ಬೆಳೆ ವಿಮೆ ಜಮಾ ಆಗದ ರೈತರ ಕಥೆಗೆ ಬೆಳೆ ವಿಮೆ ಬಿಡುಗಡೆ ನಿಮ್ಮ ಖಾತೆಗೆ ಬಿಡುಗಡೆಯಾಗಲಿದೆಯ ಈಗಲೇ ತಿಳಿಯಿರಿ

19 ಲಕ್ಷದ ರೈತರ ಖಾತೆಗೆ ಬೆಳೆ ವಿಮೆ ಬಿಡುಗಡೆ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

WhatsApp Group Join Now
Telegram Group Join Now

ಪ್ರೀತಿಯ ಓದುಗರೆ ಪ್ರಸ್ತುತ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ನಿಮಗೆ ಉದ್ಯೋಗದ ಮಾಹಿತಿಯನ್ನು ನೀಡುತ್ತಿದೆ ಇದೀಗ ಪ್ರಸ್ತುತ ಲೇಖನದಲ್ಲಿ ಬೆಳೆ ವಿಮೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

ಹೌದು ಸ್ನೇಹಿತರೆ, ಬರೋಬ್ಬರಿ 19 ಲಕ್ಷಕ್ಕೂ ಅಧಿಕ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಈಗಲೇ ಚೆಕ್ ಮಾಡಿಕೊಳ್ಳಿ..

ಬರಗಾಲ ಪೀಡಿತ ತಾಲೂಕುಗಳೆಂದು ಕಳೆದ ವರ್ಷ ಘೋಷಣೆ ಮಾಡಲಾಗಿದ್ದು ಅದೇ ರೀತಿ ಅಂತಹ ತಾಲೂಕಿನ ರೈತರ ಅಭ್ಯರ್ಥಿಗೆ ಬರ ಪರಿಹಾರ ಹಣ ಜಮಾ ಆಗಿದ್ದು ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ..

ಜುಲೈ 01 ರಂದು ಉಳಿದ ಎಲ್ಲಾ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಮಾಡಲಾಗುತ್ತದೆ.

ಗೃಹ ಸಚಿವರಿಂದ ಸ್ಪಷ್ಟನೆ. ಆತ್ಮೀಯ ರೈತ ಬಾಂಧವರೇ,
ಈಗಾಗಲೇ ರಾಜ್ಯಕ್ಕೆ ಬೆಳೆಹಾನಿ ಪರಿಹಾರ ಎಂದು ಬಂದಿದ್ದ 3,454 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಕಳೆದ ತಿಂಗಳು ಅರ್ಹ ರೈತರ ಖಾತೆಗೆ ನೇರವಾಗಿ ಜಮಾ ಮಾಡಿತ್ತು.

ಅಂತೆಯೇ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ ಬಂದ ಅನುದಾನದಲ್ಲಿ ಬಾಕಿ ಉಳಿದಿರುವ 1000 ಕೋಟಿ ಜೊತೆಗೆ ರಾಜ್ಯ ಸರ್ಕಾರವು ತನ್ನ ಬೊಕ್ಕಸದಿಂದ 272 ಕೋಟಿ ರೂಪಾಯಿಯನ್ನು ಸೇರಿಸಿ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚುವರಿ ಪರಿಹಾರವಾಗಿ 17.09 ಲಕ್ಷ ರೈತರ ಖಾತೆಗೆ ನೇರವಾಗಿ ತಲಾ 3,000 ಹಣ ಜಮಾ ಮಾಡಲಾಗುವುದು ಎಂದು ತಿಳಿಸಿತ್ತು.

ಅದರ ಪ್ರಕಾರ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚುವರಿ ಪರಿಹಾರವಾಗಿ 3,000 ರೂಪಾಯಿ ಹಣ ನೇರವಾಗಿ ಅರ್ಹ ರೈತರ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು ಹಲವು ರೈತರ ಖಾತೆಗೆ ಈಗಾಗಲೇ ಹಣ ಜಮಾ ಆಗಿದೆ.

ಇನ್ನು ಹೆಚ್ಚುವರಿ ಪರಿಹಾರ ಹಣ ಜಮಾ ಆಗದೇ ಇರುವ ರೈತರ ಖಾತೆಗೆ ಮುಂದಿನ ಒಂದು ವಾರದಲ್ಲಿ ಎಲ್ಲಾ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ.

ಹಂತ -1) ಮೊದಲಿಗೆ ನೀವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ.


https://parihara.karnataka.gov.in/service92/

ಹಂತ -2) ನಂತರ ನೀವು ಕೆಳಗೆ ತೋರಿಸಿದಂತೆ ಅದರಲ್ಲಿ ವರ್ಷ, ಋತು ಮತ್ತು ವಿಪತ್ತು ವಿಧ ಆಯ್ಕೆ ಮಾಡಿ Get Details ಮೇಲೆ ಕ್ಲಿಕ್ ಮಾಡಿ.

ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ 4 ಆಯ್ಕೆಗಳು ಕಾಣುತ್ತವೆ. ಅದರಲ್ಲಿ ನೀವು ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಿ.

ಹಂತ -4) ನಂತರ ನಿಮಗೆ ಕೆಳಗೆ ತೋರಿಸಿದಂತೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ Fetch ಮೇಲೆ ಕ್ಲಿಕ್ ಮಾಡಿ.

ಹಂತ -5) ನಂತರ ನಿಮಗೆ ಮೇಲೆ ತೋರಿಸಿದಂತೆ ನಿಮ್ಮ ಖಾತೆಗೆ ಜಮಾ ಆಗಿರುವ ಬೆಳೆ ಪರಿಹಾರ ಹಣದ ವಿವರಗಳು ದೊರೆಯುತ್ತವೆ.

ಪಿಎಂ ಕಿಸಾನ್ ಸಮ್ಮಾನ್ ಅನ್ನದಾತರ ಕಾಳಜಿಗೆ ಸಾಕ್ಷಿ : ಕುಮಾರಸ್ವಾಮಿ

3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿದ ಮೊದಲ ಕ್ಯಾಬಿನೆಟ್ ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ ಮಾಡಿದ್ದು ಅನ್ನದಾತರ ಬಗ್ಗೆ ಅವರಿಗಿದ್ದ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ 17ನೇ ಕಂತಿನ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ ಕಾರ್ಯಕ್ರಮದ ನೇರ ವೀಕ್ಷಣೆ ಮತ್ತು ಪಶು ಸಖಿ, ಕೃಷಿ ಸಖಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದೇಶದ 50 ಕೃಷಿ ವಿಜ್ಞಾನ ಕೇಂದ್ರದಲ್ಲಿ ಏಕ ಕಾಲಕ್ಕೆ ರೈತರ ಖಾತೆಗೆ 17ನೇ ಕಂತಿನ 20 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಲಾಗುತ್ತಿದೆ.

ಕಳೆದ ವರ್ಷ ಮಳೆ ಕೈಕೊಟ್ಟ ಕಾರಣ ಎಲ್ಲೆಡೆ ಬರ ಆವರಿಸಿತ್ತು. ಅಲ್ಲದೆ ರೈತರು ಬೆಳೆದ ಬೆಳೆಗಳು ನಾಶವಾಗಿತ್ತು.

ತೀವ್ರ ಬರದಿಂದ 223 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿತ್ತು. ರಾಜ್ಯದ ಮಳೆಯಾಶ್ರಿತ/ ಒಣಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತ ಕುಟುಂಬಕ್ಕೆ ಜೀವನ ನಿರ್ವಹಣೆಗಾಗಿ ರಾಜ್ಯ ಸರಕಾರ ಇದೇ ಮೊದಲ ಬಾರಿಗೆ ಗರಿಷ್ಠ 2874 ರೂ. ಜೀವನೋಪಾಯ ನಷ್ಟ ಪರಿಹಾರ ವಿತರಿಸಲು ಮುಂದಾಗಿದೆ. ಹೌದು, ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


ರಾಜ್ಯದಲ್ಲಿ ಅರ್ಹರೆಂದು ಗುರುತಿಸಲಾದ 19,82,677 ರೈತರನ್ನು ಒಳಗೊಂಡ 17,84,398 ಸಣ್ಣ, ಅತಿ ಸಣ್ಣ ರೈತ ಕುಟುಂಬಳಿಗೆ ಜೀವನೋಪಾಯ ನಷ್ಟ ಪರಿಹಾರ ವಿತರಣೆ ಪ್ರಕ್ರಿಯೆಗೆ ಚಾಲನೆ ದೊರತಿದೆ. ಸದ್ಯದಲ್ಲೇ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ.

19,82,677 ರೈತರನ್ನು ಒಳಗೊಂಡ 17,84,398 ಮಳೆಯಾಶ್ರಿತ/ ಒಣಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳನ್ನು ಜೀವನೋಪಾಯ ಪರಿಹಾರ ಪಡೆಯಲು ಗುರುತಿಸಲಾಗಿದೆ.

ಪ್ರತಿ ಕುಟುಂಬಕ್ಕೆ ಗರಿಷ್ಠ 2874 ರೂ. ಪಾವತಿಗೆ 512.92 ಕೋಟಿ ರೂ. ಅಗತ್ಯವಿದೆ. NDRF ನಡಿ ಕೇಂದ್ರ 232.40 ಕೋಟಿ ರೂ. ನೀಡಿದೆ.

ಪ್ರಸಕ್ತ 2024-25ನೇ ಸಾಲಿನ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಹಂಚಿಕೆಯಾಗಿರುವ 488 ಕೋಟಿ ರೂ. ಪೈಕಿ ಶೇ.50ರಷ್ಟನ್ನು ಅಂದರೆ 244 ಕೋಟಿ ರೂ. ಹಾಗೂ ಉಳಿಕೆ 36.52 ಕೋಟಿ ರೂ.ಗಳನ್ನು ರಾಜ್ಯದಿಂದ ಹೆಚ್ಚುವರಿಯಾಗಿ ಭರಿಸಲಾಗುತ್ತಿದೆ.

Leave a Reply

Your email address will not be published. Required fields are marked *