ಭದ್ರತಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..! Apply Now

ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದ ಬರುವಂತಹ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರತಿನಿತ್ಯ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದು ಈ ನಮ್ಮ ಲೇಖನಗಳು ನಿಮಗೆ ಇಷ್ಟವಾದಲ್ಲಿ ಹಾಗೆ ಇತರರಿಗೂ ಶೇರ್ ಮಾಡಿ..

WhatsApp Group Join Now
Telegram Group Join Now

ನಮ್ಮ ಈ ಜಾಲತಾಣದಲ್ಲಿ ಮುಖ್ಯವಾಗಿ 10ನೇ ತರಗತಿ ಹಾಗೂ ಪಿಯುಸಿ ಪಾಸಾದವರಿಗೆ ಉದ್ಯೋಗ ಅವಕಾಶದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ನಮ್ಮ ಪ್ರತಿನಿತ್ಯದ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ..

ಇದೀಗ ಪ್ರಸ್ತುತ ಲೇಖನದಲ್ಲಿ police Constable ಹುದ್ದೆಗಳ ಬಗ್ಗೆ ತಿಳಿಯೋಣ ಬನ್ನಿ

ಪಿಯುಸಿ ಪಾಸಾಗಿದ್ದು ನಿಮಗೆ ಸರ್ಕಾರಿ ಉದ್ಯೋಗಕ್ಕೆ ಸೇರುವ ಹಂಬಲ ಇದ್ದರೆ, ಇದೋ ಸದಾವಕಾಶ ಒದಗಿಬಂದಿದೆ.

ಗೃಹ ಸಚಿವಾಲಯ ಅಧೀನದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು ತನ್ನ ಫೈಯರ್ ವಿಂಗ್‌ನಲ್ಲಿ ಕಾನ್ಸ್‌ಟೇಬಲ್‌ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಪ್ರಕಟಿಸಿದೆ. ಆಸಕ್ತರು ಅರ್ಜಿ ಸಲ್ಲಿಸಿ.

• ಸಿಐಎಸ್‌ಎಫ್‌ನಲ್ಲಿ ಜಾಬ್.

• ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.

• ಅರ್ಜಿ ಸಲ್ಲಿಸಲು ಆ.31 ರಿಂದ ಸೆ.30 ರವರೆಗೆ ಅವಕಾಶ.

ದ್ವಿತೀಯ ಪಿಯು ಪಾಸಾದವರಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳಿಗೆ ವೇತನ ಶ್ರೇಣಿ Rs.21700 ರಿಂದ 69100 (ಪೇ ಲೆವೆಲ್ 3) ಇದ್ದು, ಕರ್ನಾಟಕದಲ್ಲಿ 33 ಹುದ್ದೆಗಳಿವೆ. ಪಿಯುಸಿ ಪಾಸಾಗಿರುವವರು ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಆಸಕ್ತಿ ಇದ್ದರೆ ಈಗಲೇ ಅರ್ಜಿ ಸಲ್ಲಿಸಿ.

ಭಾರತೀಯ ಪುರುಷ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಇತರೆ ಅರ್ಹತೆಗಳ ಕುರಿತು ಮಾಹಿತಿ ಕೆಳಗಿನಂತಿದೆ ನೋಡಿ.

ನೇಮಕಾತಿ ಪ್ರಾಧಿಕಾರಕೇಂದ್ರ ಕೈಗಾರಿಕಾ ಭದ್ರತಾ ಪಡೆಹುದ್ದೆ ಹೆಸರುಕಾನ್ಸ್‌ಟೇಬಲ್‌ / ಫೈಯರ್‌ ವಿಂಗ್ಹುದ್ದೆಗಳ ಸಂಖ್ಯೆ1130ಕರ್ನಾಟಕದಲ್ಲಿ ಭರ್ತಿ ಮಾಡುವ ಹುದ್ದೆಗಳ ಸಂಖ್ಯೆ33

ಸಿಐಎಸ್‌ಎಫ್‌ ಕಾನ್ಸ್‌ಟೇಬಲ್‌ ವಿದ್ಯಾರ್ಹತೆ ವಿವರ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅಂಗೀಕೃತ ಶಿಕ್ಷಣ ಸಂಸ್ಥೆ, ವಿವಿ ಇಂದ ದ್ವಿತೀಯ ಪಿಯುಸಿ ಅನ್ನು ವಿಜ್ಞಾನ ವಿಷಯಗಳಲ್ಲಿ ಓದಿರಬೇಕು.

ಸಿಐಎಸ್‌ಎಫ್‌ ಕಾನ್ಸ್‌ಟೇಬಲ್ ಹುದ್ದೆಗಳಿಗೆ ವಯಸ್ಸಿನ ಅರ್ಹತೆಗಳು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು, ಗರಿಷ್ಠ 23 ವರ್ಷ ವಯಸ್ಸು ಮೀರಿರಬಾರದು. ಅಭ್ಯರ್ಥಿಗಳ ವಯಸ್ಸನ್ನು ದಿನಾಂಕ 30-09-2024 ಕ್ಕೆ ಪರಿಗಣಿಸಲಾಗುತ್ತದೆ.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ದೈಹಿಕ ಸಹಿಷ್ಣುತೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆ, ಲಿಖಿತ ಪರೀಕ್ಷೆ, ಮೆಡಿಕಲ್ ಟೆಸ್ಟ್‌ ನಡೆಸುವ ಮೂಲಕ ಮೆರಿಟ್‌ ಆಧಾರದಲ್ಲಿ, ಮೀಸಲಾತಿಗೆ ಅನುಗುಣವಾಗಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.


ಲಿಖಿತ ಪರೀಕ್ಷೆ ಭಾಷೆಗಳು: ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ. 120 ನಿಮಿಷದ ಪರೀಕ್ಷೆ ಇರುತ್ತದೆ. ಓಎಂಆರ್‌ ಶೀಟ್‌ ಆಧಾರಿತ ಅಥವಾ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದಾಗಿರುತ್ತದೆ.

ಅರ್ಜಿ ಸಲ್ಲಿಸಲು ಹಾಗೂ ಅಧಿಸೂಚನೆಗಾಗಿ ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ :

https://cisfrectt.cisf.gov.in/

Leave a Reply

Your email address will not be published. Required fields are marked *