2023 ನೇ ಸಾಲಿನ ಬಜೆಟ್ ಮಂಡನೆ ಈಗಾಗಲೇ ಆಗಿದೆ.
ಹಲವಾರು ಹೊಸ ಕೆಲಸಗಳಿಗೆ ಈ ಬಜೆಟ್ ಮಂಡನೆಯಲ್ಲಿ ಅತಿ ಹೆಚ್ಚು ಮೊತ್ತದ ಹಣವನ್ನು ಮೀಸಲಿಕ್ಕಿದ್ದು ಕೃಷಿಗೂ ಸಹ ಸಹಾಯವಾಗಲೆಂದು ಹಲವು ಯೋಜನೆಗಳು ಮಂಡನೆ ಯಾಗಿವೆ.
ಈ ಬಾರಿ ಪಿಎಂ ಕಿಸಾನ್ ಯೋಜನೆಯಲ್ಲಿ 6,000 ನೀಡುತ್ತಿರುವ ಹಣವನ್ನು 8000 ಏರಿಕೆ ಮಾಡಲಾಗಿದೆ.
ಮೊದಲು ಮೂರು ಬಾರಿ ಅಂದರೆ ಮೂರು ಕಂತಿನಲ್ಲಿ ಹಣವನ್ನು ನೀಡುತ್ತಿದ್ದು ಈಗ ನಾಲ್ಕು ಕಂತಿನಲ್ಲಿ ರೂ.8000 ಅನ್ನು ಒಂದು ವರ್ಷಕ್ಕೆ ರೈತರ ಖಾತೆಗೆ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ನೀಡಲಾಗುತ್ತದೆ.
ಇದಕ್ಕಾಗಿ ಹಲವಾರು ಕಠಿಣ ಕ್ರಮಗಳನ್ನು ತಂದಿದ್ದು ಈ ಕ್ರಮಗಳನ್ನು ನೀವು ಪಾಲಿಸಿದ್ದೆ ಆದಲ್ಲಿ ಮಾತ್ರ ನಿಮಗೆ ಈ ಪಿಎಂ ಕಿಸಾನ್ ಹಣವು ನಿಮ್ಮ ಅಕೌಂಟಿಗೆ ಇನ್ನು ಮುಂದೆ ಬರುತ್ತದೆ.
ಕಠಿಣ ಕ್ರಮಗಳು-
1) ಕಡ್ಡಾಯವಾಗಿ ಈ ಕೆ ವೈ ಸಿ ಯನ್ನು ಮಾಡಿಸಿರಲೇಬೇಕು
2) ನೀವು ನಿಮ್ಮ ಹೊಲದ ಪಹಣಿಯ ಸಂಪೂರ್ಣ ಮಾಹಿತಿಯನ್ನು ನೀಡಿರಲೇ ಬೇಕಾಗಿರುತ್ತದೆ
3) ಕಡಿಮೆ ಪ್ರಮಾಣದ ಹೊಲವನ್ನು ಹೊಂದಿರಬೇಕಾಗಿರುತ್ತದೆ
4)ಸರಿಯಾದ ಬ್ಯಾಂಕ್ ಮಾಹಿತಿಯನ್ನು ನೀಡಿರ್ಲೇಬೇಕಾಗಿರುತ್ತದೆ.
ಈ ಮೇಲಿನ ಕ್ರಮಗಳನ್ನು ನೀವು ಪಾಲಿಸಿದರೆ ಮಾತ್ರ ಇನ್ನು ಮುಂದಿನ ಕಂತು ನಲ್ಲಿ ಹಣವು ಜಮೀನಾಗುತ್ತಿದ್ದು ಈ ವರ್ಷದಿಂದ 8,000 ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಹಾಗೆಯೇ ಹೊಸ ನೊಂದಾಯಿತ ರೈತರಿಗೂ ಸಹ ಈ ಕೆವೈಸಿಯನ್ನು ಕಡ್ಡಾಯವಾಗಿ ಮಾಡಲಾಗಿದ್ದು ಹೊಸ ಅರ್ಜಿಗಳಿಗೂ ಸಹ ಅವಕಾಶವನ್ನು ನೀಡಲಾಗಿದೆ.
ಇದಲ್ಲದೆ ಕೃಷಿಕರ ಸಾಲಕ್ಕೆ ಬಹುದೊಡ್ಡ ಮೊತ್ತವನ್ನು ಮೀಸಲಿಟ್ಟಿದ್ದಾರೆ.
ಇನ್ನು ಈ ಬಜೆಟ್ ಮಂಡನೆಯಲ್ಲಿ ಏನೇನಿದೆ ನೋಡೋಣ ಬನ್ನಿ
ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ
ಬೆಳೆ ಯೋಜನೆ ಮಾಡುವ ಸಂದರ್ಭ ರೈತ ಕೇಂದ್ರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಸಾರ್ವಜನಿಕ ವೇದಿಕೆಯಾಗಿ ನಿರ್ಮಿಸಲಾಗುವುದು. ಕೃಷಿ ಒಳಹರಿವು, ಸಾಲ ಮತ್ತು ವಿಮೆ, ಬೆಳೆ ಅಂದಾಜು, ಮಾರುಕಟ್ಟೆಗೆ ಸಂಬಂಧಿಸಿದ ವಿಷಯಗಳಲ್ಲಿ ರೈತರಿಗೆ ಸಹಾಯ ಮಾಡುತ್ತದೆ. ಅಲ್ಲದೆ, ಕೇಂದ್ರವು 10 ಮಿಲಿಯನ್ ರೈತರನ್ನು ನೈಸರ್ಗಿಕ ಕೃಷಿ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.
ಆತ್ಮನಿರ್ಭರ್ ಕ್ಲೀನ್ ಪ್ಲಾಂಟ್
2,200 ಕೋಟಿ ರೂಪಾಯಿ ವೆಚ್ಚದಲ್ಲಿ “ಹೆಚ್ಚಿನ ಮೌಲ್ಯದ ತೋಟಗಾರಿಕಾ ಬೆಳೆಗಳಿಗೆ” ರೋಗ-ಮುಕ್ತ ಗುಣಮಟ್ಟದ ನಾಟಿ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸಲು ‘ಆತ್ಮನಿರ್ಭರ್ ಕ್ಲೀನ್ ಪ್ಲಾಂಟ್’ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.
ಪಿಎಂ ಪ್ರಣಾಮ್ ಯೋಜನೆ
ಪರ್ಯಾಯ ರಸಗೊಬ್ಬರಗಳನ್ನು ಬಳಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸಲು PM PRANAM ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪಿಎಂ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಉಪಯೋಜನೆ
ಕೃಷಿಕರ ಆದಾಯ ಹೆಚ್ಚಿಸುವಂತಹ ಯೋಜನೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಪಿಎಂ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಉಪಯೋಜನೆಗಳನ್ನು ಘೋಷಣೆ ಮಾಡಲಾಗುವುದು. ಇದಕ್ಕಾಗಿ 6,000 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆಗಳು
ಶ್ರೀ ಅನ್ನ ಗೋಧಿ, ಶ್ರೀ ಅನ್ನ ರಾಗಿ, ಶ್ರೀ ಅನ್ನ ಸಜ್ಜೆ ಸೇರಿದಂತೆ ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಇದಕ್ಕೆ ಪೂರಕವಾಗಿ ಹೈದರಾಬಾದ್ನಲ್ಲಿ ಶ್ರೀ ಅನ್ನ ಸಂಶೋಧನಾ ಕೇಂದ್ರ ಆರಂಭ ಮಾಡಲಾಗುವುದು.
ಉಳಿದಂತೆ, ಹತ್ತಿಯ ಉತ್ಪಾದನೆಯನ್ನು ಹೆಚ್ಚಿಸಲು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಕ್ಲಸ್ಟರ್ ಆಧಾರಿತ ಮತ್ತು ಮೌಲ್ಯ ಸರಪಳಿ ವಿಧಾನವನ್ನು ಅಳವಡಿಸಿಕೊಳ್ಳುವುದಾಗಿ ಸೀತಾರಾಮನ್ ತಿಳಿಸಿದ್ದಾರೆ. ಇದು ರೈತರು, ರಾಜ್ಯ ಮತ್ತು ಉದ್ಯಮದ ನಡುವಿನ ಸಹಯೋಗವನ್ನು ಇನ್‌ಪುಟ್ ಪೂರೈಕೆಗಳು, ವಿಸ್ತರಣಾ ಸೇವೆಗಳು ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಒಳಗೊಂಡಿರುತ್ತದೆ.