ನಮಸ್ತೆ ಕರುನಾಡು ಬಾಂಧವರೇ, ಸಂತೋಷ ಪಡುವಂತಹ ಸುದ್ದಿ ಭಾಗ್ಯಲಕ್ಷ್ಮೀ ಬಾಂಡ್ ಗೆ ಮುಂದಿನ ಮಾರ್ಚ್ ಗೆ 18 ವರ್ಷ ತುಂಬಲಿದೆ. ಈ ಯೋಜನೆಯ ಮೊದಲ ತಂಡದ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರದಲ್ಲಿ ಇರುವಾಗ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಇಬ್ಬರು ಹೆಣ್ಣುಮಕ್ಕಳಿಗೆ ಅನುಕೂಲವಾಗಲಿ ಎಂದು 2006-07ರಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಆರಂಭಿಸಿದ್ದರು.
ಯಡಿಯೂರಪ್ಪನವರ ಸರ್ಕಾರವು ಎಲ್ಐಸಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು, ಹೆಣ್ಣು ಮಗುವಿನ ಹೆಸರಿನಲ್ಲಿ 10,000 ಠೇವಣಿ ಮಾಡಿಸಿ, ಮಗುವಿಗೆ 18 ವರ್ಷ ತುಂಬಿದಾಗ ಮೆಚ್ಯೂರಿಟಿ ಹಣ ನೀಡುವುದ ಒಪ್ಪಂದದ ಕರಾರು ಆಗಿತ್ತು. ಈ ಯೋಜನೆಯನ್ನು 2020ರ ಏಪ್ರಿನಿಂದ ಜೀವ ವಿಮಾ ನಿಗಮದಿಂದ ಅಂಚೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಈಗ ಅದು ಭಾಗ್ಯಲಕ್ಷ್ಮಿ,ಬದಲಾಗಿ ಸುಕನ್ಯಾ ಯೋಜನೆ ಎಂದಾಗಿದೆ.
ಈ ಯೋಜನೆ ಮೂಲಕ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಯೋಜನೆಯ ಲಾಭವನ್ನು ಅರ್ಹ ಮತ್ತು ನಿಯಮ ಪಾಲಿಸಿದ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ. ಇದು ಹೆತ್ತವರ ಹಾಗೂ ಫಲಾನುಭವಿಗಳಿಗೆ ಸಂತೋಷ ಪಡುವಂತಹ ಸುದ್ದಿಯಾಗಿದೆ.
ಎಷ್ಟು ಹಣ ಸಿಗಲಿದೆ ?
ಭಾಗ್ಯಲಕ್ಷ್ಮಿ ಬಾಂಡ್ ಒಂದು ಕುಟುಂಬದ ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಸಿಗಲಿದೆ. 2008 ಜುಲೈ ತಿಂಗಳಿನ ಒಳಗೆ ಜನಿಸಿದ ಹೆಣ್ಣು ಮಗುವಿಗೆ ಭಾಗ್ಯ ಲಕ್ಷ್ಮಿ ಬಾಂಡ್ ಮಾಡಿಸಿದ್ದರೆ, ಸಮಯದಲ್ಲಿ ಆ ಹೆಣ್ಣು ಮಗುವಿನ ಹೆಸರಿನಲ್ಲಿ 10,000ಗಳನ್ನು ಸರ್ಕಾರ ಎಫ್ ಡಿ ಇಟ್ಟಿರುತ್ತದೆ.
ಎಲ್ ಐ ಸಿ ಸಹಯೋಗದೊಂದಿಗೆ ಸರ್ಕಾರ ಈ ಬಾಂಡ್ ಆರಂಭಿಸಿತ್ತು. 2024 ಮಾರ್ಚ್ ತಿಂಗಳಿನಲ್ಲಿ 18 ವರ್ಷ ತುಂಬಿರುವ ಹೆಣ್ಣು ಮಗುವಿಗೆ 34,751 (ಮೊದಲ ಮಗುವಿಗೆ) ಸಿಗಲಿದೆ. ಇನ್ನು ಎರಡನೇ ಮಗುವಿಗೆ 40,619 ರೂಪಾಯಿ ಸಿಗಲಿದೆ.
2008 ಆಗಸ್ಟ್ ತಿಂಗಳಿನ ನಂತರ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಿದ್ದರೆ, ಮೊದಲ ಮಗುವಿಗೆ 19,300 ರೂ. ಎಫ್ ಡಿ ಹಣವನ್ನು ಸರ್ಕಾರ ಮೀಸಲಿಟ್ಟಿದೆ. ಈ ಸಮಯದಲ್ಲಿ ಬಾಂಡ್ ಮಾಡಿಸಿದ ಮೊದಲ ಮಗುವಿಗೆ 1,00,051 ರೂಪಾಯಿಗಳು ಸಿಗಲಿದೆ. ಎರಡನೇ ಮಗುವಿಗೆ 18.350 ರೂಪಾಯಿಗಳ ಎಫ್ ಡಿ ಸರ್ಕಾರ ಮೀಸಲಿಟ್ಟಿದೆ. ಇವರಿಗೆ 1,00,097 ರೂಪಾಯಿಗಳು ಸಿಗಲಿದೆ. ಇಷ್ಟು ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಮಾರ್ಚ್ 2024ರಲ್ಲಿ ವರ್ಗಾವಣೆ ಮಾಡಲಾಗುವುದು.
-ಮಗುವಿನ ಜನನವನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು.
-ಮಗುವಿಗೆ ಆರೋಗ್ಯ ಇಲಾಖೆಯ ಕಾರ್ಯಕ್ರಮದಂತೆ ರೋಗನಿರೋಧಕ ಹಾಕಿಸಿರಬೇಕು.
-ಅಂಗನವಾಡಿ ಕೇಂದ್ರಕ್ಕೆ ನೋಂದಣಿಯಾಗಿರಬೇಕು.
-ಶಿಕ್ಷಣ ಇಲಾಖೆಯ ನೋಂದಾಯಿತ ಶಾಲೆಗಳಲ್ಲಿ ಮಗುವನ್ನು ಶಾಲೆಗೆ ದಾಖಲಿಸಿರಬೇಕು.
-ಮಗು ಬಾಲಕಾರ್ಮಿಕರಾಗಿರಬಾರದು.
-18 ವರ್ಷ ಪೂರ್ಣಗೊಳ್ಳುವವರೆಗೆ ವಿವಾಹ ಆಗಿರಬಾರದು.
ಭಾಗ್ಯಲಕ್ಷ್ಮಿ ಬಾಂಡ್ ಈಗಲೂ ಮಾಡಿಸಬಹುದೇ?
ಈಗ ಭಾಗ್ಯಲಕ್ಷ್ಮಿ ಬಾಂಡ್ ನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ. ಹಾಗಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ಜನಿಸಿದ ತಕ್ಷಣವೇ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆರಂಭಿಸಬಹುದು.
ಬಡತನ ರೇಖೆಗಿಂತ ಕೆಳಗಿನವರು ಎಂದರೆ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬದ ಮೊದಲ ಎರಡು ಹೆಣ್ಣು ಮಕ್ಕಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಪೋಸ್ಟ್ ಆಫೀಸ್ನಲ್ಲಿ ಸಹ ಈ ಯೋಜನೆಯನ್ನು ಆರಂಭಿಸಬಹುದು.