DRDO ದಲ್ಲಿ ಸುವರ್ಣ ಅವಕಾಶ 27 ವರ್ಷದೊಳಗಿನವರು ಬೇಗನೆ ಅರ್ಜಿ ಸಲ್ಲಿಸಿ| ಅರ್ಜಿ ಸಲ್ಲಿಸುವ ನೇರ ಲಿಂಕ್ ಇಲ್ಲಿದೆ DRDO Recruitement 2024
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವಂಥವರು ಬೇಗನೆ ಅಪ್ಲೈ ಮಾಡಿ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಕರ್ನಾಟಕ ಸಮಸ್ತ ಜನತೆಗೆ ನಮಸ್ಕಾರಗಳು. ನಮ್ಮ ಈ ಜ್ಞಾನ ಘರ್ಜನೆ ಜಾಲತಾಣದಲ್ಲಿ ನಾವು ದಿನನಿತ್ಯ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ, ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮತ್ತು ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತಿದ್ದೇವೆ.
ಇಂದಿನ ಈ ಒಂದು ಲೇಖನದಲ್ಲಿ ನಾವು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (DRDO) ಹಾಗೂ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (CVRDE) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡುತ್ತಿದ್ದೇವೆ.
DRDO Recruitement 2024 :
ಡಿಆರ್‌ಡಿಓದಲ್ಲಿ ಖಾಲಿ ಇರುವಂತಹ ಕಾರ್ಪೆಂಟರ್ ಎಲೆಕ್ಟ್ರಿಷಿಯನ್ ಸೇರಿದಂತೆ ಹಲವಾರು ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಈ ಒಂದು ಹುದ್ದೆಗಳ ವಿವರವನ್ನು ನೋಡುವುದಾದರೆ, ಡಿ ಆರ್ ಡಿ ಓ ದಲ್ಲಿ ಒಟ್ಟು 60 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಐಟಿಐ ಕೋರ್ಸ್ ಮುಗಿದಂತವರು ಅರ್ಜಿ ಸಲ್ಲಿಸಲು ಅರ್ಹ ಇರುತ್ತಾರೆ ಎಂದು ಅಧಿಕೃತ ಸೂಚನೆಯಲ್ಲಿ ಪ್ರಕಟಿಸಲಾಗಿದೆ. ಐಟಿಐ ಕೋರ್ಸ್ ಮುಗಿಸಿದವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಬೇಗನೆ ನಿಮ್ಮ ಅರ್ಹತೆಗಳನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ವಯೋಮಿತಿಯನ್ನು ಕೂಡ ನಿಗದಿಪಡಿಸಲಾಗಿರುತ್ತದೆ. ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು. ಇನ್ನೂ ಗರಿಷ್ಠ ಮಿತಿಯನ್ನು ನೋಡುವುದಾದರೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 27 ವರ್ಷದೊಳಗಿನವರ ಆಗಿರಬೇಕು.
ಏನೆಲ್ಲಾ ಸೌಲಭ್ಯಗಳು ನಿಮಗೆ ಸಿಗಲಿದೆ?
ಬಂಧುಗಳೇ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವಂತಹ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೀವು ಆಯ್ಕೆಯಾದರೆ, ನಿಮಗೆ ಒಂದು ಉತ್ತಮ ತರಬೇತಿಯ ಜೊತೆಗೆ ಮಾಸಿಕ ವೇತನವು ಸಿಗಲಿದೆ. ಈ ಒಂದು ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳಿಗೆ ನೀವು ಆಯ್ಕೆಗೊಂಡರೆ ನಿಮಗೆ ಮಾಸಿಕ 700 ರೂಪಾಯಿಯಿಂದ 8500 ವರೆಗಿನ ವೇತನ ಕೂಡ ಸಿಗಲಿದೆ.
ಐಟಿಐ ಮುಗಿಸಿದವರಿಗೆ, ಕೇಂದ್ರ ಸರ್ಕಾರದ ಒಂದು ಉತ್ತಮ ಹಾಗೂ ಅತ್ಯುನ್ನತ ಸಂಸ್ಥೆಯಲ್ಲಿ ತರಬೇತಿ ಪಡೆಯುವುದು ಉತ್ತಮ ಅವಕಾಶವಾಗಿರುವುದರಿಂದ, ಪ್ರತಿಯೊಬ್ಬರೂ ಇದರ ಸದಪಯೋಗಪಡಿಸಿಕೊಳ್ಳಿ.
ನಿಮ್ಮನ್ನು ಹೇಗೆ ಆಯ್ಕೆ ಮಾಡಿ ಕೊಳ್ಳುತ್ತಾರೆ?
DRDO Recruitement 2024 : ಡಿಆರ್‌ಡಿಓದಲ್ಲಿ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವ ಅಪ್ರೆಂಟಿಸ್ ಹುದ್ದೆಗಳಿಗೆ ದಾಖಲೆ ಪರಿಶೀಲನೆ, ಸ್ಕ್ರೀನಿಂಗ್ ಪರೀಕ್ಷೆ ಹಾಗೂ ಸಂದರ್ಶನಗಳನ್ನು ನಡೆಸಿ ಅಂತಿಮವಾಗಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 13, 2024 ಆಗಿರುವುದರಿಂದ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ತಡಮಾಡದೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ನೇರ ಲಿಂಕ್ : drdo.gov.in
ಹೀಗೆ ಪ್ರತಿನಿತ್ಯ ಉದ್ಯೋಗದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ಧನ್ಯವಾದಗಳು.