ಗೃಹರಕ್ಷಕ ಇಲಾಖೆಯಲ್ಲಿ ಹತ್ತನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ..! ಈ ಕೂಡಲೇ ಅರ್ಜಿ ಸಲ್ಲಿಸಿ.. Apply Now..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು

ಪ್ರೀತಿಯ ಓದುಗರೆ ಪ್ರಸ್ತುತ ನಮ್ಮ ಧ್ಯಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ನಿಮಗೆ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಪ್ರಸ್ತುತ ಲೇಖನದಲ್ಲಿ ಗೃಹರಕ್ಷಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ತಿಳಿಯೋಣ ಬನ್ನಿ

ಹೌದು ಸ್ನೇಹಿತರೆ ಗೃಹರಕ್ಷಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ..!

Gnanagharjane.com..

WhatsApp Group Join Now
Telegram Group Join Now

ಪುರುಷ ಒಟ್ಟು 173 ಮತ್ತು ಮಹಿಳೆ 16 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಗಸ್ಟ್ 12 ರೊಳಗೆ ಸಲ್ಲಿಸಬಹುದು. ಅರ್ಜಿಗಳು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಾಂತ ಮ್ಯಾನ್ಶನ್, ಎರಡನೇ ಮಹಡಿ, ಗಾಂಧಿನಗರ ಮುಖ್ಯ ರಸ್ತೆ, ಶಿವಮೊಗ್ಗ ಹಾಗೂ ಕೆಳಗೆ ತಿಳಿಸಲಾದ ಗೃಹರಕ್ಷಕ ದಳ ಘಟಕ / ಉಪ ಘಟಕಗಳ ಕಚೇರಿಗಳಲ್ಲಿ ದೊರೆಯಲಿದೆ.

ಶಿವಮೊಗ್ಗದಲ್ಲಿ ಪುರುಷ 37, ಮಹಿಳೆ 02ಯರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ.

ಸಂಪರ್ಕಿಸಬೇಕಾದ ಘಟಕಾಧಿಕಾರಿ ಶೋಭರಾಜ್ ಮೊ.ಸಂ: -8310190881. ಕುಂಸಿ ಪುರುಷ 02 ಘಟಕಾಧಿಕಾರಿ ಪಿ.ಆರ್. ರಾಘವೇಂದ್ರ ಜೆಟ್ಟಿ -9916573291, ಹಾರನಹಳ್ಳಿ ಪುರುಷ 18 ಘಟಕಾಧಿಕಾರಿ ಸಿ.ಮಧು -9686631428. ಭದ್ರಾವತಿ ಪುರುಷ 18, – ಘಟಕಾಧಿಕಾರಿ ಜಗದೀಶ್ -9900283490. ಹೊಳೆಹೊನ್ನೂರು ಪುರುಷ 06, ಮಹಿಳೆ 14- ಘಟಕಾಧಿಕಾರಿ ಹೆಚ್.ಎಸ್.ಸುನೀಲ್ ಕುಮಾರ್ -8105840345.

ತೀರ್ಥಹಳ್ಳಿ ಪುರುಷ 10- ಘಟಕಾಧಿಕಾರಿ ಹೆಚ್.ಪಿ.ರಾಘವೇಂದ್ರ -9535388472. ಸಾಗರ ಪುರುಷ 15 -ಘಟಕಾಧಿಕಾರಿ ಎಂ.ರಾಘವೇAದ್ರ -9632614031. ಜೋಗ ಪುರುಷ 05 -ಘಟಕಾಧಿಕಾರಿ ಡಿ.ಸಿದ್ದರಾಜು -9449699459.

ಗೃಹರಕ್ಷಕರಾಗಲು ಅರ್ಹತೆಗಳು

ಗೃಹರಕ್ಷಕರಾಗಲು ಭಾರತೀಯ ಪ್ರಜೆಯಾಗಿರಬೇಕು. 19 ವರ್ಷ ಮೇಲ್ಪಟ್ಟು 45 ಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. 10ನೇ ತರಗತಿ ಉತ್ತೀರ್ಣರಾಗಿರಬೇಕು. ವೈದ್ಯಕೀಯವಾಗಿ ಸಶಕ್ತರಾಗಿರಬೇಕು.

ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆ / ಆರೋಪ ಅಥವಾ ಅಪರಾಧಿ ಎಂದು ನಿರ್ಣಯಿಸಲಾಗಿರದಿದ್ದಲ್ಲಿ ಅಥವಾ ದಾಖಲಾಗಿರದಿದ್ದಲ್ಲಿ ಅಂತಹವರು ಅರ್ಜಿಗಳನ್ನು ಸಲ್ಲಿಸಬಹುದು ಎಂದು ಗೃಹರಕ್ಷಕದಳ ಜಿಲ್ಲಾ ಗೌರವ ಸಮಾದೇಷ್ಟರಾದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *