ವಿದ್ಯಾರ್ಥಿಗಳಿಗೆ 25000 ಸ್ಕಾಲರ್ಶಿಪ್ ಭಾಗ್ಯ..! ಶಾಲೆ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ..! Apply Now..!

ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಭಾಗ್ಯ..!

ಕರ್ನಾಟಕದ ಜನತೆಗೆ ನಮಸ್ಕಾರಗಳು..!

WhatsApp Group Join Now
Telegram Group Join Now

ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ವಿದ್ಯಾರ್ಥಿಗಳಿಗಾಗಿ ರೈತರಿಗೂ ಕೂಡ ಉಪಯುಕ್ತ ವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಬಗ್ಗೆ ತಿಳಿಯೋಣ ಬನ್ನಿ.!

Prize Money: ಪ್ರೋತ್ಸಾಹಧನದ ವಿಧ್ಯಾರ್ಥಿವೇತನದ ಬಗ್ಗೆ ಸಂಪೂರ್ಣ ವಿವರ.!

ಹೌದು, ಪಿಯುಸಿ, ಪದವಿ (Degree) ಮತ್ತು ಪಿಜಿ (Post Graduation) ಕೋರ್ಸ್ಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಅಂದರೆ ಈ ವಿದ್ಯಾರ್ಥಿವೇತನಕ್ಕಾಗಿ 60% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ (SC,ST) ಪಂಗಡದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರವೂ ಈ ಪ್ರೋತ್ಸಾಹಧನದ ವಿದ್ಯಾರ್ಥಿವೇತನವನ್ನು ನೀಡುತ್ತಿದೆ.

ಈ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ನೀವು PUC ಅನ್ನು ಅಥವಾ ಪದವಿ/ಸ್ನಾತಕೋತ್ತರ ಪದವಿಯನ್ನು 2024ನೇ ವರ್ಷದ ಒಳಗೆ ನಿಮ್ಮ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನೂ (1st Class) ನಲ್ಲಿ ಪೂರ್ಣಗೊಳಿಸಿರಬೇಕು. ಈ ಪ್ರೋತ್ಸಾಹಧನದ ವಿದ್ಯಾರ್ಥಿವೇತನದಲ್ಲಿ ಯಾವೆಲ್ಲಾ ಕೋರ್ಸ್ ಗಳಿಗೆ ಎಷ್ಟು ಹಣ ಸಿಗಲಿದೆ ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹೌದು ಸ್ನೇಹಿತರೇ, ಈ ವಿದ್ಯಾರ್ಥಿವೇತನವನ್ನು ಪಡೆಯಲು, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ (SC,ST) ಗೆ ಸೇರಿದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿವೇತನವನ್ನು ಸ್ವೀಕರಿಸುವವರ ಅರ್ಹತೆಗೆ ಅನುಗುಣವಾಗಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ನಾವು ಇದರ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ.

• 2nd PUC (ದ್ವಿತೀಯ ಪಿಯುಸಿ) ವಿದ್ಯಾರ್ಥಿಗಳಿಗೆ ಮತ್ತು Diploma (ಡಿಪ್ಲೊಮಾ) ವಿದ್ಯಾರ್ಥಿಗಳಿಗೆ -₹ 20,000/-

• ಪದವಿ (Degree) ವಿದ್ಯಾರ್ಥಿಗಳಿಗೆ: ₹25,000/- (ಉದಾಹರಣೆ: B.A, BSc, B.Com ಮತ್ತು ಯಾವುದೇ ಇತರ ಪದವಿ)

• ಸ್ನಾತಕೋತ್ತರ ಪದವಿ (Post Graduate)ಯ ವಿದ್ಯಾರ್ಥಿಗಳಿಗೆ: – ₹30,000/- (ಉದಾಹರಣೆ: – M.A, MSc ಇತ್ಯಾದಿ ಸ್ನಾತಕೋತ್ತರ ವಿದ್ಯಾರ್ಥಿಗಳ ವಿಧ್ಯಾರ್ಥಿಗಳು ಅನ್ವಯಿಸುತ್ತಾರೆ)

• ಅಗ್ರಿಕಲ್ಚರ್, ಪಶುವೈದ್ಯಕೀಯ, ಎಂಜಿನಿಯರಿಂಗ್, MBBS: – ₹35,000.

Prize Money: ಈ ಪ್ರೋತ್ಸಾಹಧನದಲ್ಲಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು.?

ಈ ಪ್ರೋತ್ಸಾಹಧನದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ (SC,ST) ವರ್ಗಕ್ಕೆ ಸೇರಿದವರಾಗಿರಬೇಕು.

ಪ್ರೋತ್ಸಾಹಧನದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ತಮ್ಮ ಪ್ರಸ್ತುತ ತರಗತಿಯಲ್ಲಿ ಕನಿಷ್ಠ 60%(1st Class) ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಸಾಧಿಸಿರಬೇಕು.

ಈ ಪ್ರೋತ್ಸಾಹಧನದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ತಮ್ಮ ಪ್ರಸ್ತುತ ಕೋರ್ಸ್ ಗಳಲ್ಲಿ ಮೊದಲ ಬಾರಿಯಲ್ಲಿ(1st Attempt) ನಲ್ಲಿ ಉತ್ತೀರ್ಣರಾಗಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು

• ಆಧಾರ್ ಕಾರ್ಡ್

• ಹತ್ತನೇ ತರಗತಿ ಮಾರ್ಕ್ಸ್ ಕಾರ್ಡ್

• ಜಾತಿ ಪ್ರಮಾಣ ಪತ್ರ

• ಹತ್ತನೇ ತರಗತಿ ಮಾರ್ಕ್ಸ್ ಕಾರ್ಡ್

• ಇತ್ತೀಚಿನ ಭಾವಚಿತ್ರ

• ಆದಾಯ ಪ್ರಮಾಣ ಪತ್ರ

• ಬ್ಯಾಂಕ್ ಪಾಸ್ ಬುಕ್

• ಮಾರ್ಕ್ಸ್ ಕಾರ್ಡ್

Leave a Reply

Your email address will not be published. Required fields are marked *