ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ ಸಾಧ್ಯತೆ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನದಲ್ಲಿ ದಿನನಿತ್ಯ ಉಪಯುಕ್ತ ವಾಗುವಂತಹ ಮಾಹಿತಿ ನೀಡುತ್ತಿದ್ದು ಇದೀಗ ರಾಜ್ಯದಲ್ಲಿ ಮತ್ತೆ ಮಳೆರಾಯನ ಆರ್ಭಟ ಜೋರಾಗಲಿದ್ದು ಇದರ ಮಾಹಿತಿ ಇಲ್ಲಿದೆ ನೋಡಿ.
ಹೌದು ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಂತೆ ಕಳೆದ ವರ್ಷದಲ್ಲಿ ಸರಿಯಾದ ಸಮಯದಲ್ಲಿ ಯಾವುದೇ ತನ್ನ ಆದಂತಹ ಮಳೆಯಾಗಿಲ್ಲ ಆದರೆ ಇದೀಗ 2024ನೇ ಸಾಲಿನಲ್ಲಿ ಅತ್ಯುತ್ತಮವಾದಂತಹ ಮಳೆಯ ಪ್ರಭಾವ ಬೀರಲಿದ್ದು ಇದೀಗ ಮೂರು ದಿನಗಳ ಕಾಲ ಕರ್ನಾಟಕದ ಒಳಭಾಗದಲ್ಲಿ ಮಳೆರಾಯನ ಅಬ್ಬರ ಜೋರಾಗಲಿದೆ..
ಯಾವ ಯಾವ ಸ್ಥಳಗಳಲ್ಲಿ ಮಳೆ ಬೀಳಲಿದೆ ಇಲ್ಲಿದೆ ನೋಡಿ ಮಾಹಿತಿ..!
ದಿನಗಳಲ್ಲಿ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಳಗಾವಿ, ಬೀದರ್, ಬಾಗಲಕೋಟೆ, ಗುಲ್ಬರ್ಗ, ರಾಯಚೂರು ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾದ ಕಾರಣ ಅಲ್ಪ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆಯಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ.
ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬೀದರ್, ಕಲಬುರಗಿ, ಬೆಳಗಾವಿ, ಧಾರವಾಡ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆಯೇ ಮೋಡಕವಿದ ವಾತಾವರಣವಿದೆ. ಬೇಸಿಗೆ ಬಿಸಿ ಇಂದು ಕೊಂಚ ಕಡಿಮೆ ಇದೆ. ಬಹುಶಃ ಸಂಜೆಯ ವೇಳೆಗೆ ನಗರದಲ್ಲಿ ಮಳೆ ಬೀಳುವ ಸಾಧ್ಯತೆಗಳಿವೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮಾರ್ಚ್ 17 ರಂದು ಪಶ್ಚಿಮ ಹಿಮಾಲಯದಲ್ಲಿ ಹೊಸ ಪಾಶ್ಚಾತ್ಯ ಪ್ರಕ್ಷುಬ್ಧತೆ ರೂಪುಗೊಳ್ಳುವ ಸಾಧ್ಯತೆಯಿದೆ, ಇದರಿಂದಾಗಿ ದೇಶದ ಹಲವು ಭಾಗಗಳಲ್ಲಿ ಹವಾಮಾನವು ಮತ್ತೊಮ್ಮೆ ಬದಲಾಗಬಹುದು.
ಹವಾಮಾನ ಇಲಾಖೆ ಪ್ರಕಾರ, ಮಾರ್ಚ್ 12 ರಿಂದ 14 ರವರೆಗೆ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಮಾರ್ಚ್ 13 ರಂದು ಪಂಜಾಬ್, ಹರಿಯಾಣ, ಚಂಡೀಗಢ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.
ರಾಜ್ಯದ ದಕ್ಷಿಣ ಒಳಭಾಗಗಳಲ್ಲೂ ಮಳೆರಾಯನ ಅಬ್ಬರ ಜೋರಾಗಲಿದ್ದು ಈಗಾಗಲೇ ಹೊನಹವೇ ಬದಲಾಗಿದ್ದು ಇನ್ನು ಕೇವಲ ಮೂರು ದಿನಗಳಲ್ಲಿ ಭಾರಿ ಮಳೆ ಸಂಭವವಿದೆ..
ಕರ್ನಾಟಕದ ಉತ್ತರ ಭಾಗದಲ್ಲಿಯೂ ಕೂಡ ವನಹವೇ ಮೋಡಕವಿದ ವಾತಾವರಣ ಬದಲಾಗಿದ್ದು ಎಲ್ಲಿ ಕೂಡ ತಕ್ಕಮಟ್ಟಿಗೆ ಮಳೆರಾಯನ ತಂಪು ಬೀರಲಿದೆ..