Gruhalakshmi Status
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರಸ್ತುತ ನಮ್ಮ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಎಲ್ಲ ಕಂತಿನ ಮಹಿಳೆಯರ ಖಾತೆಗೆ ಜಮಾ ಆಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ಲವೋ ಎಂದು ಈಗಲೇ ಚೆಕ್ ಮಾಡಿಕೊಳ್ಳಿ..
ಈಗಾಗಲೇ ಇಲ್ಲಿಯವರೆಗೂ ಮಹಿಳೆಯರ ಖಾತೆಗೆ 10ನೇ ಕಂತಿನವರೆಗೂ ಹಣ ಜಮಾ ಆಗಿದ್ದು ಇದೀಗ ರಾಜ್ಯ ಸರ್ಕಾರದಿಂದ 11ನೇ ಕಂತಿನ ಹಣವು ಕೂಡ ಬಿಡುಗಡೆಯಾಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ಲವೋ ಚೆಕ್ ಮಾಡಿಕೊಳ್ಳುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ..
ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಎಲ್ಲಾ ಕಂತಿನ ಹಣವು ಮಹಿಳಾ ಫಲಾನುಭವಿಗಳ ಖಾತೆಗೆ ಇನ್ನೇನು ಜಮಾ ಆಗುತ್ತಾ ಬಂದಿದೆ. ನೀವು ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಿಕೊಳ್ಳಬಹುದು. ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಸಿಕೊಟ್ಟಿದ್ದೇನೆ ಲೇಖನವನ್ನು ಕೊನೆಯವರೆಗೂ ಓದಿರಿ.
Gruha Lakshmi Scheme Pending Amount:ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ.!
ಬಹು ಮುಖ್ಯವಾಗಿ, ಈ ಗೃಹಲಕ್ಷ್ಮಿ ಯೋಜನೆಯನ್ನು ಜನತೆಗೆ ತಲುಪಿಸಲು ಶ್ರಮಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರೂ ಸಹ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರಿಯಾದ ಸಮಯಕ್ಕೆ ಎಲ್ಲಾ ಮಹಿಳಾ ಫಲಾನುಭಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯನ್ನೂ ಯಾವುದೇ ರೀತಿಯಾದ ಸಮಸ್ಯೆ ಇಲ್ಲದೆಯೇ ನಾವು ಮಾಡುತ್ತೇವೆ ಹಾಗೂ ಯಾವುದೇ ರೀತಿಯಾದ ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಹೌದು ಸ್ನೇಹಿತರೇ, ನಿಮ್ಮ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ವರ್ಗಾಯಿಸುವ ಮೊದಲು ನಿಮ್ಮ ಬ್ಯಾಂಕ್ ಖಾತೆಯು ಯಾವುದೇ ಸಮಸ್ಯೆ ಇಲ್ಲದೇ ಸರಿಯಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮಗೆ ತಿಳಿದಿರುವಂತೆ,
e-KYC ಪ್ರಕ್ರಿಯೆಯನ್ನೂ ನೀವು ಮಾಡಿಸಿಕೊಂಡಿದ್ದೀರಾ, ಮತ್ತು ನಿಮ್ಮ ಆಧಾರ್ ಕಾರ್ಡ್ (Aadhar Card) ಮತ್ತು ನಿಮ್ಮ ಬ್ಯಾಂಕ್ ಖಾತೆಯ (Bank Account) ಅನ್ನು ಸೀಡಿಂಗ್ ನೀವು ಮಾಡಿಸಿಕೊಂಡಿದ್ದೀರಾ…etc ಈ ರೀತಿ ಎಲ್ಲವೂ ಸರಿಯಾಗಿದ್ದರೆ ಮಾತ್ರ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ.
ಸಚಿವಾಲಯದ ಇತ್ತೀಚಿನ ಪ್ರಮುಖ ಮಾಹಿತಿಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಇರುವ ಎಲ್ಲಾ ಕಂತಿನ ಹಣವನ್ನು ಈ 14 ಜಿಲ್ಲೆಗಳಿಗೆ ಆರಂಭದಲ್ಲಿ ಅಂದರೆ ಮೊದಲು ಸರ್ಕಾರದಿಂದ ವರ್ಗಾಯಿಸಲಾಗುವುದು ಎಂದು ತಿಳಿದುಬಂದಿದೆ.
ಮೊದಲನೇ ಹಂತದ ಗೃಹಲಕ್ಷ್ಮಿ ಯೋಜನೆ ಹಣವು ಈ 14 ಜಿಲ್ಲೆಗಳಲ್ಲಿ ಬಿಡುಗಡೆಯಾಗಲಿದೆ.!
• ಬೆಂಗಳೂರು ನಗರ
• ಬೆಂಗಳೂರು ಗ್ರಾಮಾಂತರ
• ದಕ್ಷಿಣ ಕನ್ನಡ
• ಶಿವಮೊಗ್ಗ
• ದಾವಣಗೆರೆ
• ಚಿತ್ರದುರ್ಗ
• ಬಳ್ಳಾರಿ
• ಬೆಂಗಳೂರು ಗ್ರಾಮಾಂತರ
• ಕಲ್ಬುರ್ಗಿ
• ಉಡುಪಿ
• ತುಮಕೂರು
• ಉತ್ತರ ಕನ್ನಡ
• ರಾಯಚೂರು
• ವಿಜಯಪುರ
ಮೊದಲನೇ ಹಂತದ ಗೃಹಲಕ್ಷ್ಮಿ ಯೋಜನೆ ಹಣವು ಈ 14 ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣವನ್ನು ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ (DBT) ಮುಖಂತರ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ನೇರವಾಗಿ ಯೋಜನೆಯ ಹಣವನ್ನು ಬಿಡುಗಡೆ ಮಾಡುವಂತಹ ಕೆಲಸವನ್ನು ಸರ್ಕಾರದಿಂದ ಮಾಡಲಾಗುತ್ತದೆ ಎಂಬುದಾಗಿ ಈಗಾಗಲೇ ತಿಳಿದು ಬಂದಿದೆ ಎಂದು ಹೇಳಬಹುದು.