Gnanagharjane.com
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಲ್ಲಿ 500ಕ್ಕಿಂತ ಹೆಚ್ಚಿನ ಹುದ್ದೆಗಳ ಅತಿ ದೊಡ್ಡ ನೇಮಕಾತಿಗೆ ಅರ್ಜಿ ಆಹ್ವಾನ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬಯಸುವವರಿಗೆ ಗುಡ್ ನ್ಯೂಸ್
ದೇಶದ ವಿವಿಧ ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿರುವ ಪ್ರತಿಷ್ಠಿತ ಸಂಸ್ಥೆ ಆಗಿರುವಂತಹ IBPS ಇದೀಗ ರಾಜ್ಯದಲ್ಲಿರುವಂತಹ ಕರ್ನಾಟಕ ಗ್ರಾಮೀಣ ಬ್ಯಾಂಕು ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿ ಸೂಚನೆಯನ್ನು ಹೊರಡಿಸಲಾಗಿದ್ದು ಈ ಮೂಲಕ ಆನ್ಲೈನ್ ಮುಖಾಂತರ ಅರ್ಜಿ ಕರೆಯಲಾಗಿರುತ್ತದೆ.
ಅಧಿಸೂಚನೆಯಲ್ಲಿ ತಿಳಿಸರಹಾಗೆ ಈ ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ಬೇಕಾಗಿರುವ ಸಂಪೂರ್ಣ ವಿವರವೂ ಇಲ್ಲಿದೆ.
ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣಕ್ಕೆ ಪ್ರತಿಯೊಬ್ಬರಿಗೆ ಸ್ವಾಗತ.
ನಮ್ಮ ಚಾಲತಾನದಲ್ಲಿ ನಾವು ದಿನನಿತ್ಯ ಸರ್ಕಾರಿ ಯೋಜನೆಗಳಿಗೆ ಅಪ್ಡೇಟ್ಸ್, ಸರ್ಕಾರಿ ಉದ್ಯೋಗಗಳ ಅಪ್ಡೇಟ್ಸ್ ಗಳನ್ನು ನೀಡಲಾಗುತ್ತಿದ್ದು ಇವತ್ತಿನ ಈ ಒಂದು ಲೇಖನದಲ್ಲಿ ನಾವು ಕರ್ನಾಟಕ ಗ್ರಾಮೀಣ ಬ್ಯಾಂಕು ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 500ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿಯ ಬಗ್ಗೆ ಸಂಪೂರ್ಣ ಸಮಗ್ರ ವಿವರವನ್ನು ತಿಳಿಸಲಿದ್ದು, ಉದ್ಯೋಗ ಬಯಸುತ್ತಿರುವಂತಹ ಸತ್ತರೂ ಬೇಗನೆ ಈ ಒಂದು ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳ ನೇಮಕಾತಿ ಮಾಹಿತಿ :
ಕರ್ನಾಟಕ ಗ್ರಾಮೀಣ ಬ್ಯಾಂಕುಗಳಾದ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗಳಲ್ಲಿ ಒಟ್ಟು 586 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
• ಆಫೀಸ್ ಅಸಿಸ್ಟೆಂಟ್ ಮಲ್ಟಿ ಪರ್ಪಸ್ – 200 ಹುದ್ದೆ
• ಆಫೀಸರ್ ಸ್ಕೇಲ್ 1 – 386 ಹುದ್ದೆ
ಈ ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ಮತ್ತು ವಯೋಮಿತಿ ಅರ್ಹತೆಗಳ ವಿವರ :
ಆತ್ಮೀಯ ಸ್ನೇಹಿತರೆ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಖಾಲಿ ಇರುವ ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ನೀವಾಗಿದ್ದರೆ, ನೀವು ಕಡ್ಡಾಯವಾಗಿ ಮಾನ್ಯತೆ ಪಡೆದರು ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಮುಗಿಸಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಸಂಪೂರ್ಣ ಅರ್ಹತೆಗಳನ್ನು ಹೊಂದಿರುತ್ತೀರಿ.
ಅದೇ ರೀತಿ ನಾವು ನಿಗದಿಪಡಿಸಿರುವಂತಹ ವಯೋಮಿತಿ ಅರ್ಹತೆಗಳ ಬಗ್ಗೆ ತಿಳಿದುಕೊಳ್ಳುವುದಾದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರತಕ್ಕದ್ದು.
ಅದೇ ರೀತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಗರಿಷ್ಠ ವಯೋಮಿತಿಯನ್ನು 30 ವರ್ಷಕ್ಕೆ ಹಾಗೂ 28 ವರ್ಷಕ್ಕೆ ನಿಗದಿಪಡಿಸಿರುತ್ತದೆ. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಕೂಡ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಪೂರ್ವಭಾವಿ ಪರೀಕ್ಷೆ ನಡೆಸಿ ಮುಖ್ಯ ಪರೀಕ್ಷೆ ನಡೆಸಿ ನಂತರ ಸಂದರ್ಶನವನ್ನು ನಡೆಸುವುದರ ಮುಖಾಂತರ ಅಂತಿಮವಾಗಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಜೂನ್ 7.2024 ರಿಂದ ಆರಂಭವಾಗಿದ್ದು ಜೂನ್ 27 2024ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಆಸಕ್ತರು ಪ್ರತಿಯೊಬ್ಬರು ಈ ಒಂದು ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬರು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸಿ. ಇದೇ ರೀತಿ ದಿನನಿತ್ಯ ಉದ್ಯೋಗ ಅಪ್ಡೇಟ್ಸ್ ಗಳನ್ನು ಹಾಗೂ ಯೋಜನೆಗಳ ಅಪ್ಡೇಟ್ಸ್ ಗಳನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ ಹಾಗೂ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನ ಶೇರ್ ಮಾಡಿರಿ.