ರೈತರಿಗೆ ಸಹಾಯವಾಗಲೆಂದು ಗೊಬ್ಬರದ ಬೆಲೆಗಳಲ್ಲಿ ಭಾರಿ ಬದಲಾವಣೆ ತರಲಾಗಿದೆ..
ಹೌದು ರೈತ ಬಾಂಧವರೇ ಪ್ರಸ್ತುತ ದಿನಮಾನಗಳಲ್ಲಿ ಕೃಷಿ ಕೇವಲ ರಾಸಾಯನಿಕ ಗೊಬ್ಬರ ಮೇಲೆ ಆಧಾರಿತವಾಗಿದ್ದು ಈಗಾಗಲೇ ಹಿಂದಿನ ದಿನಗಳಲ್ಲಿ ಈ ಗೊಬ್ಬರ ಮಾರಾಟದಲ್ಲಿ ಗೋಲ್ಮಾಲ್ ಆಗುತ್ತಿರುವುದನ್ನು ಕಂಡ ರಾಜ್ಯ ಸರ್ಕಾರವು ಇದಕ್ಕೆ ತಡೆ ಆಜ್ಞೆ ಹಾಕಬೇಕೆಂಬ ಒಂದು ಉದ್ದೇಶದಿಂದ ಹೊಸ ಬೆಲೆಯನ್ನು ನಿಗದಿಪಡಿಸಲಾಗಿದೆ..!
ಹೊಸದಾಗಿ ನಿಗದಿಪಡಿಸಲಾಗಿದ ಬೆಲೆ ಈ ಕೆಳಗಿನಂತಿದೆ ನೋಡೋಣ ಬನ್ನಿ.
1) 45 ಕೆಜಿ ಯೂರಿಯಾ ಗೆ 266 ರೂಪಾಯಿ ಹೊಸದಾಗಿ ನಿಗದಿಪಡಿಸಲಾಗಿದೆ.
2) 50 ಕೆಜಿಯ ಡಿಎಪಿ ಗೆ 1350 ರೂಪಾಯಿ ಹೊಸದಾಗಿ ಬೆಲೆಯನ್ನು ನಿಗದಿಪಡಿಸಲಾಗಿದೆ
3)50 ಕೆಜಿಯ NPK ಒಂದು ಚೀಲಕ್ಕೆ 1,500 ಹೊಸದಾಗಿ ನಿಗದಿಪಡಿಸಲಾಗಿದ ಬೆಲೆ..
ಯಾವುದೇ ತರದ ಅಂತಹ ಗೋಲ್ಮಾಲ್ ಆಗಬಾರದೆಂದು ಸರ್ಕಾರವೇ ಈ ಮೇಲಿನ ಹೊಸ ನಿಯಮದಂತೆ ಹೊಸ ಬದಲಾವಣೆಯನ್ನು ತಂದಿದ್ದು ನೀರಿನ ದರದಂತೆ ನೀವು ಈಗ ಗೊಬ್ಬರವನ್ನು ಕೊಂಡುಕೊಳ್ಳಬಹುದಾಗಿದೆ…
ಗೊಬ್ಬರದ ಮಹತ್ವ…
ಪ್ರಸ್ತುತ ದಿನಮಾನಗಳಲ್ಲಿ ಕೃಷಿಯು ರಾಸಾಯನಿಕ ಗೊಬ್ಬರದ ಮೇಲೆ ಬಹುತೇಕವಾಗಿ ಆಧಾರಿತವಾಗಿದ್ದು ಅದರಿಂದಾಗಿ ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಗೊಬ್ಬರದ ಮಾಲೀಕರು ಗೊಬ್ಬರ ಮಾರಾಟ ಮಾಡುವಲ್ಲಿ ಗೋಲ್ಮಾಲ್ ಅನ್ನು ಮಾಡುತ್ತಿರುವುದಕ್ಕಾಗಿ ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ತಮ್ಮದೇ ಆದಂತಹ ಹೊಸ ಬೆಲೆಯನ್ನು ನಿಗದಿಪಡಿಸಲಾಗಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ..
ಅದಕ್ಕಾಗಿ ರಾಸಾಯನಿಕ ಗೊಬ್ಬರವನ್ನು ರೈತರು ಕೇವಲ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಬಳಸಬೇಕು ಎಂಬುದು ಒಂದು ಉತ್ತಮವಾದಂತಹ ನೆಲವಾಗಿದ್ದು ಆದರೆ ಲಾಭಕ್ಕಾಗಿ ರೈತರು ಸಹ ಅತಿ ಹೆಚ್ಚಿನ ಪ್ರಮಾಣದ ಗೊಬ್ಬರವನ್ನು ಬಳಸುತ್ತಿರುವುದಕ್ಕಾಗಿ ಮುಂದಿನ ಬರುವ ದಿನಮಾನಗಳಲ್ಲಿ ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಸಹ ಈಗಾಗಲೇ ತಿಳಿದು ಬಂದಿದೆ..
ಅದಕ್ಕಾಗಿ ರೈತ ಬಾಂಧವರೇ ಸಾವಯವ ಕೃಷಿಯನ್ನು ಮಾಡುವುದರಿಂದಲೂ ಸಹ ನಿಮಗೆ ಅತಿ ಹೆಚ್ಚು ಲಾಭ ಇದೆ ಆದರೂ ಸಹ ಇದನ್ನು ಅರಿಯದ ರೈತರು ಕೇವಲ ರಾಸಾಯನಿಕ ಗೊಬ್ಬರಕ್ಕೆ ಮಾರುಹೋಗಿ ಅತಿ ಹೆಚ್ಚು ರಾಸಾಯನಿಕ ಗೊಬ್ಬರವನ್ನು ಬಳಸುವುದು ರಿಂದ ಮಣ್ಣಿನ ಫಲವತ್ತತೆಯು ಸಹ ಇದರಿಂದ ಕಡಿಮೆಯಾಗುತ್ತದೆ..
ಅದಕ್ಕಾಗಿ ಕೇಂದ್ರ ಸರ್ಕಾರ ಹೊಸ ಯೋಜನೆಯಿಂದ ಸಾವಯವ ಕೃಷಿಗೆ ಉತ್ತೇಜನ ನೀಡುವುದಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಬರುವ ಮುಂದಿನ ದಿನಗಳಲ್ಲಿ ತರುತ್ತದೆ ಎಂದು ಆಶ್ವಾಸನೆಯನ್ನು ನೀಡಿದ್ದಾರೆ…
ಸಾವಯವ ಕೃಷಿ ಮಾಡಿ ಹಾಗೆ ಒಂದು ಉತ್ತಮ ಆರೋಗ್ಯವಾಗಿ ದೃಢವಾಗಿ ನಮ್ಮ ದೇಹವನ್ನು ಕಾಪಾಡಿಕೊಳ್ಳಬೇಕೆಂದರೆ ನಾವು ರಾಸಾಯನಿಕ ಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು