SSLC ಕೇವಲ 60% ರಿಸಲ್ಟ್ ಮಾಡಿದ್ದರೆ ಸಾಕು ನಿಮಗೆ ಸಿಗಲಿದೆ 15,000 ರೂ. ವಿದ್ಯಾರ್ಥಿ ವೇತನ : 10ನೇ ತರಗತಿ ಪಾಸಾದವರು ಬೇಗನೆ ಅರ್ಜಿ ಸಲ್ಲಿಸಿ
10ನೇ ತರಗತಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 11ನೇ ತರಗತಿಯಲ್ಲಿ ಪ್ರವೇಶ ಪಡೆಯಲು ಆರ್ಥಿಕವಾಗಿ ಸಹಾಯವಾಗುವಂತೆ ಗ್ಲೋಬಲ್ ಡೆಲಿವರಿ ಸರ್ವಿಸ್ ಸಂಸ್ಥೆಯ ಇದೀಗ ವಿದ್ಯಾರ್ಥಿ ವೇತನವನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದ್ದು ಆಸಕ್ತ ಅಭ್ಯರ್ಥಿಗಳು ಬೇಗನೆ ಈ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.
ಗಿಡನಾ ಸಮೃದ್ಧಿ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು ನಮ್ಮ ಈ ಜಲತಾಣದಲ್ಲಿ ದಿನನಿತ್ಯ ಅನೇಕ ರೀತಿಯ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದು ಇವತ್ತಿನ ಈ ಒಂದು ಲೇಖನದಲ್ಲಿ ನಾವು 10ನೇ ತರಗತಿಯ ಪಾಸಾಗಿ 11ನೇ ತರಗತಿಯ ಪ್ರವೇಶಾತಿ ಪಡೆಯಲು ಆರ್ಥಿಕವಾಗಿ ಸಹಾಯವಾಗುವಂತೆ ವಿದ್ಯಾರ್ಥಿ ವೇತನವನ್ನು ನೀಡುತ್ತಿರುವ ಸಂಸ್ಥೆಯ ವಿದ್ಯಾರ್ಥಿ ವೇತನದ ಮಾಹಿತಿಯನ್ನು ತಿಳಿಸಲಿದ್ದು ಆರಾಮ ಮತ್ತು ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.
ವಿದ್ಯಾರ್ಥಿ ವೇತನದ ಮಾಹಿತಿ :
ಈ ವಿದ್ಯಾರ್ಥಿ ವೇತನದ ಹೆಸರು ನೆಕ್ಸ್ಟ್ ಜನ್ ಎಜುಕೇಶನ್ ಸ್ಕಾಲರ್ಶಿಪ್ 2024. ಈ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಾಗೂ ಆರ್ಥಿಕ ಸಹಾಯಕ್ಕಾಗಿ ಈ ವೈ ಗ್ಲೋಬಲ್ ಡೆಲಿವರಿ ಸರ್ವಿಸಸ್ ಸಂಸ್ಥೆಯು ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿತ್ತು ಆರ್ಥಿಕವಾಗಿ ಸಹಾಯವಾಗುವಂತೆ ವರ್ಷಕ್ಕೆ 15 ಸಾವಿರ ರೂಪಾಯಿ ವಿದ್ಯಾರ್ಥಿ ವೇತನವನ್ನು ನೀಡಲು ಅರ್ಜಿ ಕರೆದಿದ್ದಾರೆ.
ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು?
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನೀವು ಬಯಸುವುದಾದರೆ 10ನೇ ತರಗತಿಯಲ್ಲಿ ಪಾಸಾಗಿ 11ನೇ ತರಗತಿಯಲ್ಲಿ ಪ್ರವೇಶಾತಿ ಪಡೆಯಬೇಕು ಮತ್ತು 10ನೇ ತರಗತಿಯಲ್ಲಿ ನೀವು ಕನಿಷ್ಠ ಶೇಕಡಾ 60ರಷ್ಟು ಅಂಕಗಳನ್ನು ಗಳಿಸಿರಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬ ವಾರ್ಷಿಕ ವರಮಾನವೂ ಮೂರು ಲಕ್ಷ ರೂಪಾಯಿ ಒಳಗಿರಬೇಕು.
ಈ ವಿದ್ಯಾರ್ಥಿ ವೇತನವನ್ನು ಪ್ರಮುಖವಾಗಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಪಶ್ಚಿಮ ಬಂಗಾಳ ಕೇರಳ ತಮಿಳುನಾಡು ರಾಜ್ಯಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು ಪ್ರಮುಖವಾಗಿ ಅನಾಥರು ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಯಾವ ದಾಖಲಾತಿಗಳು ಬೇಕಾಗುತ್ತವೆ?
ಈ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು 10ನೇ ತರಗತಿ ಅಂಕ ಪಟ್ಟವನ್ನು ಹಾಗೂ ವಿಳಾಸದ ಪುರಾವೆ ಸಲ್ಲಿಸಬೇಕು. ಅದೇ ರೀತಿ ಕುಟುಂಬದ ವಾರ್ಷಿಕ ವರಮಾನದ ಆದಾಯ ಪ್ರಮಾಣ ಪತ್ರವೂ ಕೂಡ ಅವಶ್ಯಕವಾಗಿ ಬೇಕಾಗುತ್ತದೆ. ಅರ್ಜಿದಾರರ ಬ್ಯಾಂಕ್ ಖಾತೆ ವಿವರ ಸೇರಿದಂತೆ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ ಕೂಡ ಬೇಕಾಗುತ್ತದೆ.
ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಈ ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿ ಸಲ್ಲಿಸಲು ಬಯಸುವುದಾದರೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡುವುದರ ಮುಖಾಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಇದೇ ರೀತಿ ದಿನನಿತ್ಯ ಇಂತಹ ಉಪಯುಕ್ತ ಮಾಹಿತಿಗಳನ್ನು ನೀವು ಪಡೆದುಕೊಳ್ಳಲು ಬಯಸುವುದಾದರೆ ಹಿಂದೆ ನಮ್ಮ ವಾಟ್ಸಪ್ ಗ್ರೂಪಿಗೆ ಸೇರಿಕೊಳ್ಳಿ ಹಾಗೂ ಈ ಮಾಹಿತಿ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೆ ಶೇರ್ ಮಾಡಿರಿ.
Apply Link : https://www.buddy4study.com/page/nextgen-edu-scholarship
SSLC ಕೇವಲ 60% ರಿಸಲ್ಟ್ ಮಾಡಿದ್ದರೆ ಸಾಕು ನಿಮಗೆ ಸಿಗಲಿದೆ 15,000 ರೂ. ವಿದ್ಯಾರ್ಥಿ ವೇತನ : 10ನೇ ತರಗತಿ ಪಾಸಾದವರು ಬೇಗನೆ ಅರ್ಜಿ ಸಲ್ಲಿಸಿ