ಪಿಯುಸಿ ವಿದ್ಯಾರ್ಥಿಗಳಿಗೆ ಸಿಗುತ್ತದೆ 75,000 ರೂಪಾಯಿ :
ಅರ್ಜಿ ಸಲ್ಲಿಸಲು ಕೇವಲ ಇನ್ನೂ ಒಂದು ವಾರ ಮಾತ್ರ ಬಾಕಿ Karnataka Vidyadhan Scholarship
ಕರ್ನಾಟಕ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಹಾಯವನ್ನು ಮಾಡಲು ವಿದ್ಯಾಧನ್ ಎಂಬ ವಿದ್ಯಾರ್ಥಿ ವೇತನದ ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ 75,000 ಯವರಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೇಕಾಗುವ ಮಾಹಿತಿ ಇಲ್ಲಿದೆ.
ಜ್ಞಾನ ಸಮೃದ್ಧಿ ಜಾಲತಾಣದಿಂದ ಪ್ರತಿಯೊಬ್ಬರಿಗೂ ನಮಸ್ಕಾರಗಳು..
ನಮ್ಮ ಈ ಜಲತಾಣದಲ್ಲಿ ದಿನನಿತ್ಯ ಅನೇಕ ರೀತಿಯ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದ ಸರಕಾರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಳು ಕೇಂದ್ರ ಸರ್ಕಾರ ಯೋಜನೆ ಗಳಿಗೆ ಸಂಬಂಧಿಸಿದ ಮಾಹಿತಿಗಳು ವಿದ್ಯಾರ್ಥಿ ವೇತನಗಳ
ಮಾಹಿತಿ ಹಾಗೂ ಕೇಂದ್ರ ಸರಕಾರ ರಾಜ್ಯ ಸರ್ಕಾರ ಉದ್ಯೋಗಗಳ ಮಾಹಿತಿಯನ್ನು ನೀಡುತ್ತಿದ್ದು ಇವತ್ತಿನ ಈ ಒಂದು ಲೇಖನದಲ್ಲಿ ನಾವು ಪ್ರತಿಯೊಬ್ಬರಿಗೂ ಉಪಯುಕ್ತವಾಗುವಂತಹ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ತಿಳಿಸಲಿದ್ದೇವೆ.
ಯಾವುದೇ ಈ ವಿದ್ಯಾರ್ಥಿ ವೇತನ?
ಸರೋಜಿನಿ ದಾಮೋದರನ್ ಫೌಂಡೇಶನ್ ಹಾಗೂ ಶಿವ ಲಾಲ್ ಫ್ಯಾಮಿಲಿ ಫಿಲಂ ಟ್ರೋಫಿಕ್ ಇನಿಶಿಯೇಟಿವ್ ಇವರ ಒಂದು ಸಯೋಗದಲ್ಲಿ ಮೊದಲನೆಯ ಪಿಯುಸಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಹಾಗೂ ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಹಾಯ ಮಾಡಲು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.
ಈ ವಿದ್ಯಾರ್ಥಿ ವೇತನವನ್ನು ಪ್ರಮುಖವಾಗಿ ಈ ಕೆಳಗಿನ ರಾಜ್ಯಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು ಅದೇ ರೀತಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳನ್ನು ಈ ಲೇಖನದಿಂದ ತಿಳಿದುಕೊಳ್ಳಿರಿ.
ಕರ್ನಾಟಕ ರಾಜ್ಯ ಸೇರಿದಂತೆ ಪಂಜಾಬ್ ಹಿಮಾಚಲ್ ಪ್ರದೇಶ ಉತ್ತರ ಪ್ರದೇಶ ಗುಜರಾತ್ ಮಹಾರಾಷ್ಟ್ರ ತೆಲಂಗಾಣ ಆಂಧ್ರಪ್ರದೇಶ ಪಾಂಡಿಚೇರಿ ತಮಿಳುನಾಡು ಕೇರಳ ರಾಜ್ಯದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.
ಯಾವ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿ ವೇತನ ಸಿಗಲಿದೆ?
ಈ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದಂತಹ ವಿದ್ಯಾರ್ಥಿಗಳಿಗೆ ಮೊದಲನೇ ಪಿಯುಸಿ ಓದಲು ಪ್ರತಿ ವರ್ಷ 10 ಸಾವಿರ ರೂಪಾಯಿಯನ್ನು ನೀಡಲಾಗುತ್ತದೆ.
ವಿದ್ಯಾರ್ಥಿ ವೇತನವನ್ನು ನೀಡುತ್ತಿರುವಂತಹ ಸಮಯದಲ್ಲಿ ವಿದ್ಯಾರ್ಥಿಗಳ ಉತ್ತಮವಾದ ರಿಸಲ್ಟ್ ಮಾಡಿದರೆ ಅವರಿಗೆ ಪದವಿ ಶಿಕ್ಷಣವನ್ನು ಮುಂದುವರಿಸಲು ಕೂಡ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ವಿದ್ಯಾರ್ಥಿಗಳ ಕೋರ್ಸನ್ನು ಆಧರಿಸಿ ಅವರಿಗೆ ಹತ್ತು ಸಾವಿರ ರೂಪಾಯಿಯಿಂದ 75,000 ವರೆಗೂ ಕೂಡ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಯಾವೆಲ್ಲ ಅಭ್ಯರ್ಥಿಗಳು ಅರ್ಹರಿದ್ದಾರೆ?
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅದೇ ತರಗತಿಯಲ್ಲಿ 90 ಪರ್ಸೆಂಟ್ ಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು. ಒಂದು ವೇಳೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಂಗವಿಕಲರಾಗಿದ್ದರೆ ಶೇಕಡ 75 ರಷ್ಟು ಅಂಕ ಪಡೆದಿದ್ದರೆ ಸಾಕು.
ಅರ್ಜಿಯನ್ನು ಅಭ್ಯರ್ಥಿಗಳು ಹೇಗೆ ಸಲ್ಲಿಸಬೇಕು?
ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹರಿರುವ ವಿದ್ಯಾರ್ಥಿಗಳು ವಿದ್ಯಾಧನ್ ವಿದ್ಯಾರ್ಥಿ ವೇತನದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವುದರ ಮುಖಾಂತರ ಅರ್ಜಿ ಸಲ್ಲಿಸಬೇಕು.