ರೈತ ಸಂಪರ್ಕ ಕೇಂದ್ರದಲ್ಲಿ ಮಹತ್ವದ ಬದಲಾವಣೆ… ಈ ಮುಂಗಾರು ಹಂಗಾಮಿನಿಂದ ಬಾರ್ ಕೋಡ್ ವ್ಯವಸ್ಥೆಯ ಮುಖಾಂತರ ಸೌಲಭ್ಯ ಶುರುವಾಗಲಿದೆ…

ಪ್ರಸ್ತುತ ಮುಂಗಾರು ಹಂಗಾಮಿನಿಂದ ರಾಜ್ಯದ
ರೈತ ಸಂಪರ್ಕ ಕೇಂದ್ರಗಳಲ್ಲಿ ಬಾ‌ರ ಕೋಡ್ ವ್ಯವಸ್ಥೆ
ಜಾರಿಗೆ ಬಂದಿದ್ದು, ಇನ್ನು ಮುಂದೆ ಅಲ್ಲಿನ ವ್ಯವಹಾರಗಳು ಕಾಗದರಹಿತವಾಗಲಿವೆ.

WhatsApp Group Join Now
Telegram Group Join Now

ರಾಜ್ಯದಲ್ಲಿ 748 ರೈತ ಸಂಪರ್ಕ ಕೇಂದ್ರಗಳಿದ್ದು ಅವುಗಳ ಮೂಲಕ ಬಿತ್ತನೆ ಬೀಜ
ಕೀಟನಾಶಕ, ಲಘು ಪೋಷಕಾಂಶ ಗಳು,
ತಾಡಪಾಲು, ಕೃಷಿ ಯಂತ್ರೋಪಕರಣ ಇತ್ಯಾದಿ,
ಪರಿಕರಗಳನ್ನು ರೈತರಿಗೆ ದರದಲ್ಲಿ ವಿತರಣೆ ಮಾಡಲಾಗುತ್ತದೆ.
ಇದೆ ಲ್ಲದಕ್ಕೂ ಈಗ ಬಾರ್ ಕೋಡ್/ ಕ್ಯೂಆರ್ ಕೋಡ್ ಬಳಕೆಯಾಗಲಿ ಕೆ ಕಿಸಾನ್ ತಂತ್ರಾಂಶದ ನೆರವಿನಿಂದ
ಈ ನೂತನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಪರಿಕರಗಳನ್ನು ದಾಸ್ತಾನಿಗೆ ಸ್ವೀಕರಿಸುವ, ಫಲಾನುಭವಿಗಳಿಗೆ ವಿತರಿಸುವ ಪ್ರಕ್ರಿಯೆ ಇದರಡಿ ನಡೆಯಲಿದೆ.

ಏ. 1ರಿಂದಲೇ ಅನುಷ್ಠಾನಗೊಳಿಸುವಂತೆ ಕೃಷಿ ಆಯುಕ್ತರ ಆದೇಶದಲ್ಲಿ
ಸೂಚನೆ ನೀಡಲಾಗಿದ್ದು, ಈಗಾಗಲೇ ಮೈಸೂರು,
ಮಂಡ್ಯ ಸೇರಿ 6 ಜಿಲ್ಲೆಗಳಲ್ಲಿ ಆರಂಭವಾಗಿದೆ.
ಇನ್ನುಳಿದ ಜಿಲ್ಲೆಗಳಲ್ಲೂ ಬಾ‌ಕೋಡ್ ಯಂತ್ರಗಳನ್ನು
ಅಳವಡಿಸಿ ಜಾರಿಗೆ ತರಲಾಗುತ್ತಿದೆ.

ಸರಬರಾಜು
ದಾರರಿಂದ ರೈತ ಸಂಪರ್ಕ ಕೇಂದ್ರಗಳಿಗೆ ಬರುವ
ಕೃಷಿ ಪರಿಕರಗಳನ್ನು ಬಾ‌ಕೋಡ್ ವ್ಯವಸ್ಥೆಯಡಿ ಸ್ವೀಕರಿಸಲಾಗುತ್ತದೆ

ಈಗ ಪಹಣಿ, ಆಧಾ‌ರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ
ನೋಡಿ ರೈತರಿಗೆ ಪರಿಕರಗಳನ್ನು ನೀಡುವ ವ್ಯವಸ್ಥೆ ಇದೆ. ಇನ್ನುಮುಂದೆ ಆ ದಾಖಲಾತಿಗಳನ್ನು ತರುವ ಅಗತ್ಯ ಇರುವುದಿಲ್ಲ. ಪ್ರತಿಯೊಬ್ಬ ರೈತನಿಗೂ ಇಲಾಖೆಯಿಂದ ನೀಡಿರುವ ಗುರುತಿನ ಸಂಖ್ಯೆಯನ್ನು (ಎಚ್‌ಐಡಿ) ತಂದರೆ ಸಾಕು.

ಅದರ ಮೂಲಕವೇ ಆತನ ಎಲ್ಲ ವಿವರಗಳೂ ಲಭ್ಯವಾಗುತ್ತವೆ. ಬಾರ್ ಕೋಡ್ ವ್ಯವಸ್ಥೆಯಿಂದಾಗಿ ಎಲ್ಲ ಮಾಹಿತಿ ಬೆರಳ ತುದಿಯಲ್ಲೇ ಸಿಗುವುದರಿಂದ ಅನುಷ್ಠಾನ ಹಂತದಲ್ಲಿ ಅನುಕೂಲವಾಗಲಿದೆ.

ಯಾವ ಜಿಲ್ಲೆಯಲ್ಲಿ ಯಾವ ಪರಿಕರಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ತಿಳಿಯಲಿದೆ. ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಒಂದೇ ಕಡೆ ಕಂಡುಬಂದರೆ ಅವುಗಳನ್ನು ಬೇರೆ ಜಿಲ್ಲೆಗಳಿಗೆ ಕಳಿಸಿಕೊಡಲು ಸಹಾಯಕವಾಗುತ್ತದೆ.

ರಾಜ್ಯಮಟ್ಟದಲ್ಲಿ ಅಧಿಕಾರಿಗಳು ಈ ವ್ಯವಸ್ಥೆಯನ್ನು ಅವಲೋಕಿಸಿ ಕಾಲಕಾಲಕ್ಕೆ ಅಧೀನ ಸಿಬ್ಬಂದಿಗೆ ಸೂಚನೆ ನೀಡಲು ಸಾಧ್ಯವಾಗುತ್ತದೆ. ಕೃಷಿ ಪರಿಕರಗಳ ಲಭ್ಯತೆಯ ಬಗ್ಗೆ ನಿಖರ ಮಾಹಿತಿ ದೊರೆಯುವ ಜತೆಗೆ ಎಲ್ಲೆಲ್ಲಿ ಏನು ಸಮಸ್ಯೆಯಿದೆ ಎನ್ನುವುದೂ ತಿಳಿಯಲಿದೆ. ಸಮಯದ ಉಳಿತಾಯವೂ ಆಗಲಿದೆ. ಇದುವರೆಗೆ ಇದ್ದ ವ್ಯವಸ್ಥೆಯಲ್ಲಿ ರೈತರ ಯಾದಿ, ಲೆಕ್ಕಪತ್ರ, ಹಣಕಾಸು ವಿವರಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿತ್ತು. ಆ ಹಳೆಯ ಪದ್ಧತಿ ಇನ್ನು ಮುಂದೆ ಕೊನೆಯಾಗಲಿದ್ದು ತಂತ್ರಜ್ಞಾನದ ನೆರವಿನಿಂದ ನಿರ್ವಹಣೆಯಾಗಲಿದೆ.

ಪ್ರಸ್ತುತ ಮುಂಗಾರು ಹಂಗಾಮಿನಿಂದ ರಾಜ್ಯದ
ರೈತ ಸಂಪರ್ಕ ಕೇಂದ್ರಗಳಲ್ಲಿ ಬಾ‌ರ ಕೋಡ್ ವ್ಯವಸ್ಥೆ
ಜಾರಿಗೆ ಬಂದಿದ್ದು, ಇನ್ನು ಮುಂದೆ ಅಲ್ಲಿನ ವ್ಯವಹಾರಗಳು ಕಾಗದರಹಿತವಾಗಲಿವೆ. ರಾಜ್ಯದಲ್ಲಿ 748 ರೈತ ಸಂಪರ್ಕ ಕೇಂದ್ರಗಳಿದ್ದು ಅವುಗಳ ಮೂಲಕ ಬಿತ್ತನೆ ಬೀಜ
ಕೀಟನಾಶಕ, ಲಘು ಪೋಷಕಾಂಶ ಗಳು,
ತಾಡಪಾಲು, ಕೃಷಿ ಯಂತ್ರೋಪಕರಣ ಇತ್ಯಾದಿ,
ಪರಿಕರಗಳನ್ನು ರೈತರಿಗೆ ದರದಲ್ಲಿ ವಿತರಣೆ ಮಾಡಲಾಗುತ್ತದೆ.
ಇದೆ ಲ್ಲದಕ್ಕೂ ಈಗ ಬಾರ್ ಕೋಡ್/ ಕ್ಯೂಆರ್ ಕೋಡ್ ಬಳಕೆಯಾಗಲಿ ಕೆ ಕಿಸಾನ್ ತಂತ್ರಾಂಶದ ನೆರವಿನಿಂದ
ಈ ನೂತನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಪರಿಕರಗಳನ್ನು ದಾಸ್ತಾನಿಗೆ ಸ್ವೀಕರಿಸುವ, ಫಲಾನುಭವಿಗಳಿಗೆ ವಿತರಿಸುವ ಪ್ರಕ್ರಿಯೆ ಇದರಡಿ ನಡೆಯಲಿದೆ. ಏ. 1ರಿಂದಲೇ ಅನುಷ್ಠಾನಗೊಳಿಸುವಂತೆ ಕೃಷಿ ಆಯುಕ್ತರ ಆದೇಶದಲ್ಲಿ
ಸೂಚನೆ ನೀಡಲಾಗಿದ್ದು, ಈಗಾಗಲೇ ಮೈಸೂರು,
ಮಂಡ್ಯ ಸೇರಿ 6 ಜಿಲ್ಲೆಗಳಲ್ಲಿ ಆರಂಭವಾಗಿದೆ.
ಇನ್ನುಳಿದ ಜಿಲ್ಲೆಗಳಲ್ಲೂ ಬಾ‌ಕೋಡ್ ಯಂತ್ರಗಳನ್ನು
ಅಳವಡಿಸಿ ಜಾರಿಗೆ ತರಲಾಗುತ್ತಿದೆ. ಸರಬರಾಜು
ದಾರರಿಂದ ರೈತ ಸಂಪರ್ಕ ಕೇಂದ್ರಗಳಿಗೆ ಬರುವ
ಕೃಷಿ ಪರಿಕರಗಳನ್ನು ಬಾ‌ಕೋಡ್ ವ್ಯವಸ್ಥೆಯಡಿ ಸ್ವೀಕರಿಸಲಾಗುತ್ತದೆ

ಈಗ ಪಹಣಿ, ಆಧಾ‌ರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ
ನೋಡಿ ರೈತರಿಗೆ ಪರಿಕರಗಳನ್ನು ನೀಡುವ ವ್ಯವಸ್ಥೆ ಇದೆ. ಇನ್ನುಮುಂದೆ ಆ ದಾಖಲಾತಿಗಳನ್ನು ತರುವ ಅಗತ್ಯ ಇರುವುದಿಲ್ಲ. ಪ್ರತಿಯೊಬ್ಬ ರೈತನಿಗೂ ಇಲಾಖೆಯಿಂದ ನೀಡಿರುವ ಗುರುತಿನ ಸಂಖ್ಯೆಯನ್ನು (ಎಚ್‌ಐಡಿ) ತಂದರೆ ಸಾಕು. ಅದರ ಮೂಲಕವೇ ಆತನ ಎಲ್ಲ ವಿವರಗಳೂ ಲಭ್ಯವಾಗುತ್ತವೆ. ಬಾರ್ ಕೋಡ್ ವ್ಯವಸ್ಥೆಯಿಂದಾಗಿ ಎಲ್ಲ ಮಾಹಿತಿ ಬೆರಳ ತುದಿಯಲ್ಲೇ ಸಿಗುವುದರಿಂದ ಅನುಷ್ಠಾನ ಹಂತದಲ್ಲಿ ಅನುಕೂಲವಾಗಲಿದೆ.

ಯಾವ ಜಿಲ್ಲೆಯಲ್ಲಿ ಯಾವ ಪರಿಕರಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ತಿಳಿಯಲಿದೆ. ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಒಂದೇ ಕಡೆ ಕಂಡುಬಂದರೆ ಅವುಗಳನ್ನು ಬೇರೆ ಜಿಲ್ಲೆಗಳಿಗೆ ಕಳಿಸಿಕೊಡಲು ಸಹಾಯಕವಾಗುತ್ತದೆ.

ರಾಜ್ಯಮಟ್ಟದಲ್ಲಿ ಅಧಿಕಾರಿಗಳು ಈ ವ್ಯವಸ್ಥೆಯನ್ನು ಅವಲೋಕಿಸಿ ಕಾಲಕಾಲಕ್ಕೆ ಅಧೀನ ಸಿಬ್ಬಂದಿಗೆ ಸೂಚನೆ ನೀಡಲು ಸಾಧ್ಯವಾಗುತ್ತದೆ. ಕೃಷಿ ಪರಿಕರಗಳ ಲಭ್ಯತೆಯ ಬಗ್ಗೆ ನಿಖರ ಮಾಹಿತಿ ದೊರೆಯುವ ಜತೆಗೆ ಎಲ್ಲೆಲ್ಲಿ ಏನು ಸಮಸ್ಯೆಯಿದೆ ಎನ್ನುವುದೂ ತಿಳಿಯಲಿದೆ. ಸಮಯದ ಉಳಿತಾಯವೂ ಆಗಲಿದೆ. ಇದುವರೆಗೆ ಇದ್ದ ವ್ಯವಸ್ಥೆಯಲ್ಲಿ ರೈತರ ಯಾದಿ, ಲೆಕ್ಕಪತ್ರ, ಹಣಕಾಸು ವಿವರಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿತ್ತು. ಆ ಹಳೆಯ ಪದ್ಧತಿ ಇನ್ನು ಮುಂದೆ ಕೊನೆಯಾಗಲಿದ್ದು ತಂತ್ರಜ್ಞಾನದ ನೆರವಿನಿಂದ ನಿರ್ವಹಣೆಯಾಗಲಿದೆ.

Leave a Reply

Your email address will not be published. Required fields are marked *