Gruhalakshmi Big Updates..!
ಗೃಹಲಕ್ಷ್ಮಿ’ ಹಣ ನೀಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲವೇ ,ಈ ದಿನಾಂಕದಂದು ಒಟ್ಟಿಗೆ ಜಮಾ ಆಗುತ್ತೆ 4 ಸಾವಿರ .
ಇನ್ನೂ ಸಲ್ಪ ಮಹಿಳೆಯರಿಗೆ ‘ಗೃಹಲಕ್ಷ್ಮಿ’ ಹಣ ಬಂದಿಲ್ಲವೆಂದು ಎಂದು ನೀವೂ ಆತಂಕ ಪಡುವ ಅವಶ್ಯಕತೆ ಇಲ್ಲ,
ಏಕೆಂದರೆ ಹಿಂದಿನ ತಿಂಗಳು ಬಾಕಿ ಹಣ ಪೆಂಡಿಂಗ್ ಇದ್ದರೆ ಒಂದೇ ಬಾರಿಗೆ ಬಾಕಿ ತಿಂಗಳು ಸೇರಿ 2 ತಿಂಗಳ ಹಣವನ್ನು ಪ್ರತಿ ತಿಂಗಳು 15 ನೇ ತಾರೀಕಿನ ಒಳಗಡೆ ಗೃಹಲಕ್ಷ್ಮಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .
ನೀವೆಲ್ಲರೂ ಸಾಮಾನ್ಯವಾಗಿ ತಿಳಿದಿರುವ ಹಾಗೆ ಒಂದು ದಿನಕ್ಕೆ ಹಣದ ವರ್ಗಾವಣೆಗೆ ಲಿಮಿಟ್ ಇರುವುದರಿಂದ ಮೊದಲನೇ ಕಂತಿನ ಹಣ ತಲುಪಿಸುವುದು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಹಾಗೆಯೇ ಮಹಿಳೆಯರು ತಮ್ಮ ಖಾತೆಗಳಿಗೆ ಆಧಾರ್ ಲಿಂಕ್ ಆಗಿಲ್ಲ ಎಂದರೆ ಅಥವಾ ಆಧಾರ್ ಲಿಂಕ್ ಆಗಿದ್ದರು ಆ ಖಾತೆ ಆಕ್ಟಿವ್ ಆಗಿಲ್ಲ ಎಂದರೆ ಇದನ್ನು ಸರಿಪಡಿಸಿಕೊಳ್ಳಬೇಕು ಎಂದೂ ಮಾಹಿತಿಯನ್ನು ತಿಳಿಸಲಾಗಿದೆ
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕುಟುಂಬದ ಯಜಮಾನರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ,
ಲಕ್ಷ್ಮಿ ಯೋಜನೆಯ ಅಡಿಯಲ್ಲಿ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಅವಧಿಗೆ 4600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಗೃಹಲಕ್ಷ್ಮಿ ಯೋಜನೆ ಹಣ ಜಮೆ ಆಗಿಲ್ಲವೇ ಹಾಗಾದರೆ ಹೀಗೆ ಮಾಡಿ
1.ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಇನ್ನು ನಿಮ್ಮ ಖಾತೆಗೆ 2000 ಹಣ ಜಮೆ ಆಗದಿದ್ದರೆ 8147500500 ಸಂಖ್ಯೆಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಸಂದೇಶ ಕಳುಹಿಸಿರಿ.
2.ಈ ಸಂಖ್ಯೆಗೆ ಸಂದೇಶ ಕಳುಹಿಸಿದ ತಕ್ಷಣವೇ ನಿಮ್ಮ ಗೃಹಲಕ್ಷ್ಮಿ ಅರ್ಜಿಯ ಪರಿಸ್ಥಿತಿ ಏನಾಗಿದೆ ಯಾವ ಹಂತದಲ್ಲಿದೆ ಎಂಬ ಸಂದೇಶ ಬರಲಿದೆ.
ಒಂದು ವೇಳೆ ನಿಮ್ಮ ಅರ್ಜಿ ತಿರಸ್ಕಾರವಾಗಿದ್ದರೆ, ಇಲ್ಲವೇ ನಿಮ್ಮ ಖಾತೆಗೆ ಹಣ ಬರುವುದಕ್ಕೆ ವಿಳಂಬವಾಗುವುದಾದರೆ, ಜೊತೆಗೆ ನೀವು ನೀಡಿರುವ ಮಾಹಿತಿಯು ಹೊಂದಾಣಿಕೆ ಆಗಿಲ್ಲದಿದ್ದರೆ ಸಂಪೂರ್ಣ ಮಾಹಿತಿ ತಿಳಿಯಲಿದೆ.
3.ಒಂದು ವೇಳೆ ನಿಮ್ಮ ಅರ್ಜಿಯಲ್ಲಿ ಗೊಂದಲವಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ಸಂದೇಶ ಬರಲಿದೆ.
ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ರೂ.2000 ಬಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿ
ಗೃಹ ಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳು ತಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬೇಕು ಏಕೆಂದರೆ ಮುಂದಿನ ದಿನಗಳಲ್ಲಿ ಪ್ರಯೋಜನಗಳನ್ನು ವರ್ಗಾಯಿಸಲಾಗುವುದು.
ಹಂತ 1:ನಿಮ್ಮ ಅರ್ಜಿಯನ್ನು ಅಧಿಕಾರಿಗಳು ಅನುಮೋದಿಸದಿದ್ದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಪ್ರಯೋಜನಗಳನ್ನು ಪಡೆಯುವುದಿಲ್ಲ.
ಹಂತ 2:ಅಪ್ಲಿಕೇಶನ್ ಸ್ಥಿತಿಯನ್ನು ತಿಳಿಯಲು ನಿಮ್ಮ RC ಸಂಖ್ಯೆಯನ್ನು ಬಳಸಿಕೊಂಡು ನೀವು ಗೃಹ ಲಕ್ಷ್ಮಿ ಸ್ಕೀಮ್ ಸ್ಥಿತಿ ಪರಿಶೀಲನೆ ahara.kar.nic.in ಅನ್ನು ಪೂರ್ಣಗೊಳಿಸಬೇಕು.
ಹಂತ3 : ಯೋಜನೆಯ ಪ್ರಯೋಜನಗಳನ್ನು ಪಡೆಯಲು ನೀವು eKYC ಅನ್ನು ಪೂರ್ಣಗೊಳಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ ಅರ್ಜಿಯು ಪೂರ್ಣಗೊಂಡಿದ್ದರೆ ಮತ್ತು ಅನುಮೋದಿತವಾಗಿದ್ದರೆ ನಿಮ್ಮ DBT ಲಿಂಕ್ಡ್ ಬ್ಯಾಂಕ್ ಖಾತೆಯಲ್ಲಿ ಪಾವತಿಯನ್ನು ಸ್ವೀಕರಿಸಲು ಸಿದ್ಧರಾಗಿ.
ಗೃಹ ಲಕ್ಷ್ಮಿ ಸ್ಟೇಟಸ್ ರ ಆರ್‌ಸಿ ಸಂಖ್ಯೆಯಿಂದ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿ
ಹಂತ 1: ನೀವು RC ಸಂಖ್ಯೆಯ ಮೂಲಕ ahara.kar.nic.in ಗೃಹ ಲಕ್ಷ್ಮಿ ಸ್ಥಿತಿ ಪರಿಶೀಲನೆ 2023 ಅನ್ನು ಮಾಡಬಹುದು.
ಹಂತ 2:ನೀವು ಮಾಡಬೇಕಾಗಿರುವುದು ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಪಡೆಯಿರಿ ಮತ್ತು ಕೆಳಗೆ ನೀಡಲಾದ ನೇರ ಲಿಂಕ್‌ನಲ್ಲಿ ಅದನ್ನು ಬಳಸಿ.
ಹಂತ 3:ನೀವು ಅರ್ಜಿ ಸಲ್ಲಿಸಿದ ಸೇವೆಗಳನ್ನು ಆಯ್ಕೆ ಮಾಡಿ ಮತ್ತು ನಂತರ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡಿ.
ಹಂತ 4: ಈ ಪುಟದಲ್ಲಿ ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಿ ಮತ್ತು ನಂತರ ಹೆಚ್ಚಿನ ಬಳಕೆಗಾಗಿ ಉಲ್ಲೇಖ ಸಂಖ್ಯೆಯನ್ನು ಡೌನ್‌ಲೋಡ್ ಮಾಡಿ.
ಹಂತ5: ನೀವು ಗೃಹ ಲಕ್ಷ್ಮಿ ಡಿಬಿಟಿ ಸ್ಥಿತಿಯನ್ನು ಪರಿಶೀಲಿಸಲು ಬಯಸಿದರೆ ಪೋರ್ಟಲ್‌ನಲ್ಲಿ ಈ ಉಲ್ಲೇಖ ಸಂಖ್ಯೆಯನ್ನು ಬಳಸಿ.