ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗಬೇಕೆಂದರೆ ಫ್ರೂಟ್ಸ್ ಐಡಿ ನೊಂದಾಯಿಸಿಕೊಳ್ಳುವುದು ಕಡ್ಡಾಯ..! ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಇದೆಯಾ ಈಗಲೇ ಚೆಕ್ ಮಾಡಿಕೊಳ್ಳಿ..! Crop Insurance News..!

FID ಮುಖ್ಯವಾದ ಮಾಹಿತಿ…!

ಕರುನಾಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ 2023 ಬರಪಿಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು ಈ ಬರಪೀಡಿತ ತಾಲೂಕುಗಳಲ್ಲಿನ ರೈತರಿಗೆ ಬೆಳೆ ವಿಮೆ ಜಮಾ ಆಗಬೇಕೆಂದರೆ Fid ಹೊಂದಿರುವುದು ಕಡ್ಡಾಯವಾಗಿದೆ..

WhatsApp Group Join Now
Telegram Group Join Now

ಹೌದು ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಿರುವಂತೆ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗೋದು ಎಂದು ರಾಜ್ಯ ಸರ್ಕಾರ ತಿಳಿಸಿದ್ದು ಹೇಗೆ ಪಡೆದುಕೊಳ್ಳಬೇಕು ಅಥವಾ ನಿಮ್ಮ ಹೆಸರಿನಲ್ಲಿ ಈಗಾಗಲೇ Fid  ನೊಂದಾಯಿತಗೊಂಡಿದೆಯಾ ಎಂದು ಈಗಲೇ ತಿಳಿಯಿರಿ.

https://www.scsptsp.karnataka.gov.in/BMS/CDOC/E

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಅತಿ ಸುಲಭವಾಗಿ Fid ಪಡೆದುಕೊಳ್ಳಬಹುದಾಗಿದೆ..
ಪ್ರೋಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಲು ಮನವಿ : ಫ್ರಟ್ಸ್ ತಂತ್ರಾಂಶದ ಮಾಹಿತಿಯನ್ನು ಸರ್ಕಾರದ ವಿವಿಧ ಸವಲತ್ತುಗಳಾದ ಬೆಳೆವಿಮೆ, ಬೆಳೆಸಾಲ, ಬೆಳೆ ಪರಿಹಾರ ವಿತರಣೆ, ಕನಿಷ್ಠ ಬೆಂಬಲ ಬೆಲೆ ಯೋಜನೆ ಅನುಷ್ಠಾನ, ಬೆಳೆ ದಾಖಲಾತಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ವಿತರಣೆಗೆ ಬಳಕೆ ಮಾಡುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನಿನ ಮಾಹಿತಿಯನ್ನು ನೀಡಿ ಪ್ರೋಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮನವಿ ಮಾಡಿದ್ದಾರೆ.

Bara parihara helpline number :

ಬರಗಾಲ ಪರಿಹಾರ ಹಣ ಯಾವ ರೈತರಿಗೆ ಜಮೆಯಾಗಿಲ್ಲವೋ ಅಂತಹ ರೈತರಿಗಾಗಿ ಸಹಾಯವಾಣಿ ನಂಬರ್ ಆರಂಭಿಸಲಾಗಿದೆ.

ಹೌದು, ಯಾವ ಯಾವ ರೈತರಿಗೆ ಬೆಳೆ ಹಾನಿ ಪರಿಹಾರ ಬಂದಿಲ್ಲವೋ ಆ ರೈತರು ಇಲ್ಲಿ ನೀಡಲಾದ ಸಹಾಯವಾಣಿ ನಂಬರ್ ಗೆ ಕರೆ ಮಾಡಿ ವಿಚಾರಿಸಬಹುದು. ಹಾಗಾದರೆ ನಿಮಗೆ ಬರಗಾಲ ಪರಿಹಾರ ಹಣ ಏಕೆ ಜಮೆಯಾಗಿಲ್ಲ? ಬರಗಾಲ ಪರಿಹಾರ ಹಣ ಎಷ್ಟು ಜಮೆಯಾಗಲಿದೆ? ಯಾವ ತಾಲೂಕಿನ ರೈತರು ಯಾವ ನಂಬರಿಗೆ ಕರೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳೆ ಹಾನಿ ಪರಿಹಾರದ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಲು ಕ್ರಮಕೈಗೊಳ್ಳಲಾಗಿದೆ. ಈ ಮೂಲಕ ಸರಿಯಾದ ಮಾಹಿತಿಯನ್ನು ರೈತರಿಗೆ ತಲುಪಿಸಲು ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು,ಈ ಮೂಲಕ ರೈತರಿಗೆ ನೆರವಾಗಲು ಜಿಲ್ಲಾಡಳಿತ ಮುಂದಾಗಿದೆ.

2023ನೇ ಸಾಲಿನ ಮುಂಗಾರಿನ ಹಂಗಾಮಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಪರಿಹಾರದ ಮೊದಲನೇ ಕಂತಾಗಿ 2000 ರೂಪಾಯಿ ಪಾವತಿಸಲಾಗಿದೆ.

Bara parihara helpline number ನಿಮಗೆಷ್ಟು ಬರ ಪರಿಹಾರ ಹಣ ಜಮೆಯಾಗಿದೆ? ಇಲ್ಲೇ ಚೆಕ್ ಮಾಡಿ

ನಿಮಗೆ ಬರ ಪರಿಹಾರ ಹಣ ಎಷ್ಟು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://parihara.karnataka.gov.in/service92

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ನಂತರ ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ  ನೀವು Select Year / ವರ್ಷ  2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ Select Season / ಋತು ಆಯ್ಕೆ ಮಾಡಿಯಲ್ಲಿ ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Select Calamity ವಿಪತ್ತು ಆಯ್ಕೆ ಮಾಡಿಯಲ್ಲಿ ಬರ ಆಯ್ಕೆ ಮಾಡಬೇಕು. ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ನಿಮಗೆ ಆಧಾರ್ ಸಂಖ್ಯೆ, ರೈತರ ಗುರುತಿನ ಸಂಖ್ಯೆ, ಮೊಬೈಲ್ ಸಂಖ್ಯೆಹಾಗೂ ಸರ್ವೆ ನಂಬರ್ ಈ ನಾಲ್ಕರಲ್ಲಿ ಯಾವುದಾದರೊಂದು ಒಂದನ್ನು ಆಯ್ಕೆಮಾಡಿಕೊಳ್ಳಬೇಕು.

ಬರ ಪರಿಹಾರ ಜಮೆ ಮಾಡಲು ಯಾವ ದಾಖಲೆ ಬೇಕಿಲ್ಲ.ನಿಮ್ಮ  ಸರ್ವೆ ನಂಬರ್ ಗೊತ್ತಿದ್ದರೆ.ಸಾಕು, ಸರ್ವೆ ನಂಬರ್ ನಮೂದಿಸಿ ಚೆಕ್ ಮಾಡಬಹುದು. ಹೌದು,ನೀವು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.

ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಗ್ರಾಮ ಆಯ್ಕೆಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹಿಸ್ಸಾ ನಂಬರ್ ನಲ್ಲಿಯೂ ಸಹ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು.

Leave a Reply

Your email address will not be published. Required fields are marked *