ಆತ್ಮೀಯ ರೈತ ಬಾಂಧವರೇ..
ಪ್ರತಿಯೊಬ್ಬರಿಗೂ ಸ್ಪಿಂಕ್ಲರ್ ಬಗ್ಗೆ ಗೊತ್ತಿರಬಹುದು ಏಕೆಂದರೆ ತುಂತುರು ನೀರಾವರಿಯೂ ಬೇಸಿಗೆ ಸಮಯದಲ್ಲಿ ಬಹಳಷ್ಟು ಉಪಯೋಗವಾಗಿದೆ.
ಅದಲ್ಲದೆ ಈ ವರ್ಷ ಮಳೆ ಕಡಿಮೆ ಇರುವ ಕಾರಣ ಈ ತುಂತುರು ಹನಿ ನೀರಾವರಿ ಅವಲಂಬನೆ ಯಾಗಬೇಕಾಗಿದೆ ಆದರೆ ಇದು ನೀವು ಸ್ವತಂತ್ರವಾಗಿ ಖರೀದಿ ಮಾಡಲು ಅಥವಾ ನೀವು ಅಂಗಡಿಗಳಿಂದ ಖರೀದಿ ಮಾಡಲು ತುಂಬಾ ಖರ್ಚಾಗುತ್ತದೆ ಆದರೆ ರೈತ ಸಂಪರ್ಕ ಕೇಂದ್ರಗಳಿಂದ ಇದನ್ನು ಸಬ್ಸಿಡಿಯಲ್ಲಿ ನೀಡುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರವು ರೈತರ ನೆರವಿಗೆ ನಿಂತಿದೆ.
ತುಂತುರು ನೀರಾವರಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ ಹಾವೇರಿ: ಕೃಷಿ ಇಲಾಖೆ ವತಿಯಿಂದ 2023-24ನೇ ಸಾಲಿನ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕ (ಸ್ಪಿಂಕ್ಲರ್) ಹಾಗೂ ಕೃಷಿ ಸಂಸ್ಕರಣೆ ಯೋಜನೆ ಸೌಲಭ್ಯಕ್ಕೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ತಮ್ಮ ಆಧಾರ್ ಕಾರ್ಡ್, ಅ ಖಾತೆ ಉತಾರ, ಆರ್.ಟಿ.ಸಿ ಉತಾರ, ಬೆಳೆ ಹಾಗೂ ನೀರಾವರಿ ಮೂಲದ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ 3 ಪಾಸ್ ಪೋರ್ಟ್ ಸೈಜಿನ ಛಾಯಾಚಿತ್ರಗಳೊಂದಿಗೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಿ.
ಕೂಡಲೇ ಅರ್ಜಿ ಸಲ್ಲಿಸಲು ಸೂಚಿಸಿದೆ.ಸೂಕ್ಷ್ಮ ನೀರಾವರಿ ಘಟಕ (ಸ್ಪಿಂಕ್ಲರ್) ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ರೈತರು ಕಡ್ಡಾಯವಾಗಿ ಚಾಲ್ತಿ ಸಾಲಿನ ಅಥವಾ ನವೀಕರಿಸಿದ ಜಾತಿ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಕೃಷಿ ಸಂಸ್ಕರಣೆ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಮಾತ್ರ ಎಣ್ಣೆಗಾಣಗಳು, ಹಿಟ್ಟಿನ ಗಿರಿಣಿ, ಕಾರ ಕುಟ್ಟುವ ಯಂತ್ರ, ರೊಟ್ಟಿ ಮಾಡುವ ಯಂತ್ರ, ಮಿನಿ ಆಯಿಲ್ ಎಕ್ಸೆಲರ್, ರಾಗಿ ಕ್ಲೀನಿಂಗ್‌ಯಂತ್ರ, ಮಿನಿ ರೈಸ್ ಮಿಲ್ಗಳಿಗಾಗಿ ಸಹ ಆಸಕ್ತ ರೈತರು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರಿಂದ ಅರ್ಜಿ ಆಹ್ವಾನ ಡಂಬಳ: ಕೃಷಿ ಇಲಾಖೆಯ 2023-24 ನೇ ಸಾಲಿನ ಸೂಕ್ಷ್ಮನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕ ಅಳವಡಿಸಿಕೊಳ್ಳಲು ಸಹಾಯಧನ ದಡಿ ನೀರಾವರಿ ಘಟಕ ವಿತರಣೆಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ಮುಂಡರಗಿ ಇವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯೊಂದಿಗೆ ರೈತರು ನಿಗದಿತ ಅರ್ಜಿ ನಮೂನೆ ಜತೆಗೆ ಆಧಾರ್ ಕಾರ್ಡ ನಕಲು ಪ್ರತಿ, ಖಾತೆ ಉತಾರ, ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿ, ನೀರಾವರಿ ದೃಢಿಕರಣ ಪತ್ರ, ತೋಟಗಾ ರಿಕೆ/ ರೇಷ್ಮೆ ಇಲಾಖೆಗಳಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರು ಅರ್ಜಿ ಸಲ್ಲಿಸುವಾಗ ಇತ್ತೀಚಿನ ಜಾತಿ ಪ್ರಮಾಣ ಪತ್ರದ ನಕಲು ಪ್ರತಿ ಸಲ್ಲಿಸಲು ಮುಂದಾಗು ವುದರ ಮೂಲಕ ಸರ್ಕಾರದ ಯೋಜನೆಯ ಲಾಭ ಸದುಪಯೋಗಪಡಿ ಸಿಕೊಳ್ಳಬೇಕೆಂದು ಮುಂಡರಗಿ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.