ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ 2024 !
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ಸತತವಾಗಿ ಎರಡು ವರ್ಷಗಳಿಂದಲೂ ಕಾಲ ನಮ್ಮ ಜಾಲತಾಣದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವಂತಹ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
ಹೌದು ಸ್ನೇಹಿತರೆ, ವಿದ್ಯಾರ್ಥಿಗಳಿಗಾಗಿ ಕಳೆದ ನಾಲ್ಕು ವರ್ಷಗಳಿಂದಲೂ ಕಾಲ ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಅನ್ನು ನೀಡುತ್ತಿದ್ದು ಇದೀಗ ಈ ವರ್ಷವೂ ಕೂಡ ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಮುಂದುವರೆಯಲಿದೆ..
ರೈತರ ಮಕ್ಕಳಿಗಾಗಿ ಸಹಾಯವಾಗಲೆಂದು ಈ ಸ್ಕಾಲರ್ಶಿಪ್ ಯೋಜನೆಯು ಜಾರಿಗೆ ತಂದಿದ್ದು ಇದೀಗ ಈ ವರ್ಷವೂ ಕೂಡ ಎಂದಿನಂತೆ ರೈತವಿದ್ಯಾನಿಧಿ ಸ್ಕಾಲರ್ಶಿಪ್ ಅರ್ಜಿ ಆಹ್ವಾನಿಸಲಾಗಿದೆ..!
ಈ ಸ್ಕಾಲರ್ ಶಿಪ್ ಅರ್ಜಿ ಸಲ್ಲಿಸಲು ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಅರ್ಜಿ ಸಲ್ಲಿಸಲು ಬೇಕಾಗಿರುವ ಡೈರೆಕ್ಟಿಂಗ್ ಹಾಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಈ ಕೂಡಲೇ ತಿಳಿದುಕೊಳ್ಳೋಣ ಬನ್ನಿ..!
ರಾಜ್ಯ ಸರ್ಕಾರದಿಂದ ಈ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ ಜಾರಿಯಾಗಿದೆ. ಈ ಹಿಂದೆ ದಿನಗಳಲ್ಲಿಯೂ ಕೂಡ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ನೀಡಲಾಗಿತ್ತು, ಇನ್ನು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆಯ ಮುಕ್ತಾಯ ದಿನಾಂಕ ಕೂಡ ಇನ್ನು ಬಂದಿಲ್ಲಾ.
ಮುಕ್ತಾಯದ ದಿನಾಂಕದೊಳಗೆ ನೀವು ಕೂಡ ನಿಮ್ಮ ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮೂಲಕ ಅಪ್ಲೇ ಮಾಡಬಹುದು. ಅರ್ಜಿ ಸಲ್ಲಿಕೆ ಮಾಡಿರುವಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಬರೋಬ್ಬರಿ 11,000 ವಿದ್ಯಾರ್ಥಿ ವೇತನದ ಹಣ ಖಾತೆಗೆ ಜಮೆಯಾಗಲಿದೆ.
ರೈತರ ಮಕ್ಕಳಿಗೆ ಮಾತ್ರ ಈ ಸ್ಕಾಲರ್ಶಿಪ್ ಹಣ?
ರೈತರ ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿವೇತನದ ಹಣ ದೊರೆಯುತ್ತದೆ. ಸಾಮಾನ್ಯ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಅಭ್ಯರ್ಥಿಗಳು ಕೂಡ ರೈತರಾಗಿಯೇ ಕಂಡುಬರುತ್ತಾರೆ. ಆ ರೈತರ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳಬೇಕು ಮುಂದಿನ ದಿನಗಳಲ್ಲಿ ಒಳ್ಳೆಯ ವ್ಯಕ್ತಿಗಳಾಗಬೇಕು. ಶಿಕ್ಷಣವನ್ನು ಪಡೆಯಬೇಕೆಂಬ ಕಾರಣದಿಂದ ಮಾತ್ರ ರೈತರ ಮಕ್ಕಳಿಗೆ ಈ ವಿದ್ಯಾರ್ಥಿ ವೇತನದ ಹಣವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಮಾಡುವ ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ ರೈತರಾಗಿರಬೇಕು. ಫ್ರೂಟ್ಸ್ ಐಡಿಯನ್ನು ಯಾರೆಲ್ಲಾ ಹೊಂದಿರುತ್ತಾರೋ ಅಂತವರು ಮಾತ್ರ ಅರ್ಜಿ ಸಲ್ಲಿಕೆ ಮಾಡುವಂತಹ ಅರ್ಹತೆ ಹೊಂದಿರುತ್ತಾರೆ.
ಈ ಶಿಕ್ಷಣದ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನದ ಹಣ ದೊರೆಯುತ್ತದೆ
• 8 ರಿಂದ 10ನೇ ತರಗತಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ :- 2000 ಹಣ
• ಪಿಯುಸಿ ಐಟಿಐ ಡಿಪ್ಲೋಮೋ – 2,500 ದಿಂದ 3,000 ಹಣ
• ಬಿಕಾಂ, ಬಿಎ, ಬಿಎಸ್ಸಿ, ವಿದ್ಯಾರ್ಥಿಗಳಿಗೆ :- 5,000 ದಿಂದ 5,500 ಹಣ
• ಎಲ್ಎಲ್ಬಿ, ಬಿ ಫಾರ್ಮಸಿ ಶಿಕ್ಷಣಕ್ಕೆ :- 7,500 ದಿಂದ 7,000 ಹಣ
• ಎಂಬಿಬಿಎಸ್ ಮತ್ತು ಸ್ನಾತಕೋತರ ಪದವಿ ಮಾಡುತ್ತಿರುವಂತವರಿಗೆ :- ವಿದ್ಯಾರ್ಥಿನಿಗೆ 11,000 ವಿದ್ಯಾರ್ಥಿಗೆ 10,000 ಹಣ ಸಿಗಲಿದೆ.
ಅರ್ಜಿ ಸಲ್ಲಿಕೆಗೆ ಈ https://raitamitra.karnataka.gov.in/ ಒಂದು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮುಖಾಂತರ ನಿಮ್ಮ ಪೋಷಕರ ಫ್ರೂಟ್ ಐಡಿ ಯೊಂದಿಗೆ ನಿಮ್ಮ ದಾಖಲಾತಿಗಳನ್ನು ಕೂಡ ಸಲ್ಲಿಕೆ ಮಾಡಿವ ಮೂಲಕ ಅರ್ಜಿಯನ್ನು ಆನ್ಲೈನ್ ಸಲ್ಲಿಕೆ ಮಾಡಬಹುದು.