ರೈತರ ಖಾತೆಗೆ ಮೂರನೇ ಹಂತದ ಬರ ಪರಿಹಾರ ಜಮಾ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಮೂರನೇ ಹಂತದ ಬರ ಪರಿಹಾರ ಖಾತೆಗೆ ಜಮಾ ಆಗಿದ್ದು ಇದರ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ ತಿಳಿದುಕೊಳ್ಳೋಣ ಬನ್ನಿ..!
ಅದು ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಿರುವಂತೆ ರೈತರ ಖಾತೆಗೆ ಒಂದನೇ ಹಂತದ ಎರಡನೇ ಹಂತದ ಮೂರನೇ ಹಂತದ ಬರ ಪರಿಹಾರ ಬಿಡುಗಡೆಯಾಗಿದ್ದು ಹಲವು ರೈತರ ಖಾತಿಗೆ ಈಗಾಗಲೇ ಮೂರನೇ ಹಂತದ ಬಿಡುಗಡೆಯಾಗಿದ್ದು ಇದೀಗ ಇನ್ನುಳಿದ ರೈತರ ಖಾತೆಗೆ ಮೂರನೇ ಹಂತದ ಪರಿಹಾರವು ಜಮಾ ಆಗಿದ್ದು ಇದನ್ನ ಚೆಕ್ ಮಾಡಿಕೊಳ್ಳುವುದು ಹೇಗೆ ಈಗಲೇ ತಿಳಿಯೋಣ ಬನ್ನಿ…
ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗಿದೆಯಾ ಅಥವಾ ಇಲ್ಲವೋ ಎಂದು ನೀವು DBT App ಮುಖಾಂತರ ಚೆಕ್ ಮಾಡಿಕೊಳ್ಳಬಹುದು..
https://play.google.com/store/apps/details?id=com.dbtkarnataka
ಹೌದು ಸ್ನೇಹಿತರೆ ಈ ಮೇಲ್ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಆಪ್ ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ನೀವು ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದಾಗಿದೆ..
ಬರ ಪರಿಹಾರ ಹಣ ಬಿಡುಗಡೆಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ 18 ಸಾವಿರ ಕೋಟಿ ಅನುದಾನ ಬೇಡಿಕೆ ಇಟ್ಟಿತ್ತು ಆದರೆ (NDF) ಮಾರ್ಗಸೂಚಿಯಂತೆ ನಮ್ಮ ರಾಜ್ಯಕ್ಕೆ 3454 ಕೋಟಿ ರೂಪಾಯಿ ಬರ ಪರಿಹಾರ ಹಣ ಬಿಡುಗಡೆಗೆ ಕೇಂದ್ರ ಸರ್ಕಾರ ಕಡೆಯಿಂದ ನೆರವು ದೊರೆಯುತ್ತಿದೆ. ಇದರಿಂದ ನಮ್ಮ ರಾಜ್ಯ ಸರ್ಕಾರ ಎರಡು ಹಂತಗಳಲ್ಲಿ ಈಗಾಗಲೇ ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ
ಬರ ಪರಿಹಾರ ಹಣದ ಪಟ್ಟಿ (bele parihar list) ಚೆಕ್ ಮಾಡುವುದು ಹೇಗೆ..?
ಸ್ನೇಹಿತರೆ ನಿಮ್ಮ ಖಾತೆಗೆ ಎಷ್ಟು ಬರ ಪರಿಹಾರದ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ಹಾಗೂ ಒಂದು ವೇಳೆ ಜಮಾ ಆಗಿಲ್ಲ ಅಂದರೆ ಯಾವ ರೀತಿ ಮಾಹಿತಿ ಚೆಕ್ ಮಾಡುವುದು ಎಂಬುದನ್ನು ಈಗ ತಿಳಿದುಕೊಳ್ಳೋಣ. ಬರ ಪರಿಹಾರದ ಹಣದ ಮಾಹಿತಿಯನ್ನು ಚೆಕ್ ಮಾಡಲು ನೀವು ಬರ ಪರಿಹಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅದರ ಲಿಂಕ್ ಅನ್ನು ನಾವು ಕೆಳಗಡೆ ನೀಡಿದ್ದೇವೆ.
ಬರ ಪರಿಹಾರ (bele parihar list) ಹಣ ಜಮಾ ಆಗದೆ ಇದ್ದರೆ ಏನು ಮಾಡಬೇಕು..?
ಹೌದು ಸ್ನೇಹಿತರೆ ನಿಮಗೇನಾದರೂ ಬರ ಪರಿಹಾರದ ಹಣ ಜಮಾ ಆಗಿಲ್ವ ಹಾಗಾದರೆ ನೀವು ನಿಮ್ಮ ಎಲ್ಲಾ ದಾಖಲಾತಿಗಳು ತೆಗೆದುಕೊಂಡು ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿ (ಕುಲಕರಣಿ) ಭೇಟಿ ನೀಡಬೇಕು ಮತ್ತು ಯಾವ ಕಾರಣಕ್ಕೆ ಬರ ಪರಿಹಾರ ಹಣ ಜಮಾ ಆಗಿಲ್ಲ ಎಂಬ ಮಾಹಿತಿಯನ್ನು ನೀವು ಆ ಅಧಿಕಾರಿಗಳ ಹತ್ತಿರ ಮಾಹಿತಿ ಪಡೆದುಕೊಳ್ಳಬಹುದು