ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ನೀಡಿದ್ದ ಭರವಸೆ ಜಾರಿ ಮಾಡುವಲ್ಲಿ ಪ್ರಯತ್ನ ಮುಂದುವರಿಸಿ ಜನತೆಯ ವಿಶ್ವಾಸ ಗಳಿಸಲು ರಾಜ್ಯ ಸರ್ಕಾರ ಹೆಣಗಾಟ ನಡೆಸಿರುವಾಗಲೇ ಮಹಿಳಾ ಸಮುದಾಯದಿಂದ ಮತ್ತೊಂದು ಬಲವಾದ ಕೂಗು ಕೇಳಿಬಂದಿದೆ.
ಗ್ಯಾರಂಟಿ ಮಾದರಿಯಲ್ಲೇ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತರೂ ಹೆಚ್ಚುವರಿ ವೇತನ ಪಡೆಯುವ ಭರವಸೆ ಈಡೇರುವ ನಿರೀಕ್ಷೆಯಲ್ಲಿದ್ದಾರೆ. ಇದರೊಂದಿಗೆ ಸ್ತ್ರೀಶಕ್ತಿ ಸಂಘಟನೆಗಳೂ ಸರ್ಕಾರದಿಂದ ಶುಭಸುದ್ದಿಗೆ ಕಾಯುತ್ತಿವೆ.
» ವಸೂಲಿಗೆ ಕಾರಣವಿಷ್ಟೇ, ಚುನಾವಣೆ ಪೂರ್ವ ತೆರಳಿದ್ದ ಸಹಕಾರ ಸಂಘಗಳ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಬ್ಬಂದಿ ಸ್ತ್ರೀ ಶಕ್ತಿ ಸಂಘಗಳ ಸಾಲದ ಕಂತುಗಳನ್ನು ಆಕ್ರೋಶ
ಪ್ರಚಾರದ ಸಂದರ್ಭ ಕೋಲಾರ ತಾಲೂಕಿನ ವೇಮಗಲ್‌ನಲ್ಲಿ ಆಯೋಜಿಸಿದ್ದ ಸ್ತ್ರೀಶಕ್ತಿ ಮಹಿಳಾ ಸಮಾವೇಶದಲ್ಲಿ ಸಿದ್ದರಾಮಯ್ಯ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಅಂತೆಯೇ ಇದೀಗ ಸ್ತ್ರೀ ಸಂಘಗಳ ಸದಸ್ಯರು ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ್ದಾರೆ.
ಜತೆಗೆ ಸಾಲ ಮರುಪಾವತಿಗೆ ಬಂದಿದ್ದ ಕ್ಯಾಲನೂರು ವ್ಯವಸಾಯ ಸೇವಾ ಸಹಕಾರ ಸಂಘದ ಸಿಬ್ಬಂದಿ ವಿರುದ್ಧ ತಿರುಗಿಬಿದ್ದಿರುವ ಘಟನೆ ನಡೆದಿದೆ.
ಅವಮಾನಿಸಬೇಡಿ: ಸಿಎಂ
ಸಾಲ ಕಟ್ಟಿ ಎಂದು ಸಿದ್ದರಾಮಯ್ಯನವರು ನುಡಿದಂತೆ ನಡೆಯುವವರು, ಅವರು ಕೊಟ್ಟ ಮಾತು ತಪ್ಪುವವರಲ್ಲ. ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಕೋಲಾರದಲ್ಲಿ ನಮಗೆ ಮಾತು ನೀಡಿದ್ದಾರೆ. ನೀವು ವಿನಾಕಾರಣ ಸಾಲ ಕಟ್ಟಿ ಎಂದು ಪದೇಪದೆ ನಮ್ಮ ಬಳಿ ಬಂದು ಅವಮಾನಿಸಬೇಡಿ ಎಂದು ವಸೂಲಿಗೆ ತೆರಳಿದ್ದ ಸಹಕಾರ ಸಂಘಗಳ ಸಿಬ್ಬಂದಿ ಮೇಲೆ ಸ್ತ್ರೀಶಕ್ತಿ ಸಂಘಗಳಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್, ನಿತ್ಯ ಬಳಕೆಯ ವಸ್ತುಗಳ ಬೆಲೆಯೇರಿಕೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರೈತರ ಬೆಳೆಗಳಿಗೆ ಬೆಲೆ ಕುಸಿತ ಮುಂತಾದ ಕಾರಣಗಳಿಂದ ಆರ್ಥಿಕವಾಗಿ ಹಿನ್ನಡೆಯಾಗಿತ್ತು. ಸಾಲದ ಕಂತುಗಳನ್ನು ಕಟ್ಟಲು ಕಷ್ಟವಾಗಿದೆ. ಸಿದ್ದರಾಮಯ್ಯ ಅವರಿಗೆ ರೈತರ ಮತ್ತು ಮಹಿಳೆಯರ ಆರ್ಥಿಕ ಪರಿಸ್ಥಿತಿ ಗೊತ್ತಾಗಿ, ಸಾಲದ ಕಂತುಗಳನ್ನು ಮನ್ನಾ ಮಾಡಲಿದ್ದಾರೆ.
ಅಲ್ಲಿಯ ತನಕ ಸಾಲ ವಸೂಲಾತಿಗೆ ನಮ್ಮ ಮನೆ ಬಳಿ ಬರಬೇಡಿ ಎಂದು ಸಹಕಾರ ಸಂಘಗಳ ಸಿಬ್ಬಂದಿ ವಿರುದ್ಧ ಮಹಿಳೆಯರು ತಿರುಗಿ ಬೀಳುತ್ತಿರುವುದು ಜಿಲ್ಲೆಯಾದ್ಯಂತ ಕಂಡುಬಂದಿದೆ.
ಕೋಲಾರ ತಾಲೂಕಿನ ಕ್ಯಾಲನೂರಿನ ಸ್ತ್ರೀ ಶಕ್ತಿ ಮಹಿಳಾ ಸ್ವ ಸಹಾಯ ಸಂಘಗಳ ಸಾಲ ವಸೂಲಾತಿಗೆ ಬಂದಿದ್ದ ಸೊಸೈಟಿ ಸಿಬ್ಬಂದಿ ವಿರುದ್ಧ ಮಹಿಳೆಯರು ತಿರುಗಿಬಿದ್ದರು.
ರಾಜ್ಯಾದ್ಯಂತ ಪ್ರತಿಭಟನೆ ವಿಸ್ತರಣೆ? ಸರ್ಕಾರ ಕರೆಂಟ್ ಬಿಲ್ ಸೇರಿ 5 ಗ್ಯಾರಂಟಿಗಳ ಕಂಡೀಷನ್‌ಗಳ ಕುರಿತು
ಈಗಾಗಲೇ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈಗ 6ನೇ ಗ್ಯಾರಂಟಿ ಯನ್ನು ಜಾರಿಗೆ ತರಬೇಕೆಂದು ಸ್ತ್ರೀ ಶಕ್ತಿ ಸಂಘದ ಸದಸ್ಯರು ಕೋಲಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಇದು ರಾಜ್ಯಾದ್ಯಂತ ವಿಸ್ತಾರವಾಗುವ ಲಕ್ಷಣ ಕಾಣತೊಡಗಿದೆ.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಹಿನ್ನೆಲೆಯಲ್ಲಿ ವೇಮಗಲ್‌ನಲ್ಲಿ ಆಯೋಜಿಸಿದ್ದ ಸ್ತ್ರೀ ಶಕ್ತಿ ಸಮಾವೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು. ಆ ಸಂದರ್ಭ ಸಿದ್ದರಾಮಯ್ಯನವರು ಸ್ತ್ರೀ ಶಕ್ತಿ ಸಾಲದ ಕಂತುಗಳನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಲ್ಲದೆ, ಈಗಿರುವ 50 ಸಾವಿರ ರೂ.ಗಳ ಬದಲಾಗಿ ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದರು.