FID ಮುಖ್ಯವಾದ ಮಾಹಿತಿ…!
ಕರುನಾಡ ಜನತೆಗೆ ನಮಸ್ಕಾರಗಳು
ಈಗಾಗಲೇ ನಿಮಗೆ ತಿಳಿದಿರುವಂತೆ 2023 ಬರಪಿಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು ಈ ಬರಪೀಡಿತ ತಾಲೂಕುಗಳಲ್ಲಿನ ರೈತರಿಗೆ ಬೆಳೆ ವಿಮೆ ಜಮಾ ಆಗಬೇಕೆಂದರೆ Fid ಹೊಂದಿರುವುದು ಕಡ್ಡಾಯವಾಗಿದೆ..
ಹೌದು ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಿರುವಂತೆ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗೋದು ಎಂದು ರಾಜ್ಯ ಸರ್ಕಾರ ತಿಳಿಸಿದ್ದು ಹೇಗೆ ಪಡೆದುಕೊಳ್ಳಬೇಕು ಅಥವಾ ನಿಮ್ಮ ಹೆಸರಿನಲ್ಲಿ ಈಗಾಗಲೇ Fid ನೊಂದಾಯಿತಗೊಂಡಿದೆಯಾ ಎಂದು ಈಗಲೇ ತಿಳಿಯಿರಿ.
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಅತಿ ಸುಲಭವಾಗಿ Fid ಪಡೆದುಕೊಳ್ಳಬಹುದಾಗಿದೆ..
ಪ್ರೋಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಲು ಮನವಿ :
ಫ್ರಟ್ಸ್ ತಂತ್ರಾಂಶದ ಮಾಹಿತಿಯನ್ನು ಸರ್ಕಾರದ ವಿವಿಧ ಸವಲತ್ತುಗಳಾದ ಬೆಳೆವಿಮೆ, ಬೆಳೆಸಾಲ, ಬೆಳೆ ಪರಿಹಾರ ವಿತರಣೆ, ಕನಿಷ್ಠ ಬೆಂಬಲ ಬೆಲೆ ಯೋಜನೆ ಅನುಷ್ಠಾನ, ಬೆಳೆ ದಾಖಲಾತಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ವಿತರಣೆಗೆ ಬಳಕೆ ಮಾಡುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನಿನ ಮಾಹಿತಿಯನ್ನು ನೀಡಿ ಪ್ರೋಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮನವಿ ಮಾಡಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ
ಎಲ್ಲರಿಗೂ ನಮಸ್ಕಾರ ಬಂಧುಗಳೇ. ಈ ಒಂದು ನಮ್ಮ ಜಾಲತಾಣದಲ್ಲಿ ನಾವು ಪ್ರತಿಯೊಬ್ಬರಿಗೆ ಸಹಾಯವಾಗುವಂತಹ ಲೇಖನಗಳನ್ನು ನಿಮಗೆ ನೀಡುತ್ತಿದ್ದು ಬಹು ಮುಖ್ಯವಾಗಿ ರೈತರಿಗೆ ಸಹಾಯವಾಗುವಂತಹ ಲೇಖನಗಳನ್ನು ನಾವು ಒದಗಿಸುತಿದ್ದೇವೆ.
ಇಂದಿನ ಈ ಲೇಖನದಲ್ಲಿ ದೇಶ್ಯಾದ್ಯಂತ ರೈತರ ಅಚ್ಚುಮೆಚ್ಚಿನ ಯೋಜನೆಯಾಗಿರುವಂತಹ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪ್ರಧಾನ ಮಂತ್ರಿಗಳ ರೈತರ ಗೌರವ ನಿಧಿ ಎಂಬ ಈ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಭಾರತ ದೇಶದ ಎಲ್ಲಾ ಅರ್ಹರ ರೈತರಿಗೆ ವಾರ್ಷಿಕವಾಗಿ ಕಂತುಗಳಲ್ಲಿ 6000 ಕೊಡುವ ಯೋಜನೆ ಇದಾಗಿದೆ. ಈ ಯೋಜನೆಯನ್ನು ಜಾರಿಗೆ ತರಲು 2019ರ ಮಧ್ಯಂತರ ಬಜೆಟ್ ನಲ್ಲಿ ಪಿಯುಶ್ ಗೋಯಲ್ ಅವರು ಜಾರಿಗೆ ತರಲು ಸಕಲ ಸಿದ್ಧತೆ ಮಾಡಿದ್ದರು.
ಈ ಯೋಜನೆಯನ್ನು ಜಾರಿಗೆ ತರಲು ಅನೇಕ ಜನರು ಕಾರಣಿಕರ್ತರಾಗಿದ್ದಾರೆ. ಅವರುಗಳಲ್ಲಿ ಪ್ರಮುಖ ಹೆಸರುಗಳೆಂದರೆ ಐಎಎಸ್ ಆಫೀಸರ್ ಆದಂತಹ ವಿವೇಕ್ ಅಗ್ರವಾಲ್ ರವರು ಪ್ರಮುಖ ವ್ಯಕ್ತಿಗಳಾಗಿದ್ದಾರೆ. ಇನ್ನು ಅನೇಕ ಜನರು ಈ ಒಂದು ಯೋಜನೆಯನ್ನು ಜಾರಿಗೆ ತರಲು ಕಾರಣರಾಗಿದ್ದಾರೆ.
ಪಿಎಂ ಕಿಸಾನ್ ಯೋಜನೆಯ ಒಂದು ಇತಿಹಾಸವನ್ನು ನೋಡುವುದಾದರೆ, ಈ ಯೋಜನೆಯು ಅಧಿಕೃತವಾಗಿ ಜಾರಿಗೆ ಬಂದಿದ್ದು 2019 ಫೆಬ್ರವರಿ 1 ರಂದು.
ಅಂದರೆ ಈ ಯೋಜನೆ ಜಾರಿಗೆ ಬಂದ ಇಲ್ಲಿಗೆ ಹೆಚ್ಚು ಕಡಿಮೆ ನಾಲ್ಕು ವರ್ಷಗಳು ಪೂರೈಕೆಯಾಗಿದೆ. ಈ ಯೋಜನೆಯ ಅನೇಕ ರೈತರ ಮೆಚ್ಚುಗೆಯನ್ನು ಪಡೆದಿದ್ದು, ರೈತರಿಗೆ ಬಹಳ ಅನುಕೂಲಕರವಾಗಿದೆ. ಈ ಸರ್ಕಾರವು ಕೊಡುವ ಈ ರೂ. 6000 ವರ್ಷಕ್ಕೆ ಸಣ್ಣ ಮೊತ್ತವಾಗಿರಬಹುದು.
ಆದರೆ ಅನೇಕ ಬಡ ಕುಟುಂಬಗಳ ಸಣ್ಣ ಪುಟ್ಟ ಖರ್ಚುಗಳಿಗೆ ಜೀವನ ನಡೆಸಲು ಸಹಾಯವಾಗಿದೆ ಎಂದು ತಿಳಿದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ತರಹದ ಯೋಜನೆಯನ್ನು ತೆಲಂಗಾಣ ಸರ್ಕಾರವು ಇವರಿಗಿಂತ ಮೊದಲೇ ಜಾರಿಗೆ ಬಳಿಸಿತ್ತು. ತೆಲಂಗಾಣ ಸರ್ಕಾರವು ಜಾರಿಗೆ ಗೊಳಿಸಿದ ರೈತ ಹಿತ ಯೋಜನೆ ಹೆಸರು ” ರೈತ ಬಂದು “.
ಈ ಯೋಜನೆಯ ಅಡಿಯಲ್ಲಿ ತೆಲಂಗಾಣ ಸರ್ಕಾರವು ಅರ್ಹ ರೈತರಿಗೆ ಆರ್ಥಿಕ ಸಹಾಯವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸುತಿತ್ತು.
ಈ ಯೋಜನೆಯು ಸಹ ಅನೇಕ ರೈತರ ಮೆಚ್ಚಿಯನ್ನು ಪಡೆದು, ಅದೇ ರೀತಿ ಈ ಯೋಜನೆಗೆ ಅನೇಕ ಪುರಸ್ಕಾರಗಳು ಸಹಿತ ಒಲಿದು ಬಂದಿವೆ. ಇದೇ ರೀತಿ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯು ಅತ್ಯುತ್ತಮ ಯೋಜನೆಯಾಗಿದ್ದು ಅನೇಕ ರೈತರ ಪಾಲಿನ ಬಹು ಸಹಾಯಕವಾಗಿದೆ.