ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಎರಡು ದಿನ ಮಾತ್ರ ಕಾಲಾವಕಾಶವನ್ನು ನೀಡಲಾಗಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನಗಳಲ್ಲಿ ಜನರಿಗೆ ಬೇಕಾಗಿರುವಂತಹ ದಿನನಿತ್ಯದ ಮಾಹಿತಿಯನ್ನು ನಾವು ನಮ್ಮ ಲೇಖನಗಳಲ್ಲಿ ನೀಡುತ್ತೇವೆ..!
ಇದೀಗ ಪ್ರಸ್ತುತ ಲೇಖನದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ!
ಯಾರು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿದ್ದಾರೆ..?
ಸ್ನೇಹಿತರೆ ಹೊಸದಾಗಿ ಮದುವೆ ಆದಂತಹ ನವದಂಪತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಮಾತ್ರ ಕಲ್ಪಿಸಲಾಗಿದೆ..
ಹಾಗೆಯೇ ವಿಚ್ಛೇದನ ಪಡೆದುಕೊಂಡಿರುವಂತಹ ಮಹಿಳೆ ಅಥವಾ ಪುರುಷರಿಗೂ ಕೂಡ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಹೌದು ಸ್ನೇಹಿತರೆ ಇಂತಹ ವ್ಯಕ್ತಿಗಳಿಗೆ ಮಾತ್ರ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು ಇನ್ನು ಉಳಿದವರಿಗೆ ಅರ್ಜಿ ಸಲ್ಲಿಸಲು ಯಾವುದೇ ತರನಾದಂತಹ ಅವಕಾಶವಿರುವುದಿಲ್ಲ..
ರೇಷನ್ ಕಾರ್ಡ್ ದೊರೆಯುವುದು ಯಾವಾಗ..?
ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಕಲ್ಪಿಸಿಕೊಡಲಾಗಿತ್ತು.
ಇದೀಗ ಅಂತಹ ಅರ್ಜಿ ಸಲ್ಲಿಸಿರುವಂತಹ ಜನರಿಗೆ ರೇಷನ್ ಕಾರ್ಡ್ ಇದೇ ತಿಂಗಳು ಮಾರ್ಚ್ 31ರ ಒಳಗಾಗಿ ಅವರ ಅರ್ಜಿಯ ಸ್ಟೇಟಸ್ ತಿಳಿಸಲಾಗುವುದು ಎಂದು ತಿಳಿದ ಬಂದಿದೆ.
ಈಗಾಗಲೇ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ಮಾಹಿತಿ ದೊರೆಯಲಿದ್ದು ಇನ್ನೂ ಯಾವುದೇ ತರನಾದಂತಹ ಅರ್ಜಿ ಸಲ್ಲಿಕೆಗೆ ಕಾಲಾವಕಾಶವನ್ನು ನೀಡಿಲ್ಲ…!
ಪಡಿತರ ಚೀಟಿಯಲ್ಲಿ ನೀವು ಮಾಡಿಸಬಹುದಾದ ತಿದ್ದುಪಡಿ
• ಮುಖ್ಯಸ್ಥರನ್ನು ಬದಲಾಯಿಸಬಹುದು
• ಮರಣ ಹೊಂದಿದವರ ಹೆಸರನ್ನು ತೆಗೆದುಹಾಕಬಹುದು
• ಆಧಾರ್ ಕಾರ್ಡ್ ಗೆ ಪಡಿತರ ಚೀಟಿಯನ್ನು ಲಿಂಕ್ ಮಾಡಬಹುದು
• ಪಡಿತರ ಚೀಟಿಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಬಹುದು
• ಪಡಿತರ ಚೀಟಿಗೆ ಹೊಸ ಸದಸ್ಯರನ್ನು ನೀವು ಸೇರಿಸಬಹುದಾಗಿದೆ
• ಇನ್ನು ಯಾವುದೇ ರೀತಿಯ ಒಂದು ತಿದ್ದುಪಡಿ ಹಾಗೂ ಹೊಸ ಪಡಿತರ ಚೀಟಿಯನ್ನು ನೀವು ಈ ಒಂದು ಕಾಲಾವಕಾಶದಲ್ಲಿ ಮಾಡಬಹುದಾಗಿದೆ
ಪಡಿತರ ಚೀಟಿಗೆ ಅರ್ಜಿಗಳು ಯಾವಾಗ ಆರಂಭ?
ಗೆಳೆಯರೇ ಹೊಸ ಪಡಿತರ ಚೀಟಿ ಮಾಡಿಸಲು ಹಾಗೂ ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಿಸಲು ಸರಕಾರವು ಇದೀಗ ಕಾಲಾವಕಾಶವನ್ನು ನೀಡಿದೆ ನೀವು ಯಾವಾಗ ಹೊಸ ಪಡಿತರ ಚೀಟಿ ಹಾಗೂ ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಿಸಬಹದೆಂದರೆ ಇದೇ ತಿಂಗಳು ಅಂದರೆ ಮಾರ್ಚ್ 9ನೇ ತಾರೀಕು 2024ರಂದು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಿಸಬಹುದು ಎರಡರಿಂದ ನಾಲ್ಕು ಗಂಟೆವರೆಗೆ ಹೊಸ ಪಡಿತರ ಚೀಟಿಯನ್ನು ಮಾಡಿಸಲು ಕಾಲಾವಕಾಶ ಇರುತ್ತದೆ.
ಪಡಿತರ ಚೀಟಿ ಮಾಡಿಸಲು ಬೇಕಾಗುವ ದಾಖಲಾತಿಗಳು?
• ಎಲ್ಲಾ ಸದಸ್ಯರ ಆಧಾರ್ ಕಾರ್ಡ್
• ಜಾತಿ ಪ್ರಮಾಣ ಪತ್ರ
• ಆದಾಯ ಪ್ರಮಾಣ ಪತ್ರ
• ಮೊಬೈಲ್ ಸಂಖ್ಯೆ
• ವಿಳಾಸದ ಪುರಾವೆ
• ಅರ್ಜಿ ಸಲ್ಲಿಸುವ ಎಲ್ಲಾ ಸದಸ್ಯರು ಖುದ್ದಾಗಿ ಹೋಗಬೇಕು
ಅರ್ಜಿ ಎಲ್ಲಿ ಸಲ್ಲಿಸುವುದು?
ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರಕ್ಕೆ ಹೋಗಿ ಪಡಿತರ ಚೀಟಿ ತಿದ್ದುಪಡಿ ಹಾಗೂ ಹೊಸ ಪಡಿತರ ಚೀಟಿಗೆ ಅಗತ್ಯ ಇರುವ ದಾಖಲೆಗಳನ್ನು ನೀಡಿ ನೀವು ಹೊಸ ಪಡಿತರ ಚೀಟಿ ಹಾಗೂ ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಿಸಬಹುದಾಗಿದೆ.