ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಭರ್ಜರಿ 1700+ ಹುದ್ದೆಗಳ ನೇಮಕಾತಿ : ಜಸ್ಟ್ 10ನೇ ತರಗತಿ ಪಾಸಾಗಿದ್ದರೆ ಸಾಕು!
KKRTC Conductor Recruitment 2024
ಕಲ್ಯಾಣ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವಂತಹ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕೆಕೆಆರ್‌ಟಿಸಿ ಪ್ರಸ್ತಾವನೆ ಸಲ್ಲಿಸಿದೆ. ಈ ನೇಮಕಾತಿ ಶೀಘ್ರದಲ್ಲಿ ಆರಂಭವಾಗಲಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಜ್ಞಾನ ಘರ್ಜನೆ ಜಾಲತಾಣದಿಂದ ಪ್ರತಿಯೊಬ್ಬರಿಗೂ ನಮಸ್ಕಾರಗಳು.
ನಮ್ಮ ಈಗಿನ ಜ್ಞಾನ ಘರ್ಜನೆ ಜಾಲತಾಣದಲ್ಲಿ ದಿನನಿತ್ಯ ಅನೇಕ ರೀತಿಯ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದೇವೆ. ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತಹ ಮಾಹಿತಿಗಳನ್ನು ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಗಳನ್ನು ಹಾಗೂ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತಹ ಮಾಹಿತಿಗಳನ್ನು ನೀಡುತ್ತಿದ್ದು ಇವತ್ತಿನ ಈ ಒಂದು ಲೇಖನದಲ್ಲಿ ನಾವು ಕಲ್ಯಾಣ ಕರ್ನಾಟಕ ಭಾಗದ ಸಾರಿಗೆ ಇಲಾಖೆಯ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ.
ಎಷ್ಟು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ?
ಆತ್ಮೀಯ ಸ್ನೇಹಿತರೆ ಕಲ್ಯಾಣ ಕರ್ನಾಟಕ ಭಾಗದ ಕೆಕೆಆರ್‌ಟಿಸಿ ಹೊಸದಾಗಿ 1,773 ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದೆ.
ಶೀಘ್ರದಲ್ಲಿ ಆರ್ಥಿಕ ಇಲಾಖೆಯಿಂದ ಗ್ರೀನ್ ಸಿಗ್ನಲ್!
ಹೌದು ಸ್ನೇಹಿತರೆ, ಕೆಕೆಆರ್‌ಟಿಸಿ ಈ ಭಾಗದಲ್ಲಿ ಚಾಲಕರ ಹುದ್ದೆಗಳ ಸಂಖ್ಯೆ ಒಟ್ಟು 4,762 ಇದ್ದು ನಿರ್ವಾಹಕ ಹುದ್ದೆಗಳ ಸಂಖ್ಯೆ ಮಾತ್ರ ಕಡಿಮೆ ಇದೆ. 4,762 ಚಾಲಕರ ಹುದ್ದೆಗಳ ಸಂಖ್ಯೆಗೆ 50:50 ಆಗಿ 4,762 ನಿರ್ವಾಹಕ/ ಕಂಡಕ್ಟರ್ ಹುದ್ದೆಗಳು ಇರಬೇಕಿತ್ತು. ಆದರೆ ಈ ಭಾಗದಲ್ಲಿ ನಿರ್ವಾಹಕರ ಸಂಖ್ಯೆ ಕೇವಲ 1,220 ಮಾತ್ರ ಇರುವುದರಿಂದ, ನಿರ್ವಾಹಕರ ಹುದ್ದೆಗಳ ಬೇಡಿಕೆ ಹೆಚ್ಚಾಗಿದೆ.
ಈ ಭಾಗದಲ್ಲಿ ಹೊಸ ಬಸ್ ಗಳ ಖರೀದಿ ಹೆಚ್ಚಾಗಿರುವುದರಿಂದ ಉದ್ಯೋಗಗಳ ನೇಮಕಾತಿ ಸಂಖ್ಯೆ ಹೆಚ್ಚಾಗಲಿದೆ. ಕಲ್ಯಾಣ ಸಾರಿಗೆ ಇಲಾಖೆಯು ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಆರ್ಥಿಕ ಇಲಾಖೆಯು ಶೀಘ್ರದಲ್ಲಿಯ ಗ್ರೀನ್ ಸಿಗ್ನಲ್ ನೀಡಲಿದೆ. ಆರ್ಥಿಕ ಇಲಾಖೆಯ ಅನುಮತಿ ನೀಡಿದ ನಂತರ ನೇಮಕಾತಿಗೆ ಚಾಲನೆ ನೀಡಲಿದೆ.
ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಬೇಕಾಗಿರುವ ಅರ್ಹತೆಗಳು :
ಕಲ್ಯಾಣ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಇದರ ಜೊತೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಡ್ರೈವಿಂಗ್ ಲೈಸೆನ್ಸ್ ಕೂಡ ಹೊಂದಿರುವುದು ಕಡ್ಡಾಯವಾಗಿದೆ.
ಕಳೆದ ವರ್ಷವೂ ಕೂಡ ಕಲ್ಯಾಣ ಭಾಗದ ಸಾರಿಗೆ ಇಲಾಖೆಯಲ್ಲಿ 1,719 ಚಾಲಕ ಹಾಗೂ ಚಾಲಕ ಕಮ್ ಕಂಡಕ್ಟರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು.
ಈ ಬಾರಿಯೂ ಮತ್ತೆ ನೇಮಕಾತಿ ಸುಗ್ಗಿ ಆರಂಭವಾಗಿದ್ದು ಇಲಾಖೆಯಲ್ಲಿ ಹೊಸ ಬಸ್ ಖರೀದಿಸಿರುವುದು ಹಾಗೂ ನಿವೃತ್ತಿ ಹೊಂದಿದವರ ಸಂಖ್ಯೆ ಹೆಚ್ಚಾಗಿದ್ದು ಆದ್ದರಿಂದ ಈ ನೇಮಕಾತಿ ಆರಂಭವಾಗಲಿದೆ ಎಂದು ಕಲ್ಯಾಣ ಸಾರಿಗೆ ಇಲಾಖೆಯ ತಿಳಿಸಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಆರ್ಥಿಕ ಇಲಾಖೆಯಿಂದ ಗ್ರೀನ್ ಸಿಗ್ನಲ್ :
ಹೌದು ಸ್ನೇಹಿತರೆ ಕಲ್ಯಾಣ ಭಾಗದ ಸಾರಿಗೆ ಇಲಾಖೆಯಲ್ಲಿ ಕೊರತೆ ಇರುವ ನಿರ್ವಾಹಕ ಹುದ್ದೆಗಳ ಕಾರಣವೆಲ್ಲಾಗಿ ಆರ್ಥಿಕ ಇಲಾಖೆಯು ಶೀಘ್ರದಲ್ಲಿ ಗ್ರೀನ್ ಸಿಗ್ನಲ್ ನೀಡುವ ಸಂಪೂರ್ಣ ಸಾಧ್ಯತೆಗಳಿದ್ದು ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ನೇಮಕಾತಿ ಆರಂಭವಾಗಲಿದೆ.