Goat Farming Subsidy Scheme 2024: ಸಾಕಣೆ ಸಹಾಯಧನ ಯೋಜನೆ 2024: ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. ಇಂದಿನ ಲೇಖನದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಸರಕಾರದಿಂದ ಶುಭ ಸುದ್ದಿಯೊಂದಿದೆ ಎಂದು ನಿಮಗೆಲ್ಲ ತಿಳಿಸಲು ಬಯಸುತ್ತೇವೆ.
ಕುರಿ ಅಥವಾ ಮೇಕೆಗಳನ್ನು ಖರೀದಿಸಲು ನಿಮಗೆ ಸರ್ಕಾರದ ಸಹಾಯಧನವೂ ಬೇಕೇ? ಹೌದು ಎಂದಾದರೆ, ಈ ಲೇಖನವನ್ನು ಕೊನೆಯವರೆಗೂ ಓದಿ, ನಾವು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಒದಗಿಸಿದ್ದೇವೆ.
ಕುರಿ ಮತ್ತು ಮೇಕೆಗಳನ್ನು ಸಾಕಲು ಜನರು ಸರ್ಕಾರದಿಂದ ಸಹಾಯಧನ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಈ ಸವಲತ್ತುಗಳ ಸಲುವಾಗಿ ಕರ್ನಾಟಕ ಸರ್ಕಾರವು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳಲು ಬಯಸುವ ಅರ್ಹ ಮತ್ತು ಆಸಕ್ತ ವ್ಯಕ್ತಿಗಳಿಂದ ಹಾಗೂ ರೈತರಿಂದ ಸಹಾಯಧಾನಕ್ಕೆ ಅರ್ಜಿಗಳನ್ನು ಆಹ್ವಾನಿದೆ.
Goat Farming Subsidy Scheme 2024: ಮೇಕೆ ಸಾಕಾಣಿಕೆಗೆ ರಾಜ್ಯ ಸರ್ಕಾರದಿಂದ ಸಿಗಲಿದೆ ಸಹಾಯಧನ.!
ಅಮೃತ ಸ್ವಾಬಿಮಾನಿ ಕುರಿಗಾಹಿ ಯೋಜನೆಯಡಿ, ಅರ್ಹ ಅಭ್ಯರ್ಥಿಗಳು ಕುರಿ ಮತ್ತು ಮೇಕೆ ಸಾಕಣೆಗಾಗಿ ರೂ. ₹175 ಲಕ್ಷ ಹಣದ ಆರ್ಥಿಕ ಸಹಾಯವನ್ನು ಪಡೆಯಬಹುದು.
ಈ ಯೋಜನೆಯು ಉಣ್ಣೆ ಉತ್ಪಾದಕರ ಸಹಕಾರಿ ಸದಸ್ಯರಾಗಿ ನೋಂದಾಯಿಸಲ್ಪಟ್ಟ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು (706) ಘಟಕಗಳನ್ನು ನೀಡಲು ಸರ್ಕಾರ ಯೋಜಿಸಿದ್ದು, ಪ್ರತಿ ಘಟಕದ ವೆಚ್ಚವೂ ₹1,75,000 ರೂ. ಹಣವನ್ನು ನಿರ್ಧರಿಸಲಾಗಿದೆ.
ರಾಜ್ಯ ಸರಕಾರ ₹43,750 ರೂ. ಗಳ ಸಹಾಯಧನ ನೀಡುತ್ತದೆ. ಫಲಾನುಭವಿಗಳು ₹43,750 ರೂ. ಗಳನ್ನು ಠೇವಣಿ ಇಡಬೇಕು. ಕರ್ನಾಟಕದ ಹಣಕಾಸು ಸಂಸ್ಥೆಗಯು ಶೇ. 9.26ರ ಬಡ್ಡಿ ದರದಲ್ಲಿ ₹87,500 ರೂ.ಗಳ ಸಾಲ ಸೌಲಭ್ಯವೂ ರೈತರಿಗೆ ಸಿಗುತ್ತದೆ. ಈ ಯೋಜನೆಗೆ ಅರ್ಜಿಯನ್ನೂ ಸಲ್ಲಿಸುವ ಮೂಲಕ ಆಯ್ಕೆಯಾದ ರೈತ ಫಲಾನುಭವಿಗಳು 20 ಅಥವಾ ಅದಕ್ಕಿಂತ ಹೆಚ್ಚಿನ ಕುರಿ ಮತ್ತು ಮೇಕೆಗಳನ್ನು ಖರೀದಿಸಬಹುದು ಮತ್ತು ಅವುಗಳನ್ನು ಸ್ವತಃ ಸಾಕಬಹುದು.
ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಹಾಯಧನ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:
ಹೆಚ್ಚಿನ ಮಾಹಿತಿಗಾಗಿ ಅರ್ಜಿದಾರರು ಕಛೇರಿಗೂ ಸಹ ಭೇಟಿ ನೀಡಬಹುದು. ಇನ್ನೂ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ದೂರವಾಣಿ ಸಂಖ್ಯೆ 08194-222718, ಮೊಬೈಲ್ ಸಂಖ್ಯೆ 9448656231 ಗೆ ಕರೆ ಮಾಡಿ ಮಾಹಿತಿ ಪಡೆಯಿರಿ.