ಒಂದು ಎಕರೆಯದಲ್ಲಿ ಲಕ್ಷಗಟ್ಟಲೆ ಲಾಭ ಕೊಡುವ ಫಲ!!
1) ಡ್ರ್ಯಾಗನ್ ಫ್ರೂಟ್
ನಮಸ್ಕಾರ ರೈತ ಬಾಂಧವರೇ
ಮೊದಲು ನಾವು ಯಾವುದೇ ಒಂದು ಬೆಳೆಯನ್ನು ನಮ್ಮ ಹೊಲದಲ್ಲಿ ಬಿತ್ತನೆ ಮಾಡಬೇಕಾದರೆ ನಾವು ಮೊದಲು ನಮ್ಮ ಹೊಲದ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ ಮಳೆಯಾಶ್ರಿತವೇ ಅಥವಾ ನಮ್ಮ ಹೊಲದಲ್ಲಿ ನೀರಾವರಿ ಇದೆ ಎಂದು ಅರ್ಥ ಮಾಡಿಕೊಂಡು ನಾವು ನಮ್ಮ ಹೊಲಕ್ಕೆ ಬೇಕಾದ ಬೆಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಆಶ್ರಿತ ಇರುವುದರಿಂದ ಮಳೆಯ ಆಶ್ರಿತ ಬೆಳೆಗಳಿಗೆ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ.
ಮಳೆ ಆಶ್ರಿತ ರೈತರು ತಮ್ಮ ಹೊಲದಲ್ಲಿ ಡ್ರ್ಯಾಗನ್ ಫ್ರೂಟ್ ಮತ್ತು ಸೀತಾಫಲವನ್ನು ಬೆಳೆಯಬಹುದು ಫಲಗಳು ನಮಗೆ ಅತಿ ಹೆಚ್ಚು ಲಾಭವನ್ನು ಕೊಡುತ್ತವೆ.
ಅದಕ್ಕಾಗಿ ನನ್ನ ಸಲಹೆ ಮಳೆಯಾಶ್ರಿತ ಬೆಳಗೆ.
1) ಡ್ರ್ಯಾಗನ್ ಫ್ರೂಟ್
ಇದೊಂದು ಅತ್ಯಂತ ಲಾಭದಾಯಕ ಫಲವಾಗಿದೆ.
ಇದನ್ನು ಮೊದಲು ಅಮೆರಿಕಾ ದೇಶದಲ್ಲಿ ಕಂಡು ಹಿಡಿಯಲಾಯಿತು. ಡ್ರ್ಯಾಗನ್ ಫ್ರೂಟ್ನಲ್ಲಿ ಅತಿ ಹೆಚ್ಚು ವಿಟಮಿನ್ ಮತ್ತು ಪ್ರೋಟೀನ್ಸ್ ಇರುವುದರಿಂದ ಇದನ್ನು ಔಷಧಿಯಾಗಿ ಬಳಸಲಾಗುತ್ತದೆ. ಡ್ರ್ಯಾಗನ್ ಫ್ರೂಟ್ ನಲ್ಲಿ ಅತಿ ಹೆಚ್ಚು ಔಷಧಿಯ ಗುಣಗಳು ಇರುವುದರಿಂದ ಇದನ್ನು ಅತಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕುಡಿಯುವ ಔಷಧಿಗಳನ್ನು ಡ್ರ್ಯಾಗನ್ ಫ್ರೂಟ್ ನಿಂದ ಮಾಡಲಾಗುತ್ತದೆ.
ಡ್ರ್ಯಾಗನ್ ಫ್ರೂಟ್ಸ್ ನಲ್ಲಿ ಔಷಧೀಯ ಗುಣಗಳಿರುವ ಕಾರಣ ಇದೊಂದು ದುಬಾರಿಯ ವಸ್ತುವಾಗಿದೆ.
ಡ್ರಾಗನ್ ಹಣ್ಣಿನಲ್ಲಿ ಅತೀ ಹೆಚ್ಚು ಕಬ್ಬಿನಾಂಶವಿದೆ ಮತ್ತು ಡ್ರ್ಯಾಗನ್ ಹಣ್ಣಿನಲ್ಲಿ ಅತಿ ಹೆಚ್ಚು ವಿಟಮಿನ್ ಸಿ ಇದ್ದು ಇದು ನಮ್ಮ ದೇಹಕ್ಕೆ ಅತಿ ಒಳ್ಳೆಯ ಆಹಾರವಾಗಿದೆ.
ಇಲ್ಲದೆ ಡ್ರ್ಯಾಗನ್ ಫ್ರೂಟ್ ನಮ್ಮ ದೇಹದ ಕಬ್ಬಿನಾಂಶವನ್ನು ಹೆಚ್ಚಿಸುತ್ತದೆ.
ಡ್ರ್ಯಾಗನ್ ಫ್ರೂಟ್ ಅನ್ನು ಹೇಗೆ ಬೆಳೆಯಬೇಕು!!
ಡ್ರ್ಯಾಗನ್ ಫ್ರೂಟ್ ಅನ್ನು ಸಾಲಿನಲ್ಲಿ ಹಚ್ಚಲಾಗುತ್ತದೆ.
ಒಂದು ಸಾರಿನಲ್ಲಿ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಕನಿಷ್ಠವಾದರೂ 10 ಫೀಟ್ ಅಂತರವಿರಬೇಕು.
ಮತ್ತು ಡ್ರ್ಯಾಗನ್ ಫ್ರೂಟ್ ಗಿಡಕ್ಕೆ ಸಪೋರ್ಟ್ ಬೇಕಾಗಿರುವುದರಿಂದ ಬಿದಿರು ಅಥವಾ ಕಲ್ಲುಗಳನ್ನು ಬಳಸಲಾಗುತ್ತದೆ. ಒಂದು ಬಿದಿರಿನಿಂದ ಇನ್ನೊಂದು ಬಿದರಿಗೆ ತಂತಿಯನ್ನು ಎಳೆದುಕೊಂಡು ಸಪೋರ್ಟಿವ್ ಸಿಸ್ಟಮ್ ಅನ್ನು ನಾವು ರಚಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಾನು ಕಳಿಸಿರುವ ಫೋಟೋಗಳನ್ನು ನೋಡಿ.
ಚಿತ್ರದಲ್ಲಿ ಕಂಡಿರುವಂತಿ ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಕನಿಷ್ಠ ಪಕ್ಷ 15ಪೀಟ್ ಅಂತರವಿರಬೇಕು.
ನೆನಪಿರಲಿ ರೈತ ಬಾಂಧವರೇ ಸಾಲಿನಲ್ಲಿ ಒಂದು ಆಗಿಂದ ಇನ್ನೊಂದು ಆಗಿಗೆ 10 ಫೀಟ್ ಅಂತರ ಮತ್ತು ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಹದಿನೈದು ಫೀಟ್ ಅಂತರವಿರಬೇಕು.
ಡ್ರ್ಯಾಗನ್ ಫ್ರೂಟ್ ಅನ್ನು ನಮ್ಮ ಹೊಲದಲ್ಲಿ ಬೆಳೆಯಲು ಮುಖ್ಯ ಕಾರಣವೇನೆಂದರೆ ಇದು ಅತಿ ಹೆಚ್ಚು ಲಾಭದಾಯಕ ಮತ್ತು ಮಳೆ ಆಶ್ರಿತವಾಗಿದೆ ಮತ್ತು ಅತಿ ಹೆಚ್ಚು ಫಲವನ್ನು ನಮಗೆ ನೀಡುತ್ತದೆ.
ಒಂದು ಎಕರೆಗೆ ಕಡಿಮೆ ಅಂದರೂ ಎರಡ ರಿಂದ ಮೂರು ಲಕ್ಷ ರೂಪಾಯಿ ಲಾಭವನ್ನು ಈ ಡ್ರ್ಯಾಗನ್ ಫುಡ್ ನಮಗೆ ತಂದುಕೊಡುತ್ತದೆ.
ಹಲವು ರೈತರು ಡ್ರ್ಯಾಗನ್ ಫ್ರೂಟ್ ಅನ್ನು ಬೆಳೆದು ಒಂದು ಎಕರೆಯಲ್ಲಿ 4 ರಿಂದ 5 ಲಕ್ಷ ಲಾಭವನ್ನು ತೆಗೆದಿದ್ದಾರೆ.
ಈ ಗಿಡಕ್ಕೆ ಯಾವುದೇ ಔಷಧಿಯ ಅವಶ್ಯಕತೆ ಇಲ್ಲ.
ಮತ್ತು ಈ ಗಿಡವನ್ನು ಯಾವುದೇ ಜಾನುವಾರುಗಳು ಮುಟ್ಟುವುದಿಲ್ಲ.
ಅದಕ್ಕಾಗಿ ನಮ್ಮ ರೈತ ಬಾಂಧವರಿಗೆ ನಾನು ನೀಡುವ ಸಲಹೆ ಈ ಡ್ರ್ಯಾಗನ್ ಫ್ರೂಟ್ ಅನ್ನು ನೀವು ನಿಮ್ಮ ಹೊಲದಲ್ಲಿ ಬೆಳೆಯುವುದು ಉತ್ತಮ.
ಅತಿ ಹೆಚ್ಚು ಕಡಿಮೆ ನೀರಿನಲ್ಲಿ ಬೆಳೆಯನ್ನು ಬೆಳೆಯಬಹುದಾದ ಸಾಧನವಾಗಿದೆ.
ಕೇವಲ ಒಂದು ವರ್ಷದಲ್ಲಿ ಒಂದು ಸಲ ಮಾತ್ರ ನಾವು ಗೊಬ್ಬರವನ್ನು ಈ ಡ್ರ್ಯಾಗನ್ ಫ್ರೂಟ್ ಅಗಿಗಳಿಗೆ ಹಾಕಬೇಕು.
ಖರ್ಚು ಕಡಿಮೆ ಲಾಭ ಜಾಸ್ತಿ!!.