ದಿನೇ ದಿನೇ ಗಗನಕ್ಕೇರುತ್ತಿದೆ ಈರುಳ್ಳಿಯ ಬೆಲೆ…! ಇಂದಿನ ಈರುಳ್ಳಿಯ ಬೆಲೆ ನಿಮಗೆ ಗೊತ್ತೇ..? ಈಗಲೇ ತಿಳಿಯಿರಿ

ಪೂರೈಕೆ ಕೊರತೆ ಹಿನ್ನೆಲೆಯಲ್ಲಿ ನಗರದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಕೆಜಿಗೆ ಕ 60 – ಕ 65 ವರೆಗೂ ಮಾರಾಟವಾಗು ತಿದೆ. ಶೀಘ್ರವೇ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ವರ್ತಕರು ವ್ಯಕ್ತಪಡಿಸುತ್ತಿದ್ದಾರೆ.

WhatsApp Group Join Now
Telegram Group Join Now

ಅನಾವೃಷ್ಟಿಯಿಂದ ಈ ಬಾರಿ ರಾಜ್ಯದಲ್ಲಿ ಈರುಳ್ಳಿ ತೀರಾ ಕಡಿಮೆ ಪ್ರಮಾಣದಲ್ಲಿ ಬೆಳೆದಿರುವುದು, ಪಕ್ಕದ ಮಹಾರಾಷ್ಟ್ರ ಹಾಗೂ ಗುಜರಾತ್‌ನಿಂದಲೂ ಈ ವೇಳೆಗೆ ಈರುಳ್ಳಿ ಪೂರೈಕೆ ಆಗದಿರುವುದ ರಿಂದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಹೀಗೆಯೆ ಮುಂದು ವರಿದರೆ ಶೀಘ್ರವೇ ಕ80- 2100 ತಲುಪಬಹುದು ಎಂದು ವರ್ತಕರು ವಿಶ್ಲೇಷಿಸಿದ್ದಾರೆ.

ಗುರುವಾರ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳಪೆ, ಸಾಧಾರಣ ಗುಣಮಟ್ಟದ ಈರು ಳ್ಳಿಯೂ ಕ್ವಿಂಟಲ್‌ಗೆ €3800 – 74200 ನಂತೆ ಮಾರಾಟವಾಗಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ (ನಾಫೆಡ್) ಮೂಲಕ ಬೆಲೆ ನಿಯಂತ್ರಣದ ಉದ್ದೇಶಕ್ಕಾಗಿ ಬೆಂಗಳೂರಿಗೆ ಪೂರೈಸುತ್ತಿರುವ ಈರುಳ್ಳಿಯೂ ಕ್ವಿಂಟಲ್‌ಗೆ 24000- 24600ನಂತೆ ಮಾರಾಟವಾಗಿ ದಾಖಲೆ ಬರೆದಿದೆ. ಅತ್ಯುತ್ತಮ ಎಂದರೆ ಮಹಾರಾಷ್ಟ್ರದ ಈರುಳ್ಳಿ 25000- ೬ 6000 ವರೆಗೆ ವ್ಯಾಪಾರವಾ ಗಿದೆ. ಈ ಗುಣಮಟ್ಟದ ಈರುಳ್ಳಿ ಪ್ರಮಾಣ ಕಡಿಮೆ ಇದೆ.

ಸಾಗಾಟ ವೆಚ್ಚ, ಕೂಲಿ, ಮತ್ತಿತರ ಕಾರಣದಿಂದ ಚಿಲ್ಲರೆ ಮಾರು ಕಟ್ಟೆಗೆ ತಲುಪುವ ಹೊತ್ತಿಗೆ ಈರುಳ್ಳಿ ಬೆಲೆ ಮತ್ತಷ್ಟು ಹೆಚ್ಚಾಗುತ್ತಿದೆ. ನಗರದ ಕೆ.ಆರ್.ಮಾರುಕಟ್ಟೆ, ಶೇಷಾದ್ರಿ ಪುರ, ಮಲ್ಲೇಶ್ವರ, ಜಯನಗರ ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆಜಿಗೆ 50- 65 ವರೆಗೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್, ಮಾಲ್‌ಗಳಲ್ಲಿ 5-10 ಹೆಚ್ಚು ಬೆಲೆ ಇದೆ. ಕಳೆದ ಹದಿನೈದು ದಿನಗಳ ಹಿಂದೆ 100ಗೆ 3-4 ಕೆಜಿ ಲಭ್ಯ ವಾಗುತ್ತಿತ್ತು. ಆದರೆ, ಈಗ ಒಂದೂವರೆ ಎರಡು ಕೆಜಿ ಸಿಗುತ್ತಿದೆ.

ಕಾರಣವೇನು?:

ರಾಜ್ಯದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆ ಎನಿಸಿದ ಯಶವಂತಪುರ ಎಪಿಎಂಸಿಗೆ ಸೀಸನ್ ಇರುವ ಈ ವೇಳೆಗೆ ಕನಿಷ್ಠವೆಂದರೂ ಒಂದು ಲಕ್ಷ ಮೂಟೆ ಈರುಳ್ಳಿ ಬರುತ್ತಿತ್ತು. ಆದರೆ, ಸದ್ಯ 50-55 ಸಾವಿರ ಮೂಟೆಗಳುಮಾತ್ರ ಬರುತ್ತಿವೆ. ಬಾಗಲಕೋಟೆ, ಗದಗ, ವಿಜಯಪುರ ಸೇರಿ ಉತ್ತರ ಕರ್ನಾಟಕ ಭಾಗದಿಂದ ನಿರೀಕ್ಷಿತ ಪ್ರಮಾಣದಷ್ಟು ಬರುತ್ತಿಲ್ಲ. ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲೂ ಮಳೆ ವಿಳಂಬ ಹಿನ್ನೆಲೆಯಲ್ಲಿ ಅಲ್ಲಿಂದಲೂ ಆವಕ ಕಡಿಮೆಯಾಗಿದೆ. ನವೆಂಬರ್‌ಅಂತ್ಯ ಅಥವಾ ಡಿಸೆಂಬ ಮಧ್ಯಂತರದಿಂದ ಆ ರಾಜ್ಯಗಳಿಂದ ಪೂರೈಕೆ ಆಗಬಹುದು ಎನ್ನಲಾಗಿದೆ. ಸದ್ಯ ಬೆಂಗಳೂರಿಂದ ತಮಿಳುನಾಡು, ಆಂಧ್ರಕ್ಕೆ ಸ್ವಲ್ಪ ಪ್ರಮಾಣದ ಈರುಳ್ಳಿ ರಫ್ತಾಗುತ್ತಿರುವುದು ಬಿಟ್ಟರೆ ಉಳಿದ ದಕ್ಷಿಣ ರಾಜ್ಯಗಳಿಗೆ ಹೋಗುತ್ತಿಲ್ಲ.

Leave a Reply

Your email address will not be published. Required fields are marked *