ಬೆಂಗಳೂರು ಮೆಟ್ರೋ ರೈಲ್ವೆ ನಿಗಮದಲ್ಲಿ ನೇಮಕಾತಿ ಆರಂಭ : ಆಸಕ್ತರು ಬೇಗನೆ ಅರ್ಜಿ ಸಲ್ಲಿಸಿ BMRCL Recruitment 2024
ಕರ್ನಾಟಕ ರಾಜ್ಯದಲ್ಲಿಯೇ ಖಾಯಂ ಉದ್ಯೋಗವನ್ನು ಮಾಡಬಯಸುವಂಥವರಿಗೆ ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮವು ಖಾಲಿ ಇರುವಂತಹ ಅನೇಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಮೆಟ್ರೋದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಬೇಕಾಗಿರುವ ಒಂದು ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ.
ಜ್ಞಾನ ಘರ್ಜನೆ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು.
ಕರ್ನಾಟಕ ರಾಜ್ಯದಲ್ಲಿಯೇ ಖಾಯಂ ಉದ್ಯೋಗವನ್ನು ಮಾಡಬಯಸುವಂಥವರಿಗೆ ಹಾಗೂ ಪದವಿ ಮುಗಿಸಿ ಉದ್ಯೋಗವನ್ನು ಹುಡುಕುತ್ತಿರುವಂತವರಿಗೆ ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದ ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಹೊಸದಾಗಿ ಅಧಿಕೃತ ಆದಿ ಸೂಚನೆಯನ್ನು ಪ್ರಕಟಣೆ ಮಾಡಲಾಗಿದೆ.
ಅಧಿಸೂಚನೆಯಲ್ಲಿ ತಿಳಿಸಿರುವ ಹಾಗೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಬೇಕಾಗಿರುವ ಅರ್ಹತೆಗಳೇನು ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ.
ಬೆಂಗಳೂರು ಮೆಟ್ರೋ ರೈಲ್ವೆ ನೇಮಕಾತಿ : ಯಾವ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದೆ?
ಆತ್ಮೀಯ ಸ್ನೇಹಿತ ಹಾಗೂ ಬಂಧುಗಳೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಒಟ್ಟು ಏಳು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಯಾವ ಯಾವ ಹುದ್ದೆಗಳಿಗೆ ಒಂದು ನೇಮಕಾತಿ ನಡೆಯುತ್ತಿದೆ ಎಂದು ನೋಡುವುದಾದರೆ ವಿವಿಧ ವಿಭಾಗಗಳ ಇಂಜಿನಿಯರ್ ಹುದ್ದೆಗಳು ಮತ್ತು ಸಹಾಯಕ ವ್ಯವಸ್ಥಾಪಕರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಿವಿಲ್ ವಿಭಾಗದ ಮತ್ತು E&M ವಿಭಾಗದ ಹುದ್ದೆಗಳಿಗೆ ಈ ಒಂದು ನೇಮಕಾತಿಯು ನಡೆಯುತ್ತದೆ.
ಕಾರ್ಯನಿರ್ವಾಹಕ ಇಂಜಿನಿಯರ್ ಸಿವಿಲ್ – 01 ಹುದ್ದೆ
ಸಹಾಯಕ ಇಂಜಿನಿಯರ್ ಸಿವಿಲ್ – 04 ಹುದ್ದೆ
ಸಹಾಯಕ ಇಂಜಿನಿಯರ್ E&M – 01 ಹುದ್ದೆ
ಸಹಾಯಕ ವ್ಯವಸ್ಥಾಪಕರು ಮಾರ್ಕೆಟಿಂಗ್ – 01 ಹುದ್ದೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹೊಂದಬೇಕಾಗಿರುವ ವಿದ್ಯಾರ್ಹತೆಗಳು?
ಆತ್ಮೀಯ ಸ್ನೇಹಿತರೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಬಯಸುವುದಾದರೆ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವ ಹಾಗೆ ಹುದ್ದೆಗಳಿಗೆ ಸಂಬಂಧಿಸಿದಂತೆ ನೀವು ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ನಲ್ಲಿ ಸಂಬಂಧಪಟ್ಟ ವಿಷಯಗಳಲ್ಲಿ ಮುಗಿಸಬೇಕು ಎಂದು ಅಧಿಸೂಚನೆಯಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.
ಯಾವ ವಯೋಮಿತಿ ವರ್ಗದವರು ಅರ್ಜಿ ಸಲ್ಲಿಸಲು ಅರ್ಹರು?
ಆತ್ಮೀಯ ಸ್ನೇಹಿತರೆ ನೇಮಕಾತಿಯ ಅಧಿಸೂಚನೆಯಲ್ಲಿ ಬಿಡುಗಡೆಯಾಗಿರುವಂತೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಗರಿಷ್ಠ 45 ವರ್ಷಗಳ ವಯೋಮಿತಿಯಲ್ಲಿ ಇರಬೇಕು. ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
ಆಯ್ಕೆಯಾಗಿರುವಂತಹ ಅಭ್ಯರ್ಥಿಗಳಿಗೆ 62,500/- ರಿಂದ ₹1,06,250/- ರವರೆಗೆ ಮಾಸಿಕ ವೇತನವನ್ನು ಕೂಡ ನೀಡಲಾಗುವುದು.
ಈ ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ಆನ್ಲೈನ್ ಮೂಲಕ ಜೂನ್ 5 2024 ರಿಂದ ಅರ್ಜಿ ಸಲ್ಲಿಕೆಯ ಅವಕಾಶವಿರುತ್ತದೆ.
ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 02, 2024
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ನಿಗಮದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.