ರಾಜ್ಯದಲ್ಲಿ ಬಾರದ ಮಳೆಯಿಂದ ಜುಲೈನಲ್ಲಿ ಬರ ಘೋಷಣೆ ನಿರ್ಧಾರ ಸಾಧ್ಯತೆ.
ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆಯ ವಿಳಂಬದ ಕಾರಣ ಎಲ್ಲಾ ಜಿಲ್ಲೆಗಳಲ್ಲೂ ಮಳೆಯ ಕೊರತೆ ಬಹುತೇಕ ಹೆಚ್ಚಾಗಿದ್ದು ಜಲಾಶಯಗಳು ಬರಿದಾಗಿದೆ. ಚಂಡಮಾರುತದ ಕಾರಣದಿಂದ ತೇವಾಂಶವನ್ನು ಸೆಳೆದುಕೊಂಡು ದಕ್ಷಿಣ ಭಾರತದಲ್ಲಿ ತೇವಾಂಶ ಕೊರತೆಯಿಂದಾಗಿ ಮಳೆಯೂ ವಿಳಂಬವಾಗಿದೆ ಎಂದು ಹವಾಮಾನ ಇಲಾಖೆಯವರು ತಿಳಿಸಿದ್ದಾರೆ.
ಆದರೆ ಇದೀಗ ಕೆಲವೇಡೆ ಮಾನ್ಸೂನ್ ಮಳೆಯ ಚುರುಕಾಗಿದ್ದು ಸದ್ಯಕ್ಕೆ ಮೋಡ ಬಿತ್ತನೆ ಮಾಡುವುದಿಲ್ಲ ಎಂದು ಕಂದಾಯ ಸಚಿವರಾದಂತಹ ಕೃಷ್ಣ ಬೈರೇಗೌಡರು ಹೇಳಿದ್ದಾರೆ.
ಪ್ರತಿ ವರ್ಷ ಈ ಸಮಯಕ್ಕೆ ರೈತರು ಈಗಾಗಲೇ ಬಿತ್ತನೆ ಮುಗಿಸಿರುತ್ತಿದ್ದರು.
ಆದರೆ ಈ ವರ್ಷ ಮುಂಗಾರು ಮಳೆಯ ವಿಳಂಬದಿಂದ ರೈತರು ಕಂಗೆಟ್ಟಿದ್ದಾರೆ. ಮಳೆ ವಿಳಂಬವಾಗಲು ಮುಖ್ಯ ಕಾರಣ ಚಂಡಮಾರುತ.
ಮಳೆಯೂ ಆಗಮಿಸುವ ಸಾಧ್ಯತೆಗಳಿವೆ :
ಮುಂಗಾರು ಮಳೆಯು ಕೇರಳ ರಾಜ್ಯವನ್ನು ಪ್ರತಿ ವರ್ಷಕ್ಕಿಂತ ಈ ವರ್ಷ ಸ್ವಲ್ಪ ತಡವಾಗಿ ಆಗಮಿಸಿದ್ದು ಕರ್ನಾಟಕ ರಾಜ್ಯಕ್ಕೆ ಕೂಡ ತಡವಾಗಿ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯರು ಮತ್ತು ಹವಾಮಾನ ವಿಜ್ಞಾನಿಗಳು ಹೇಳಿದ್ದಾರೆ.
ಮುಂಗಾರು ಮಳೆಯೋ ಮೊದಲ ಭಾಗದಲ್ಲಿ ಕೊರತೆ ಮಾಡಿದ್ದು ಮುಂದಿನ ದಿನಗಳಲ್ಲಿ ಕೊರತೆ ನಿವಾರಣೆಯಾಗುವ ಸಾಧ್ಯತೆವಿದೆ ಮತ್ತು ವಿಶ್ವಾಸವಿದೆ .
ಮೋಡ ಬಿತ್ತನೆಯ ಸಾಧ್ಯತೆಗಳು :
ಕಂದಾಯ ಸಚಿವರಾದಂತಹ ಕೃಷ್ಣಭೈರೇಗೌಡರು ಜುಲೈ ಆರಂಭ ಅಥವಾ ಮೊದಲ ವಾರದಲ್ಲಿ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಬರಗಾಲ ಘೋಷಿಸಬೇಕೆ ಅಥವಾ ಬೇಡವೇ ಎಂದು ತೀರ್ಮಾನಿಸಿ ಮೋಡ ಬಿತ್ತನೆ ಮಾಡಬೇಕು ಬೇಡವೋ ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಮುಂಗಾರು ಮಳೆಯ ತಡವಾಗಿರುವುದರಿಂದ ರಾಜ್ಯದಲ್ಲಿ ದಿನವು ಒಂದೊಂದು ಹೊಸ ಸಮಸ್ಯೆಗಳು ಉದ್ಭವಿಸುತ್ತಿವೆ.
ರಾಜ್ಯದಲ್ಲಿ ಜಲಾಶಯಗಳಲ್ಲಿರುವ ನೀರಿನ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಯೂ ಕೂಡ ಕಡಿಮೆಯಾಗಿದೆ. ಅದೇ ರೀತಿ ಕುಡಿಯುವ ನೀರಿಗೂ ಕೂಡ ಹಾಹಾಕಾರ ಶುರುವಾಗಿದೆ.
ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿಗೂ ಬರ ಶುರುವಾಗಿದ್ದು , ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನೀರಿನ ಬರದ ಸ್ಥಿತಿ ಉಂಟಾಗಿದ್ದು ಅನೇಕ ತೊಂದರೆಗಳನ್ನು ಉಂಟುಮಾಡುತ್ತಿದೆ.
ಇದೇ ರೀತಿ ಮಳೆಯ ಕೊರತೆಯಿಂದಾಗಿ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿದ್ದು ವಿದ್ಯುತ್ ಉತ್ಪಾದನೆ ಕೂಡ ಸ್ಥಗಿತಗೊಂಡಿದೆ. ಜೂನ್ ಮೊದಲ ವಾರದಿಂದಲೆ ಮಳೆಯಾಗಿ ಬೇಕಾಗಿದ್ದು ಆದರೆ ಇಲ್ಲಿ ತನಕ ತಡವಾಗಿದೆ. ಈ ಕಾರಣದಿಂದ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತಗೊಂಡಿದ್ದು ಮೂರು ದಿನಗಳಿಂದ ವಿದ್ಯುತ್ ಉತ್ಪಾದನೆಯು ಸ್ಥಗಿತಗೊಂಡಿದೆ.
ಲಿಂಗನಮಕ್ಕಿ ಜಲಾಶಯದ ಸದ್ಯದ ನೀರಿನ ಮಟ್ಟ 1,741.35 ಅಡಿ ಇದ್ದು ವಿದ್ಯುತ್ ಉತ್ಪಾದನೆ ಹೊಸ್ತಾಗಿ ತಗೊಂಡಿದೆ. ಮಳೆಯ ಅಭಾವದಿಂದ ರಾಜ್ಯದಲ್ಲಿ ಅನೇಕ ತೊಂದರೆಗಳು ಪ್ರತಿದಿನ ಉಂಟಾಗುತ್ತಿದ್ದು ರೈತರಿಗಂತೂ ಇದು ಕಷ್ಟಕ್ಕೆ ಸಿಲುಕಿಸುತ್ತಿದೆ. ಮಳೆಯ ಕೊರತೆಯಿಂದಾಗಿ ರೈತರು ಇಲ್ಲಿ ತನಕ ಬಿತ್ತನೆ ಮಾಡಿಲ್ಲ, ಎಲ್ಲಾ ಸಮಸ್ಯೆಗಳನ್ನು ಅವಲೋಕಿಸಿ ಕರ್ನಾಟಕ ಸರ್ಕಾರವು ಆದಷ್ಟು ಬೇಗ ರೈತರ ಹಿತದೃಷ್ಟಿಯಲ್ಲಿ ನಿರ್ಧಾರವನ್ನು ತೆಗೆದುಕೊಂಡರೆ ಒಳ್ಳೆಯದು.
ರಾಜ್ಯದಲ್ಲಿ ಬಾರದ ಮಳೆಯಿಂದ ಜುಲೈನಲ್ಲಿ ಬರ ಘೋಷಣೆ ನಿರ್ಧಾರ ಸಾಧ್ಯತೆ.
ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆಯ ವಿಳಂಬದ ಕಾರಣ ಎಲ್ಲಾ ಜಿಲ್ಲೆಗಳಲ್ಲೂ ಮಳೆಯ ಕೊರತೆ ಬಹುತೇಕ ಹೆಚ್ಚಾಗಿದ್ದು ಜಲಾಶಯಗಳು ಬರಿದಾಗಿದೆ. ಚಂಡಮಾರುತದ ಕಾರಣದಿಂದ ತೇವಾಂಶವನ್ನು ಸೆಳೆದುಕೊಂಡು ದಕ್ಷಿಣ ಭಾರತದಲ್ಲಿ ತೇವಾಂಶ ಕೊರತೆಯಿಂದಾಗಿ ಮಳೆಯೂ ವಿಳಂಬವಾಗಿದೆ ಎಂದು ಹವಾಮಾನ ಇಲಾಖೆಯವರು ತಿಳಿಸಿದ್ದಾರೆ. ಆದರೆ ಇದೀಗ ಕೆಲವೇಡೆ ಮಾನ್ಸೂನ್ ಮಳೆಯ ಚುರುಕಾಗಿದ್ದು ಸದ್ಯಕ್ಕೆ ಮೋಡ ಬಿತ್ತನೆ ಮಾಡುವುದಿಲ್ಲ ಎಂದು ಕಂದಾಯ ಸಚಿವರಾದಂತಹ ಕೃಷ್ಣ ಬೈರೇಗೌಡರು ಹೇಳಿದ್ದಾರೆ.
ಪ್ರತಿ ವರ್ಷ ಈ ಸಮಯಕ್ಕೆ ರೈತರು ಈಗಾಗಲೇ ಬಿತ್ತನೆ ಮುಗಿಸಿರುತ್ತಿದ್ದರು. ಆದರೆ ಈ ವರ್ಷ ಮುಂಗಾರು ಮಳೆಯ ವಿಳಂಬದಿಂದ ರೈತರು ಕಂಗೆಟ್ಟಿದ್ದಾರೆ. ಮಳೆ ವಿಳಂಬವಾಗಲು ಮುಖ್ಯ ಕಾರಣ ಚಂಡಮಾರುತ.
ಮಳೆಯೂ ಆಗಮಿಸುವ ಸಾಧ್ಯತೆಗಳಿವೆ :
ಮುಂಗಾರು ಮಳೆಯು ಕೇರಳ ರಾಜ್ಯವನ್ನು ಪ್ರತಿ ವರ್ಷಕ್ಕಿಂತ ಈ ವರ್ಷ ಸ್ವಲ್ಪ ತಡವಾಗಿ ಆಗಮಿಸಿದ್ದು ಕರ್ನಾಟಕ ರಾಜ್ಯಕ್ಕೆ ಕೂಡ ತಡವಾಗಿ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯರು ಮತ್ತು ಹವಾಮಾನ ವಿಜ್ಞಾನಿಗಳು ಹೇಳಿದ್ದಾರೆ.
ಮುಂಗಾರು ಮಳೆಯೋ ಮೊದಲ ಭಾಗದಲ್ಲಿ ಕೊರತೆ ಮಾಡಿದ್ದು ಮುಂದಿನ ದಿನಗಳಲ್ಲಿ ಕೊರತೆ ನಿವಾರಣೆಯಾಗುವ ಸಾಧ್ಯತೆವಿದೆ ಮತ್ತು ವಿಶ್ವಾಸವಿದೆ .
ಮೋಡ ಬಿತ್ತನೆಯ ಸಾಧ್ಯತೆಗಳು :
ಕಂದಾಯ ಸಚಿವರಾದಂತಹ ಕೃಷ್ಣಭೈರೇಗೌಡರು ಜುಲೈ ಆರಂಭ ಅಥವಾ ಮೊದಲ ವಾರದಲ್ಲಿ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಬರಗಾಲ ಘೋಷಿಸಬೇಕೆ ಅಥವಾ ಬೇಡವೇ ಎಂದು ತೀರ್ಮಾನಿಸಿ ಮೋಡ ಬಿತ್ತನೆ ಮಾಡಬೇಕು ಬೇಡವೋ ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಮುಂಗಾರು ಮಳೆಯ ತಡವಾಗಿರುವುದರಿಂದ ರಾಜ್ಯದಲ್ಲಿ ದಿನವು ಒಂದೊಂದು ಹೊಸ ಸಮಸ್ಯೆಗಳು ಉದ್ಭವಿಸುತ್ತಿವೆ.
ರಾಜ್ಯದಲ್ಲಿ ಜಲಾಶಯಗಳಲ್ಲಿರುವ ನೀರಿನ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಯೂ ಕೂಡ ಕಡಿಮೆಯಾಗಿದೆ. ಅದೇ ರೀತಿ ಕುಡಿಯುವ ನೀರಿಗೂ ಕೂಡ ಹಾಹಾಕಾರ ಶುರುವಾಗಿದೆ.
ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿಗೂ ಬರ ಶುರುವಾಗಿದ್ದು , ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನೀರಿನ ಬರದ ಸ್ಥಿತಿ ಉಂಟಾಗಿದ್ದು ಅನೇಕ ತೊಂದರೆಗಳನ್ನು ಉಂಟುಮಾಡುತ್ತಿದೆ.
ಇದೇ ರೀತಿ ಮಳೆಯ ಕೊರತೆಯಿಂದಾಗಿ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿದ್ದು ವಿದ್ಯುತ್ ಉತ್ಪಾದನೆ ಕೂಡ ಸ್ಥಗಿತಗೊಂಡಿದೆ. ಜೂನ್ ಮೊದಲ ವಾರದಿಂದಲೆ ಮಳೆಯಾಗಿ ಬೇಕಾಗಿದ್ದು ಆದರೆ ಇಲ್ಲಿ ತನಕ ತಡವಾಗಿದೆ. ಈ ಕಾರಣದಿಂದ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತಗೊಂಡಿದ್ದು ಮೂರು ದಿನಗಳಿಂದ ವಿದ್ಯುತ್ ಉತ್ಪಾದನೆಯು ಸ್ಥಗಿತಗೊಂಡಿದೆ. ಲಿಂಗನಮಕ್ಕಿ ಜಲಾಶಯದ ಸದ್ಯದ ನೀರಿನ ಮಟ್ಟ 1,741.35 ಅಡಿ ಇದ್ದು ವಿದ್ಯುತ್ ಉತ್ಪಾದನೆ ಹೊಸ್ತಾಗಿ ತಗೊಂಡಿದೆ.
ಮಳೆಯ ಅಭಾವದಿಂದ ರಾಜ್ಯದಲ್ಲಿ ಅನೇಕ ತೊಂದರೆಗಳು ಪ್ರತಿದಿನ ಉಂಟಾಗುತ್ತಿದ್ದು ರೈತರಿಗಂತೂ ಇದು ಕಷ್ಟಕ್ಕೆ ಸಿಲುಕಿಸುತ್ತಿದೆ. ಮಳೆಯ ಕೊರತೆಯಿಂದಾಗಿ ರೈತರು ಇಲ್ಲಿ ತನಕ ಬಿತ್ತನೆ ಮಾಡಿಲ್ಲ, ಎಲ್ಲಾ ಸಮಸ್ಯೆಗಳನ್ನು ಅವಲೋಕಿಸಿ ಕರ್ನಾಟಕ ಸರ್ಕಾರವು ಆದಷ್ಟು ಬೇಗ ರೈತರ ಹಿತದೃಷ್ಟಿಯಲ್ಲಿ ನಿರ್ಧಾರವನ್ನು ತೆಗೆದುಕೊಂಡರೆ ಒಳ್ಳೆಯದು.