ಕುರಿ ಸಾಕಾಣಿಕೆ ಮಾಡಲು ಸರ್ಕಾರದಿಂದ 55, ಸಾವಿರ ರೂಪಾಯಿ ಸಹಾಯಧನ..! ಈ ಕೂಡಲೇ ಅರ್ಜಿ ಸಲ್ಲಿಸಿ..! Apply Now..!

ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು…

ಜ್ಞಾನ ಘರ್ಜನೆ ಹೊಸ ಲೇಖನಕ್ಕೆ ಸ್ವಾಗತ..

WhatsApp Group Join Now
Telegram Group Join Now

ಪ್ರೀತಿಯ ಓದುವೇ ಪ್ರತಿನಿತ್ಯದ ಜ್ಞಾನ ಗರ್ಜನೆ ಲೇಖನದಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಕೇಂದ್ರ ಸರ್ಕಾರದಿಂದ ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಮಾಡುವಂತಹ ರೈತರಿಗೆ ದೊರೆಯುವ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ…

Dairy farming subsidy:

ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಸ್ನೇಹಿತರೆ ಇವತ್ತಿನ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ಕೃಷಿ ಒಂದನ್ನೇ ಅವಲಂಬಿಸಿ ಬದುಕುವ ರೈತರಿಗೆ ಕೃಷಿ ನಿಶ್ಚಿತ ಆದಾಯವನ್ನು ತಂದುಕೊಡುತ್ತದೆ,

ಎಂದು ಭರವಸೆಯನ್ನು ನೀಡಲು ಆಗುವುದಿಲ್ಲ. ಇದೆಲ್ಲದರ ನಡುವೆ ಭಾರತವು ಮೂಲತಃ ಹಳ್ಳಿಗಳ ದೇಶ ಹಾಗೂ ನಮ್ಮ ದೇಶದಲ್ಲಿನ ಹೆಚ್ಚಿನ ಜನರು ಜೀವನೋಪಾಯಕ್ಕಾಗಿ ಕೃಷಿಯನ್ನು ಅನುಸರಿಸುತ್ತಿದ್ದಾರೆ.

Goat Farming Subsidy Scheme 2024: ಸಾಕಣೆ ಸಹಾಯಧನ ಯೋಜನೆ 2024:

ಇಂದಿನ ಲೇಖನದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಸರಕಾರದಿಂದ ಶುಭ ಸುದ್ದಿಯೊಂದಿದೆ ಎಂದು ನಿಮಗೆಲ್ಲ ತಿಳಿಸಲು ಬಯಸುತ್ತೇವೆ.

ಕುರಿ ಅಥವಾ ಮೇಕೆಗಳನ್ನು ಖರೀದಿಸಲು ನಿಮಗೆ ಸರ್ಕಾರದ ಸಹಾಯಧನವೂ ಬೇಕೇ? ಹೌದು ಎಂದಾದರೆ, ಈ ಲೇಖನವನ್ನು ಕೊನೆಯವರೆಗೂ ಓದಿ, ನಾವು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಒದಗಿಸಿದ್ದೇವೆ.

ಕುರಿ ಮತ್ತು ಮೇಕೆಗಳನ್ನು ಸಾಕಲು ಜನರು ಸರ್ಕಾರದಿಂದ ಸಹಾಯಧನ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಈ ಸವಲತ್ತುಗಳ ಸಲುವಾಗಿ ಕರ್ನಾಟಕ ಸರ್ಕಾರವು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳಲು ಬಯಸುವ ಅರ್ಹ ಮತ್ತು ಆಸಕ್ತ ವ್ಯಕ್ತಿಗಳಿಂದ ಹಾಗೂ ರೈತರಿಂದ ಸಹಾಯಧಾನಕ್ಕೆ ಅರ್ಜಿಗಳನ್ನು ಆಹ್ವಾನಿದೆ.

Goat Farming Subsidy Scheme 2024: ಮೇಕೆ ಸಾಕಾಣಿಕೆಗೆ ರಾಜ್ಯ ಸರ್ಕಾರದಿಂದ ಸಿಗಲಿದೆ ಸಹಾಯಧನ.!

ಅಮೃತ ಸ್ವಾಬಿಮಾನಿ ಕುರಿಗಾಹಿ ಯೋಜನೆಯಡಿ, ಅರ್ಹ ಅಭ್ಯರ್ಥಿಗಳು ಕುರಿ ಮತ್ತು ಮೇಕೆ ಸಾಕಣೆಗಾಗಿ ರೂ. ₹175 ಲಕ್ಷ ಹಣದ ಆರ್ಥಿಕ ಸಹಾಯವನ್ನು ಪಡೆಯಬಹುದು.

ಈ ಯೋಜನೆಯು ಉಣ್ಣೆ ಉತ್ಪಾದಕರ ಸಹಕಾರಿ ಸದಸ್ಯರಾಗಿ ನೋಂದಾಯಿಸಲ್ಪಟ್ಟ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು (706) ಘಟಕಗಳನ್ನು ನೀಡಲು ಸರ್ಕಾರ ಯೋಜಿಸಿದ್ದು, ಪ್ರತಿ ಘಟಕದ ವೆಚ್ಚವೂ ₹1,75,000 ರೂ. ಹಣವನ್ನು ನಿರ್ಧರಿಸಲಾಗಿದೆ.

ರಾಜ್ಯ ಸರಕಾರ ₹43,750 ರೂ. ಗಳ ಸಹಾಯಧನ ನೀಡುತ್ತದೆ. ಫಲಾನುಭವಿಗಳು ₹43,750 ರೂ. ಗಳನ್ನು ಠೇವಣಿ ಇಡಬೇಕು. ಕರ್ನಾಟಕದ ಹಣಕಾಸು ಸಂಸ್ಥೆಗಯು ಶೇ. 9.26ರ ಬಡ್ಡಿ ದರದಲ್ಲಿ ₹87,500 ರೂ.ಗಳ ಸಾಲ ಸೌಲಭ್ಯವೂ ರೈತರಿಗೆ ಸಿಗುತ್ತದೆ. ಈ ಯೋಜನೆಗೆ ಅರ್ಜಿಯನ್ನೂ ಸಲ್ಲಿಸುವ ಮೂಲಕ ಆಯ್ಕೆಯಾದ ರೈತ ಫಲಾನುಭವಿಗಳು 20 ಅಥವಾ ಅದಕ್ಕಿಂತ ಹೆಚ್ಚಿನ ಕುರಿ ಮತ್ತು ಮೇಕೆಗಳನ್ನು ಖರೀದಿಸಬಹುದು ಮತ್ತು ಅವುಗಳನ್ನು ಸ್ವತಃ ಸಾಕಬಹುದು.

ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಹಾಯಧನ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ರೈತರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಂದ ಅರ್ಜಿ ನಮೂನೆಯನ್ನು ಪಡೆಯಬಹುದು. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಜುಲೈ 31 ರ ಸಂಜೆ 5:30 ರೊಳಗಾಗಿ ಸಹಕಾರಿ ಸಂಘದ ಆವರಣದಲ್ಲಿ ಅಥವಾ ಚಿತ್ರದುರ್ಗದ ಪಶು ಆಸ್ಪತ್ರೆಯ ನಿಗಮದ ಸಹಕಾರ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಅರ್ಜಿದಾರರು ಕಛೇರಿಗೂ ಸಹ ಭೇಟಿ ನೀಡಬಹುದು. ಇನ್ನೂ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ದೂರವಾಣಿ ಸಂಖ್ಯೆ 08194-222718, ಮೊಬೈಲ್ ಸಂಖ್ಯೆ 9448656231 ಗೆ ಕರೆ ಮಾಡಿ ಮಾಹಿತಿ ಪಡೆಯಿರಿ.

Leave a Reply

Your email address will not be published. Required fields are marked *