grama panchayat recruitment:-
ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ…!
ಜ್ಞಾನ ಘರ್ಜನೆಯ ಲೇಖನಕ್ಕೆ ಸ್ವಾಗತ..
ಪ್ರೀತಿಯ ಓದುಗರೆ ಪ್ರಸ್ತುತ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ನಿಮಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರಬಹುದೇಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ,
ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ಹುದ್ದೆಗಳ ಹೆಸರು – ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರಒಟ್ಟು ಹುದ್ದೆಗಳು – 06ಅರ್ಜಿ ಸಲ್ಲಿಸುವ ಬಗೆ – ಆನ್ಲೈನ್ (Online)ಉದ್ಯೋಗ ಸ್ಥಳ –
ಬೆಂಗಳೂರು ನಗರ
ಹುದ್ದೆಗಳ ವಿವರ ಅರಕೆರೆ 1ಅಡಕಮಾರನಹಳ್ಳಿ 1ಕಿತ್ತಗನೂರು 1ಮೀನುಕುಂಟೆ 1ತಾವರೆಕೆರೆ 1ಸೂಲಿಕೆರೆ 1
ವಿದ್ಯಾರ್ಹತೆ (Education Qualification):
ಅಭ್ಯರ್ಥಿಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ನಲ್ಲಿ ಪ್ರಮಾಣ ಪತ್ರ ಪಡೆದಿರತಕ್ಕದ್ದು ಹಾಗೂ ಕನಿಷ್ಠ 03 ತಿಂಗಳು ಕಂಪ್ಯೂಟರ್ ಕೋರ್ಸನಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ (Age Limit):
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ನಿಗದಿಪಡಿಸಲಾಗಿದೆ
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಪ.ಜಾತಿ/ಪ.ಪಂಗಡ/ ಪ್ರ1ರ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
ವೇತನಶ್ರೇಣಿ(Salary):
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 15196.72 ರಂತೆ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ (Fees):
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ (Selection Process):
ಶೈಕ್ಷಣಿಕ ಅರ್ಹತೆಯಲ್ಲಿನ ಮೆರಿಟ್ ಮತ್ತು ರೋಸ್ಟರ್ ಮೀಸಲಾತಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು.
ಒಂದು ವೇಳೆ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಸಮಾನವಾದ ಅಂಕಗಳನ್ನು ಹೊಂದಿದ್ದಲ್ಲಿ ವಯಸ್ಸಿನಲ್ಲಿ ಹಿರಿಯರಾದವರನ್ನು ಆಯ್ಕೆಗೆ ಪರಿಗಣಿಸಲಾಗುವುದು.
ಅರ್ಜಿ ಸಲಿಸಲು ಪ್ರಾರಂಭ ದಿನಾಂಕ -25 ಜುಲೈ 2024ಅರ್ಜಿ ಸಲಿಸಲು ಕೊನೆಯ ದಿನಾಂಕ – 13 ಆಗಸ್ಟ್ 2024