ಮುದ್ರಾ ಯೋಜನೆಯ ಹೊಸ ಅಡಿಯಲ್ಲಿ ಸ್ವಂತ ಉದ್ಯಮಕ್ಕಾಗಿ ಐದರಿಂದ ಹತ್ತು ಲಕ್ಷದವರೆಗೂ ಸಾಲ ಪಡೆದುಕೊಳ್ಳಿ..!
ಕರುನಾಡ ಜನತೆಗೆ ನಮಸ್ಕಾರಗಳು…!
ಈಗಾಗಲೇ ನಿಮಗೆ ತಿಳಿದಿರುವಂತೆ ಈ ನಮ್ಮ ಜ್ಞಾನ ಗರ್ಜನೆ ವೆಬ್ಸೈಟ್ನಲ್ಲಿ ಉದ್ಯೋಗದ ಮಾಹಿತಿ ನೀಡುತ್ತಿದ್ದು ಅಷ್ಟೇ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಬರುವಂತಹ ಹೊಸ ಯೋಜನೆಗಳ ಬಗ್ಗೆ ಕೂಡ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಮುದ್ರಾ ಯೋಜನೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಹೌದು ಸ್ನೇಹಿತರೆ ಮುದ್ರಾ ಯೋಜನೆಯು ಕೇಂದ್ರ ಸರ್ಕಾರದ ಹೊಸ ಯೋಜನೆಯಾಗಿದ್ದು ಸ್ವಂತ ಉದ್ಯಮಶೀಲಕ್ಕಾಗಿ 10 ಲಕ್ಷದವರೆಗೂ ಸಾಲವನ್ನು ಕೇಂದ್ರ ಸರ್ಕಾರ ಈ ಯೋಜನೆ ಅಡಿಯಲ್ಲಿ ನೀಡುತ್ತಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
ಮುದ್ರಾ ಯೋಜನೆಯ ವಿವರಗಳು ಇಲ್ಲಿವೆ :
ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರವು ತನ್ನ ಮೊದಲನೇ ಅವಧಿಯಲ್ಲಿ ಕೈಗೆಟುಕುವ ಬಡ್ಡಿದರದಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಯನ್ನ ಪ್ರಾರಂಭಿಸಿತು. ಈ ಯೋಜನೆಯ ಅಡಿಯಲ್ಲಿ, ಸಣ್ಣ ವ್ಯಾಪಾರ ಆರಂಭಿಸಲು 10 ಲಕ್ಷ ರೂ.ವರೆಗೆ ಸಾಲವನ್ನು ಕೂಡ ನೀಡಲಾಗುತ್ತದೆ.
ಸಾಲದ ಮೂರು ವಿಭಾಗಗಳು ಇವಾಗಿವೇ :
ಈ ಸಾಲವನ್ನು 3 ವಿಭಾಗಗಲ್ಲಿ ಕೂಡ ನೀಡಲಾಗುತ್ತದೆ. ಅವುಗಳೆಂದರೆ ಶಿಶು, ಕಿಶೋರ ಹಾಗೂ ತರುಣ. ಸಾಲದ ಮೊತ್ತವು ಎಲ್ಲಾ 3 ರೀತಿಯ ವಿಭಾಗಗಳಲ್ಲಿ ಕೂಡ ಬದಲಾಗುತ್ತದೆ.
• ಶಿಶು ವಿಭಾಗ : 50,000 ರೂ.ವರೆಗೆ ಸಾಲ ಸೌಲಭ್ಯ.
• ಕಿಶೋರ : 50,000 ಕ್ಕಿಂತ ಹೆಚ್ಚು ಮತ್ತು 5 ಲಕ್ಷಕ್ಕಿಂತ ಕಡಿಮೆ ಸಾಲ ಸೌಲಭ್ಯ.
• ತರುಣ್: 5 ಲಕ್ಷದಿಂದ 10 ಲಕ್ಷ ರೂ.ವರೆಗಿನ ಸಾಲ ಸೌಲಭ್ಯ.
ಕಳೆದ 5 ಹಣಕಾಸು (Money) ವರ್ಷಗಳಲ್ಲಿ ಈ ಯೋಜನೆಯಡಿಯಲ್ಲಿ 17.77 ಲಕ್ಷ (lakh) ಕೋಟಿ (crore) ರೂಪಾಯಿಗಳ (Money) ಮಂಜೂರಾದ ಮೊತ್ತದೊಂದಿಗೆ 28.89 ಕೋಟಿಗೂ ಹೆಚ್ಚು ಸಾಲಗಳನ್ನು ಕೂಡ ನೀಡಲಾಗಿದೆ.ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಾಗವತ್ ಕಿಸನರಾವ್ ಕರಾಡ್ ಅವರು ಸದನಕ್ಕೆ ಈ ಮಾಹಿತಿಯನ್ನಾ ನೀಡಿದ್ದಾರೆ. 7.93 ಲಕ್ಷ ಕೋಟಿ ಮೊತ್ತ ಅಂದರೆ 19.22 ಕೋಟಿಗೂ ಹೆಚ್ಚು ಸಾಲವನ್ನು ಮಹಿಳೆಯರಿಗೆ ನೀಡಲಾಗಿದೆ. ಅಂದರೆ ಈ ಯೋಜನೆಯಡಿ ಮಂಜೂರಾದ ಒಟ್ಟು ಸಾಲದ ಶೇಕಡಾ 67 ರಷ್ಟು ಇದೇ ಎಂದು ತಿಳಿಸಲಾಗಿದೆ.