ಅಗ್ನಿಶಾಮಕ ದಳದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ… SSLC ಪಾಸಾಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ..! Apply Now..!

ಅಗ್ನಿಶಾಮಕ ದಳದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ..

ಓದುಗರೆ ಪ್ರಸ್ತುತ ಈ ನಮ್ಮ ಲೇಖನಗಳಲ್ಲಿ ಜನರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನಾವು ದಿನನಿತ್ಯ ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಅಗ್ನಿಶಾಮಕ ದಳದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ತಿಳಿಯೋಣ ಬನ್ನಿ…

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಅಗ್ನಿ ಶಾಮಕ & ತುರ್ತು ಸೇವೆಗಳ ಇಲಾಖೆಯಲ್ಲಿ  ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರದಲ್ಲಿಯೇ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ.  

ಅಗ್ನಿ ಶಾಮಕ ಇಲಾಖೆಯಲ್ಲಿ ಖಾಲಿ ಇರುವ  ಅಗ್ನಿಶಾಮಕ ಠಾಣಾಧಿಕಾರಿ, ಚಾಲಕ ತಂತ್ರಜ್ಞ ಸೇರಿದಂತೆ ಒಟ್ಟು 975 ಹುದ್ದೆಗಳ ಭರ್ತಿಗೆ ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಲಾಗುತ್ತದೆ.

ಅರ್ಹ & ಆಸಕ್ತ ಅಭ್ಯರ್ಥಿಗಳು.  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹುದ್ದೆ ಹೆಸರು:- ವಿವಿಧ ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ:- 975 ಹುದ್ದೆಗಳು

ಹುದ್ದೆಗಳ ವಿವರ:-


* ಅಗ್ನಿಶಾಮಕ ಠಾಣಾಧಿಕಾರಿ – 64 ಹುದ್ದೆಗಳು
* ಅಗ್ನಿಶಾಮಕ – 731 ಹುದ್ದೆಗಳು
* ಅಗ್ನಿಶಾಮಕ ಚಾಲಕ – 153 ಹುದ್ದೆಗಳು
* ಚಾಲಕ ತಂತ್ರಜ್ಞ -22 ಹುದ್ದೆಗಳು

ಉದ್ಯೋಗ ಸ್ಥಳ:- ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ

ವೇತನ ಶ್ರೇಣಿ:- ಸರ್ಕಾರಿ ಹುದ್ದೆ ವೇತನ ಆಯೋಗದ ಪ್ರಕಾರವಾಗಿ ಅತ್ಯುತ್ತಮ ಶ್ರೇಣಿಯ ವೇತನ ಹಾಗೂ ಇನ್ನಿತರ ಸರ್ಕಾರ ಸೌಲಭ್ಯಗಳನ್ನು ನೀಡಲಾಗುತ್ತದೆ

ಶೈಕ್ಷಣಿಕ ವಿದ್ಯಾರ್ಹತೆ:-
* ಈ ಹುದ್ದೆಗಳಿಗೆ SsLC / PUC ಮತ್ತು ಪದವಿ ಅಥವಾ ಡಿಪ್ಲೋಮೋ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


* ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸದ ಅನುಭವ ಅಥವಾ ವಿಶೇಷ ತರಬೇತಿಗಳನ್ನು ಪಡೆದಿರುವವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ

ವಯೋಮಿತಿ:-


* ಎಲ್ಲ ಸರ್ಕಾರಿ ಹುದ್ದೆಗಳ ನೇಮಕಾತಿ ನಿಯಮದಂತೆ ಕನಿಷ್ಠ 18 ಹಾಗೂ ಗರಿಷ್ಠ ವರ್ಗಗಳ ಅನುಸಾರವಾಗಿ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಸದ್ಯಕ್ಕೆ ನೇಮಕಾತಿ ಕುರಿತಂತೆ ಇರುವ ಪ್ರಮುಖ ಸಂಗತಿ ಏನೆಂದರೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿನ ವಿವಿಧ ಹುದ್ದೆಗಳಲ್ಲಿ ಕಿರಿಯ ದರ್ಜೆಗಿಂತ ಮೇಲ್ದರ್ಜೆಗೆ ಪದೋನ್ನತಿ ಹೊಂದಿದ, ಉದ್ಯೋಗದಿಂದ ಸ್ವಯಂ ನಿವೃತ್ತಿ ಮತ್ತು ವಯೋ ನಿವೃತ್ತಿ ಹೊಂದಿದ, ಮರಣ ಹೊಂದಿದ ಕಾರಣಕ್ಕಾಗಿ ತೆರವಾದ ಅನೇಕ ಪೋಸ್ಟ್ ಗಳು ಇವೆ.

ಈ ಖಾಲಿ ಇರುವಂತಹ ಸ್ಥಳಗಳಿಗೆ ಕೂಡಲೇ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.

ಇದಕ್ಕಾಗಿ ಸರ್ಕಾರದ ಮಂಜೂರಾತಿ ಕೇಳಿ ಅರ್ಜಿ ಸಲ್ಲಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಉಂಟಾಗುತ್ತಿರುವ ಅ’ಪ’ಘಾ’ತ, ಅವಘಡಗಳ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇಂತಹ ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ಸೇವೆ ಒದಗಿಸುವುಕ್ಕೆ ಇರುವ ಸೇವಾ ಸಂಸ್ಥೆಯಲ್ಲಿ ನೌಕರರ ಕೊರತೆಯು ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ.

ರಕ್ಷಣಾ ಘಟಕದ ಭಾಗವಾಗಿರುವಂತಹ ಇಂತಹ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕೊರತೆ ಸಮಸ್ಯೆಯೂ ಮುಂದೊಂದು ದಿನ ಅನಾ.ಹು.ತಗಳಿಗೆ ಎಡೆ ಮಾಡಿಕೊಡಬಹುದು.

ಹಾಗಾಗಿ ಈ ಕೂಡಲೇ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.

ಈಗ ಸರ್ಕಾರದ ಕಡೆಯಿಂದ ಒಪ್ಪಿಗೆ ದೊರೆತಿದೆ. ಸಿಬ್ಬಂದಿ ಕೊರತೆಯಿಂದ ರಕ್ಷಣಾ ಕಾರ್ಯಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ದೂರನ್ನು ಸೂಕ್ಷ್ಮವಾಗಿ ಪರಿಗಣಿಸಿ ಕೂಡಲೇ ಸ್ಪಂದಿಸಿ ಸರ್ಕಾರದ ಕಡೆಯಿಂದ ನೇರ ನೇಮಕಾತಿಗೆ ಅನುಮತಿ ದೊರೆತಿದೆ.

ಹೀಗಾಗಿ ಈ ಬಾರಿ ರಾಜ್ಯದ 900ಕ್ಕೂ ಹೆಚ್ಚು ಅಭ್ಯರ್ಥಿಗಳು ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲಿದ್ದಾರೆ ನೀವು ಕೂಡ ಈ ಬಗ್ಗೆ ಆಸಕ್ತರಾಗಿದ್ದರೆ ಶೀಘ್ರದಲ್ಲಿಯೇ ಅರ್ಜಿ ಆಹ್ವಾನ ಮಾಡುವ ದಿನಾಂಕವನ್ನು ಕೂಡ ಘೋಷಿಸಲಾಗುತ್ತದೆ. ಅಷ್ಟರೊಳಗೆ ನೀವು ಅಭ್ಯಾಸ ಚುರುಕು ಗೊಳಿಸಿಕೊಂಡು ಸಿದ್ದರಾಗಿ.

ಸಾಮಾನ್ಯವಾಗಿ ಎಲ್ಲ ಸರ್ಕಾರಿ ಹುದ್ದೆ ನೇಮಕಾತಿಯಂತೆ ಈ ಹುದ್ದೆಗಳಿಗೂ ಕೂಡ ಅರ್ಹರಿಂದ ಇಲಾಖೆ ವೆಬ್ಸೈಟ್ ಮೂಲಕ ಅರ್ಜಿ ಆಹ್ವಾನ ಮಾಡಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿ ಪರಿಶೀಲನೆ ಮಾಡಿ ದೈಹಿಕ ಪರೀಕ್ಷೆ ಲಿಖಿತ ಪರೀಕ್ಷೆ ನೇರ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಹಾಗೂ ಮೆಡಿಕಲ್ ಟೆಸ್ಟ್ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಸರ್ಕಾರ ಅಥವಾ ಇಲಾಖೆಯು ಈ ಬಗ್ಗೆ ಮತ್ತೊಂದು ಪ್ರಕರಣೆ ಹೊರಡಿಸಿ ಅರ್ಜಿ ಸಲ್ಲಿಸುವ ದಿನಾಂಕ ಹಾಗೂ ಮಾರ್ಗಸೂಚಿ ತಿಳಿಸಲಿದೆ ‌ಅಲ್ಲಿಯವರೆಗೂ ನಿರಂತರವಾಗಿ ಅಭ್ಯಾಸ ಮಾಡಿ ಅಭ್ಯರ್ಥಿಗಳು ತಯಾರಾಗಿ ಮತ್ತು ಈ ಉದ್ಯೋಗ ಮಾಹಿತಿ ಬಗ್ಗೆ ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಮಾಹಿತಿ ಹಂಚಿಕೊಳ್ಳಿ.

Leave a Reply

Your email address will not be published. Required fields are marked *