ಸಮಸ್ತ ಕರ್ನಾಟಕದ ರೈತರಿಗೆ ನಮಸ್ಕಾರಗಳು..
ಪ್ರೀತಿಯ ರೈತ ಬಾಂಧವರೇ ಪ್ರಸ್ತುತ ಈ ಲೇಖನದ ಮೂಲಕ ನಿಮಗೆ ತಿಳಿಸುವುದೇನೆಂದರೆ ಪ್ರತಿವರ್ಷವೂ ಕೂಡ ಬೆಳೆವಿಮೆಗೆ ಅರ್ಜಿಯನ್ನು ಆಹ್ವಾನಿಸುತ್ತಿದ್ದು ಯಾವ ರೈತರು ಬೆಳೆವಿಮೆಗೆ ಅರ್ಜಿಯನ್ನು ಸಲ್ಲಿಸುತ್ತಾರೋ ಅಂತಹ ರೈತರ ಖಾತೆಗೆ ಮಾತ್ರ ಬೆಳೆ ವಿಮೆ ಜಮಾ ಆಗುತ್ತದೆ..
ಇದೀಗ 2023 ನೇ ಸಾಲಿನಲ್ಲಿ ಯಾವ ರೈತರು ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಿದರು ಅಂತ ರೈತರ ಖಾತಿಗೆ ಬೆಳೆ ವಿಮೆ ಜಮಾ ಆಗಿದ್ದು 2024ನೇ ಸಾಲಿನಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದರೆ ಮಾತ್ರ ನಿಮ್ಮ ಖಾತೆಗೂ ಕೂಡ ಬೆಳೆ ವಿಮೆಯ ಹಣ ಜಮಾ ಆಗುತ್ತದೆ..
ಬೆಳೆವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ ಯಾವಾಗ..?
ಇನ್ನು ಕೆಲವೇ ದಿನಗಳಲ್ಲಿ 2024ನೇ ಸಾಲಿನ ಮುಂಗಾರು ಬೆಳೆ ವಿಮೆಗೆ ಅರ್ಜನ್ನು ಆಹ್ವಾನಿಸುತ್ತಿದ್ದು ರೈತರು ಈ ಕೂಡಲೇ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಸಜ್ಜಾಗಿ..
ಹೌದು ರೈತ ಬಾಂಧವರೇ ಕೇವಲ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದರೆ ಮಾತ್ರ ನಿಮ್ಮ ಖಾತೆಗೆ ಬೆಳೆ ವಿಮೆಯ ಹಣ ಜಮಾ ಆಗುತ್ತದೆ..
Crop Insurance-
ಸ್ನೇಹಿತರೇ ರಾಜ್ಯ ಸರ್ಕಾರ ರೈತರ ನೆರವಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು,ಇದೀಗ ಮತ್ತೊಂದು ಅದೆಶವನ್ನು ಹೊರಡಿಸುವುದರ ಮೂಲಕ ರೈತರ ಆರ್ಥಿಕ ನೆರವಿಗೆ ನಿಂತಿದೆ.ಹೌದು ರೈತರು ಮುಂಗಾರಿನ ಅಥವಾ ಯಾವುದೇ ಒಂದು ಋತುವಿನಲ್ಲಿ ಯಾವ ಯಾವ ಬೆಳೆಗೆ ಎಷ್ಟು ವಿಮೆಯನ್ನು ಪಡೆಯಬಹುದು ಅನ್ನುವ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಹೀಗಾಗಿ ಇದು ರೈತರಿಗೆ ಸಂತಸದ ಸುದ್ದಿ ಅಂತಾನೆ ಹೇಳಬಹುದು.
ಈಗ ರೈತರು ಬೆಳೆವಿಮೆ ವೆಬ್ಸೈಟ್ ಗೆ ಬೇಟಿ ನೀಡಿ ಅವರ ಹಳ್ಳಿಯ ಹೆಸರನ್ನು ನೊಂದಾಯಿಸಿ ಈ ವರ್ಷದಲ್ಲಿ ಯಾವ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು ಅನ್ನುವ ಮಾಹಿತಿಯನ್ನು ಸರಳವಾಗಿ ಪಡೆಯಬಹುದಾಗಿದೆ.
ಈ ಲೇಖನದಲ್ಲಿ ನಿಮಗೆ ಬೆಳೆ ವಿಮೆ ಮಾಹಿತಿ ಹೇಗೆ ಪಡೆಯಬಹುದು ಅನ್ನುವ ವಿವರಣೆಯನ್ನು ನೀಡಲಾಗಿದ್ದು ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿ ನೀವು ಬಿತ್ತನೆ ಮಾಡಲು ಇಚ್ಚಿಸಿರುವ ಬೆಳೆಯ ವಿಮೆಯನ್ನು ನೋಡಿಕೊಳ್ಳಿ.
ರಾಜ್ಯ ಸರ್ಕಾರ ರೈತರ ಸಹಾಯಕ್ಕೆ ವಿಶೇಷವಾಗಿ ಬೆಲೆ ವಿಮೆ ಮಾಹಿತಿಯನ್ನು ನೋಡಿಕೊಳ್ಳಲು ರೈತರಿಗೋಸ್ಕರ ಸಂರಕ್ಷಣೆ ಪೋರ್ಟಲ್(Samrakshane Portal) ಅನ್ನು ಬಿಡುಗಡೆ ಮಾಡಿದೆ.ನೀವು ಇದಕ್ಕೆ ಭೇಟಿ ನೀಡಿ ನಿಮ್ಮ ಜಿಲ್ಲೆ ,ತಾಲೂಕು,ಹೋಬಳಿ ,ಗ್ರಾಮವನ್ನು ಆಯ್ಕೆ ಮಾಡಿಕೊಂಡು ಈ ಸಲ ಮುಂಗಾರಿನ ಹಂಗಾಮಿನಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆಯನ್ನು ಪಡೆದುಕೊಳ್ಳಬಹುದು ಅನ್ನುವ ಮಾಹಿತಿಯನ್ನು ನೋಡಿಕೊಳ್ಳಬಹುದು.
ಬೆಳೆವಿಮೆ ಮಾಹಿತಿಯನ್ನು ಚೆಕ್ ಮಾಡುವುದು ಹೇಗೆ?(crop insurance checking)
• ಮೊದಲನೇದಾಗಿ ಇದರ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ
• ನಂತರ ವರ್ಷ ಮತ್ತು ಋತು ವನ್ನು ಆಯ್ಕೆ ಮಾಡಿರಿ ಮತ್ತು Go ಬಟನ್ ಮೇಲೆ ಕ್ಲಿಕ್ ಮಾಡಿರಿ
• ಹೊಸ ಪುಟ ತೆರೆಯುತ್ತದೆ,ಅದರಲ್ಲಿ Farmers ಕಾಲಂನಲ್ಲಿ ‘crop you can insurance’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
• ನಂತರ ನಿಮ್ಮ ಜಿಲ್ಲೆ,ತಾಲೂಕು ,ಹೋಬಳಿ,ಗ್ರಾಮವನ್ನು ಆಯ್ಕೆ ಮಾಡಿ ‘Display’ ಬಟನ್ ಮೇಲೆ ಕ್ಲಿಕ್ ಮಾಡಬೇಕು