ಕೋಟಕ್ ಸಂಸ್ಥೆಯಿಂದ ಸ್ಕಾಲರ್ಶಿಪ್ ಘೋಷಣೆ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಕೋಟಕ್ ಸಂಸ್ಥೆಯಿಂದ ಬಿಡುಗಡೆಯಾಗಿರುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
ಹೌದು ಸ್ನೇಹಿತರೆ ಕೋಟಕ್ ಸೆಕ್ಯೂರಿಟಿ ಸಂಸ್ಥೆಯ ಮುಖಾಂತರ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಘೋಷಣೆ ಮಾಡಲಾಗಿದ್ದು ಈ ವರದಿಯ ಪ್ರಕಾರ ್ಕಾಲರ್ಶಿಪ್‌ಗೆ ಅರ್ಜಿಯನ್ನು ಸಲ್ಲಿಸಿದರೆ 25000 ದಿಂದ ಒಂದು ಲಕ್ಷದವರೆಗೂ ಸ್ಕಾಲರ್ಶಿಪ್ ದೊರೆಯಲಾಗುವುದು ಎಂದು ತಿಳಿದುಬಂದಿದೆ..
ಹೌದು ಸ್ನೇಹಿತರೆ, ಮಲ್ಟಿ ನ್ಯಾಷನಲ್ ಕಂಪನಿ ಗಳಿಂದ ಸ್ಕಾಲರ್ಶಿಪ್ ಬಿಡುಗಡೆಯಾಗುತ್ತಿದ್ದು ಇದೀಗ ಕೋಟಕ್ ಸಂಸ್ಥೆಯಿಂದ ಬಿಡುಗಡೆಯಾಗಿದೆ ಅರ್ಜಿ ಸಲ್ಲಿಸಲು ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಸಂಪೂರ್ಣ ಮಾಹಿತಿ ಇದೀಗ ತಿಳಿದುಕೊಳ್ಳೋಣ ಬನ್ನಿ..

ಈ ಮೇಲ್ಕಾಣಿಸಿದ ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹತೆಯನ್ನು ಪಡೆದಿರುತ್ತಾರೆ..?
ಕೇವಲ ಅಂಗವಿಕಲತೆ ಹೊಂದಿರುವಂತಹ ಮಕ್ಕಳು ಮಾತ್ರ ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಪಡೆದಿದ್ದು 9ನೇ ತರಗತಿಯಿಂದ ಡಿಗ್ರಿ ವರೆಗೂ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಹೌದು ಸ್ನೇಹಿತರೆ ಕೇವಲ ಅಂಗವಿಕಲತೆ ಹೊಂದಿರುವ ವಿದ್ಯಾರ್ಥಿಗಳಿಗೆ ಮಾತ್ರ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ..
ಮಲ್ಟಿ ನ್ಯಾಷನಲ್ ಕಂಪನಿ ಗಳಿಂದ ಸ್ಕಾಲರ್ಶಿಪ್ ಬಗ್ಗೆ ಈಗಲೇ ತಿಳಿಯಿರಿ..!
ಕೋಟಕ್ ಸೆಕ್ಯೂರಿಟೀಸ್ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಲಾಂಚ್ ಮಾಡಿದೆ.
ಕೋಟಕ್ ಸುರಕ್ಷಾ ಸ್ಕಾಲರ್‌ಶಿಪ್ ಪ್ರೋಗ್ರಾಮ್ ಫಾರ್ ಕಾಲೇಜ್ ಸ್ಟೂಡೆಂಟ್ಸ್ 2024-25 ಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಾರ್ಷಿಕವಾಗಿ ಈ ವಿದ್ಯಾರ್ಥಿವೇತನದಲ್ಲಿ ರೂ.1,00,000 ವರೆಗೆ ಆರ್ಥಿಕ ಸಹಾಯಕ ದೊರೆಯಲಿದೆ. ಪಿಡಬ್ಲ್ಯೂಡಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿ ಸಾಧಿಸಲು ಸಹಾಯ ಮಾಡುವ ಹಿತದೃಷ್ಟಿಯಿಂದ ಈ ಸ್ಕಾಲರ್‌ಶಿಪ್ ಅನ್ನು ಕೋಟಕ್ ಸೆಕ್ಯೂರಿಟೀಸ್ ನೀಡುತ್ತಿದೆ.
ವೃತ್ತಿಪರ ಅಥವಾ ಮಾನವಿಕ ವಿಭಾಗಗಳಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅಪ್ಲಿಕೇಶನ್ ಸಲ್ಲಿಸಬಹುದು.
ವಿಕಲಚೇತನ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ಹಿಂದಿನ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಕನಿಷ್ಠ ಶೇಕಡ.55 ಅಂಕಗಳನ್ನು ಪಡೆದಿರಬೇಕು.
ಅರ್ಜಿ ಹಾಕುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.3,20,000 ಮೀರಿರಬಾರದು.
ದೇಶದಾದ್ಯಂತದ ಯಾವುದೇ ವಿಕಲಚೇತನ ಪದವಿ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು.
ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ..?
https://www.buddy4study.com/page/kotak-suraksha-scholarship-program
ಪ್ರಿಯ ವಿದ್ಯಾರ್ಥಿಗಳೇ ಈ ಮೇಲ್ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನೀವು ಕೇವಲ ನಿಮ್ಮ ಮೊಬೈಲ್ ನಲ್ಲಿ ಬಳಸಿಕೊಂಡು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.