾಲವನ್ನು ನೀಡುತ್ತಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!
ಹೌದು ಸ್ನೇಹಿತರೆ, ಡಿಸಿಸಿ ಬ್ಯಾಂಕಿನಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಸಾಲವನ್ನು ನೀಡುತ್ತಿದ್ದು ಯಾವ ಯಾವ ಚಟುವಟಿಕೆಗಳಿಗಾಗಿ ಸಾಲವನ್ನು ನೀಡಲಾಗುತ್ತಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ…!
1) ಕುರಿ ಸಾಕಾಣಿಕೆ
2) ಹೈನುಗಾರಿಕೆ
3) ಬಡ್ಡಿ ರಹಿತ ಕೃಷಿ ಸಾಲ
4) ವಿವಿಧ ಬೆಳೆಗಳ ಮೇಲೆ ಸಾಲಗಳು…!
ಹೀಗೆ ಅನೇಕ 10 ಹಲವಾರು ಯೋಜನಾ ಅಡಿಯಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಸಾಲವನ್ನು ನೀಡುತ್ತಿದ್ದು ಈ ಯೋಜನೆಗಳ ಮೇಲೆ ಸಾಲವನ್ನು ತೆಗೆದುಕೊಳ್ಳಿ ಹಾಗೆ ಕೆಲವೊಂದು ಯೋಜನೆಗಳ ಮೇಲೆ ಯಾವುದೇ ತರನಾದಂತಹ ಬಡ್ಡಿ ಇಲ್ಲ ಹಾಗೆ ಈ ಕೃಷಿ ಚಟುವಟಿಕೆಗಳಿಗಾಗಿ ಕೇವಲ 1 – 3% ನಷ್ಟು ಮಾತ್ರ ಬಡ್ಡಿ ಇದ್ದು ಇದರ ಲಾಭವನ್ನು ರೈತರು ಪಡೆದುಕೊಳ್ಳಿ ಹಾಗೆ ನಿಮ್ಮ ಹೊಲದಲ್ಲಿ ಕೃಷಿ ಕೆಲಸಕ್ಕಾಗಿ ಈ ಸಾಲವನ್ನು ಪಡೆದುಕೊಂಡು ಕೃಷಿ ಕೆಲಸವನ್ನು ಆರಂಭಿಸಿ…!
ಈ ಸಾಲವನ್ನು ಪಡೆದುಕೊಳ್ಳುವುದು ಹೇಗೆ…?
ಹೌದು ಸ್ನೇಹಿತರೆ ಕೃಷಿ ಸಾಲವನ್ನು ಪಡೆದುಕೊಳ್ಳಬೇಕೆಂದರೆ ರೈತರ ಹೆಸರಿನಲ್ಲಿ ಫ್ರೂಟ್ಸ್ ಐಡಿ ನೊಂದಾಯಿತಗೊಂಡಿರಬೇಕು ಹಾಗೆ ಫ್ರೂಟ್ ಐಡಿ ಮತ್ತು ಹೊಲದ ಹನಿಯ ನಂಬರ್ ಅಂದರೆ ಸರ್ವೆ ನಂಬರ್ ಲಿಂಕ್ ಆಗಿರಬೇಕು…!
ಕೃಷಿ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಡಿಸಿಸಿ ಬ್ಯಾಂಕ್ ನಲ್ಲಿ ನೀವು ಖಾತೆಯನ್ನು ಹೊಂದಿರಬೇಕು ಹಾಗೆ ನಿಮ್ಮ ಹೊಲದ ಸರ್ವೆ ನಂಬರ್ ಅಥವಾ ಪಹಣಿಯನ್ನು ನೀಡಿ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ…!
ಸಾಲವನ್ನು ಪಡೆದುಕೊಂಡ ನಂತರ ಒಂದು ವರ್ಷದ ಒಳಗಾಗಿ ಮರುಪಾವತಿಸಿ ಮತ್ತೆ ಸಾಲ ಪಡೆದುಕೊಳ್ಳಬಹುದಾಗಿದೆ ಇದಕ್ಕೆ ನಾವು ರಿನಿವಲ್ ಎಂದು ಕರೆಯುತ್ತೇವೆ…!
ಒಂದು ವೇಳೆ ಸರಿಯಾದ ಸಮಯದಲ್ಲಿ ರಿನಿವಲ್ ಮಾಡಿಸದೆ ಹೋದಲ್ಲಿ ಮತ್ತೆ ನಿಮ್ಮ ಸಾಲದ ಮೇಲೆ ಬಡ್ಡಿ ದರವನ್ನು ಹಾಕಲಾಗುತ್ತದೆ ಅದಕ್ಕಾಗಿ ಸಾಲ ತೆಗೆದುಕೊಂಡ ಒಂದು ವರ್ಷದ ಒಳಗಾಗಿ ಮರುಪಾವತಿಸಿ ಮತ್ತೆ ಸಾಲ ಪಡೆಯುವುದು ಉತ್ತಮ..!
ಕುರಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಮಾಡುವಲ್ಲಿ ಸಬ್ಸಿಡಿ ದರದಲ್ಲಿ ಸಾಲವನ್ನು ನೀಡುತ್ತಿದ್ದು ಸ್ವಲ್ಪ ಮೊತ್ತದ ಹಣ ಕಡಿಮೆ ಮಾಡಿ ಮತ್ತೆ ನೀವು ಪುನಃ ಆ ದುಡ್ಡನ್ನು ಮರುಪಾವತಿ ಮಾಡಬೇಕಾಗುತ್ತದೆ…!
ಈ ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕೆಂದರೆ ನಿಮ್ಮ ಹತ್ತಿರವಿರುವ ಡಿಸಿಸಿ ಬ್ಯಾಂಕಿಗೆ ಭೇಟಿ ನೀಡಿ ಈ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ…!