ಕೃಷಿ ಇಲಾಖೆಯಲ್ಲಿ ಭರ್ಜರಿ 5 ಸಾವಿರ ಹುದ್ದೆಗಳಿಗೆ ನೇಮಕಾತಿ :
ಈಗಲೇ ನೀವು ಕೂಡ ಅರ್ಜಿ ಸಲ್ಲಿಸಿ ICAR 5360 Vacancy Recruitment
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಕೃಷಿ ಇಲಾಖೆಯಲ್ಲಿ ಖಾಲಿ ಇರುವಂತ ಹಲವಾರು ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿದೆ. ಭಾರತೀಯ ಕೃಷಿ ಸಹಾಯಕರ ನೇಮಕಾತಿಯಾಗಿದ್ದು ಬರೋಬ್ಬರಿ 5000 ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ನೀವು ಕೂಡ ಅರ್ಜಿ ಸಲ್ಲಿಸಿ.
ICAR RECRUITMENT
ಎಲ್ಲರಿಗೂ ನಮಸ್ಕಾರ ಆತ್ಮೀಯ ಸ್ನೇಹಿತರೆ. ನಮ್ಮ ಈ ಜ್ಞಾನ ಘರ್ಜನೆ ಜಾಲತಾಣದಲ್ಲಿ ನಾವು ದಿನನಿತ್ಯ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತ ಮಾಹಿತಿಯನ್ನು ನೀಡುತ್ತಿದ್ದು ಅದರ ಜೊತೆಗೆ ಸರ್ಕಾರಿ ಯೋಜನೆಗಳ ಸಂಬಂಧಿಸಿದ ಮಾಹಿತಿಯನ್ನು ಕೂಡ ನೀಡುತ್ತಿದ್ದೇವೆ.
ಇಂದಿನ ಈ ಲೇಖನದಲ್ಲಿ ನಾವು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ನೇಮಕಾತಿ ಮಾಡಿಕೊಳ್ಳುತ್ತಿರುವಂತಹ ಕೃಷಿ ಸಹಾಯಕರ ಹುದ್ದೆಗಳ ನೇಮಕಾತಿಯ ವಿವರವನ್ನು ತಿಳಿಸಲಿದ್ದೇವೆ.

ಕೃಷಿ ಸಹಾಯಕರ ಹುದ್ದೆಗಳ ಭರ್ಜರಿ ನೇಮಕಾತಿ :
ICAR Job Notification for 5360 Vacancy
Indian agriculture Research Institute – ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿ ಖಾಲಿ ಇರುವಂತ 5360 ಕೃಷಿ ಸಹಾಯಕರ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಒಂದು ನೇಮಕಾತಿಯು ಬೃಹತ್ ನೇಮಕಾತಿ ಆಗಿರುವುದರಿಂದ ಪ್ರತಿಯೊಬ್ಬರೂ ಇದರ ಉಪಯೋಗಪಡಿಸಿಕೊಂಡು ಈ ಹುದ್ದೆಗಳನ್ನು ನಿಮ್ಮದಾಗಿಸಿಕೊಳ್ಳಿ.
ಖಾಲಿ ಇರುವಂತಹ ಹುದ್ದೆಗಳ ವಿವರ :
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಒಟ್ಟು 5,360 ಹುದ್ದೆಗಳು ಖಾಲಿ ಇರುತ್ತವೆ ಈ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ಹೆಸರನ್ನು ನಾವು ನೋಡುವುದಾದರೆ, ಕೃಷಿ ಸಹಾಯಕರ ಹುದ್ದೆಗಳು. ಕೃಷಿ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ವಯಸ್ಸಿನ ಮಿತಿ ಮಾನದಂಡಗಳು, ಅರ್ಜಿ ಶುಲ್ಕ, ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಮಾನದಂಡಗಳು :
ಅರ್ಜಿ ಸಲ್ಲಿಸುವಂತಹ ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು. ನಿಗದಿಪಡಿಸಲಾಗಿರುವ ಗರಿಷ್ಠ ವಯೋಮಿತಿಯನ್ನು ನೋಡುವುದಾದರೆ, 35 ವರ್ಷಗಳಿಗೆ ನಿಗದಿಪಡಿಸಲಾಗಿರುತ್ತದೆ. ಇನ್ನು ಮೀಸಲಾತಿ ವ್ಯಾಪ್ತಿಯಲ್ಲಿ ಬರುವಂತಹ ಅಭ್ಯರ್ಥಿಗಳಿಗೆ ನೇಮಕಾತಿ 2024 ನಿಯಮಗಳ ಪ್ರಕಾರ ವಯಸ್ಸಿನ ಮಿತಿಯಲ್ಲಿ ಹೆಚ್ಚುವರಿಯಾಗಿ ಲಭ್ಯವಿರಲಿದೆ.
ಶೈಕ್ಷಣಿಕ ಅರ್ಹತೆಗಳು :
ಕೃಷಿ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು, ಭಾರತ ದೇಶದಲ್ಲಿ ಯಾವುದೇ ಮಾನ್ಯತೆ ಪಡೆದ 10ನೇ ತರಗತಿ ಮತ್ತು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದಾದರೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ಕೃಷಿ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ :
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವಂತಹ ಕೃಷಿ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಬಯಸುವುದಾದರೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಒಂದು ನೂರು ರೂಪಾಯಿಯನ್ನು ಅರ್ಜಿ ಶುಲ್ಕವಾಗಿ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಗಳ ಎಲ್ಲಿ ಬರುವಂತಹ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಶೂನ್ಯ, ಅಂದರೆ ಈ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿಲ್ಲ ಆದ್ದರಿಂದ ಉಚಿತವಾಗಿ ಅರ್ಜಿ ಸಲ್ಲಿಸಿ.
ಆನ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಿ :
ಕೃಷಿ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ICAR ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಈ ಅಧಿಕೃತ ವೆಬ್ಸೈಟ್ನ ಲಿಂಕನ್ನು ನಾವು ಕೆಳಗೆ ನೀಡಿದ್ದೇವೆ. ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ಈ ಒಂದು ಸುವರ್ಣ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ.
ICAR ಅಧಿಕೃತ ವೆಬ್ ಸೈಟ್ : https://icar.org.in