ಕರುನಾಡ ರೈತರಿಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಇಲ್ಲಿಯವರೆಗೂ ಪಿಎಂ ಕಿಸಾನಿನ 14ನೇ ಕಂತಿನವರೆಗೂ ಹಣ ಬಿಡುಗಡೆಯಾಗಿದ್ದು ಇದೀಗ ಪಿಎಂ ಕಿಸಾನ್ 15ನೇ ಕಂತಿನ ಹಣ ಬಿಡುಗಡೆಯಾಗಿದೆ ನಿಮ್ಮ ಖಾತೆಯನ್ನು ಈ ಕಂತಿನ ಹಣ ಜಮಾ ಆಗಿದೆ ಅಥವಾ ಇಲ್ಲವೋ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
8 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಹಣ ಬಿಡುಗಡೆ
ಬೆಂಗಳೂರು : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತಿನ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಜಾರ್ಖಂಡ್ ಭೇಟಿ ವೇಳೆಯಲ್ಲಿ ಪಿಎಂ ಕಿಸಾನ್ ಯೋಜನೆಯ 15 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ.
ಪಿಎಂ-ಕಿಸಾನ್ ಅಡಿಯಲ್ಲಿ 8 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಅರ್ಹ ರೈತರಿಗೆ ಸುಮಾರು 18,000 ಕೋಟಿ ರೂ.ಯನ್ನು ಬಿಡುಗಡೆ ಮಾಡಲಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ 15ನೇ ಕಂತಿನ ಸ್ಟೇಟಸ್ ಪರಿಶೀಲನೆ :
ಅಧಿಕೃತ PM KISAN ವೆಬ್‌ಸೈಟ್
https://pmkisan.gov.in/23es De
• Payment Success tab ಅಡಿಯಲ್ಲಿ ಭಾರತದ ನಕ್ಷೆ ಕಾಣಿಸುತ್ತದೆ.
ಬಲಭಾಗದಲ್ಲಿ, “ಡ್ಯಾಶ್‌ಬೋರ್ಡ್” ಎಂಬ ಹಳದಿ ಬಣ್ಣದ ಟ್ಯಾಬ್ ಇರುತ್ತದೆ
· ಡ್ಯಾಶ್‌ಬೋರ್ಡ್ ಮೇಲೆ ಕ್ಲಿಕ್ ಮಾಡಿ
ಕ್ಲಿಕ್ ಮಾಡಿದ ನಂತರ, ಹೊಸ ಪುಟ ತೆರೆಯುತ್ತದೆ
• ವಿಲೇಜ್ ಡ್ಯಾಶ್‌ಬೋರ್ಡ್ ಟ್ಯಾಬ್‌ನಲ್ಲಿ, ನಿಮ್ಮ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು
ರಾಜ್ಯ ಜಿಲ್ಲೆ ಉಪಜಿಲ್ಲೆ ಮತ್ತು ಪಂಚಾಯತ್ ಆಯ್ಕೆಮಾಡಿ
• ನಂತರ ಶೋ ಬಟನ್ ಕ್ಲಿಕ್ ಮಾಡಿ
• ಇದರ ನಂತರ ನೀವು ನಿಮ್ಮ ವಿವರಗಳನ್ನು ಆಯ್ಕೆ ಮಾಡಬಹುದು
• ಗೆಟ್ ರಿಪೋರ್ಟ್ ಬಟನ್ ಕ್ಲಿಕ್ ಮಾಡಿ
• ಈಗ ನೀವು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಬಹುದು
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಯೋಜನೆಯಡಿಯಲ್ಲಿ ಪ್ರತಿ ವರ್ಷಕ್ಕೆ 6000 ರೂಪಾಯಿಯನ್ನು ಮೂರು ಮಾಸಿಕ ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತದೆ