ಕರ್ನಾಟಕ ವಿದ್ಯುತ್ ನಿಗಮದಲ್ಲಿ ನೇಮಕಾತಿ : 40,000 ರೂ. ಸಂಬಳ ಈಗಲೇ ಅರ್ಜಿ ಸಲ್ಲಿಸಿ ಅವಕಾಶ ನಿಮ್ಮದಾಗಿಸಿಕೊಳ್ಳಿ.
ಎಲ್ಲರಿಗೂ ನಮಸ್ಕಾರ ಬಂಧುಗಳೇ. ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ, ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ.
ಇಂದಿನ ಈ ಲೇಖನದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಬಗ್ಗೆ ತಿಳಿಸಳಿದ್ದೇವೆ.
ಈ ಹುದ್ದೆಗಳ ನೇಮಕಾತಿಯ ಬೇಕಾಗಿರುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ. ಆದ್ದರಿಂದ ಅಭ್ಯರ್ಥಿಗಳು ಈ ಲೇಖನವನ್ನು ಕೊನೆಯ ಭಾಗದವರೆಗೂ ಓದಿ ಎಲ್ಲಾ ಅರ್ಹತೆಗಳನ್ನು ತಿಳಿದುಕೊಂಡು ನಂತರ ನೀವು ಆಸಕ್ತರಿದ್ದರೆ ತಡ ಮಾಡದೆ ಅರ್ಜಿ ಸಲ್ಲಿಸಿ ಈ ಒಂದು ಸುವರ್ಣ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ.
ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸುವುದಾದರೆ ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿರುತ್ತದೆ.
ಖಾಲಿ ಹುದ್ದೆಗಳ ವಿವರ – ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಒಟ್ಟು 06 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಹೆಸರು ಸಹಾಯಕ ಕಾನೂನು ಅಧಿಕಾರಿ.
ಸಹಾಯಕ ಕಾನೂನು ಅಧಿಕಾರಿ – 06 ಹುದ್ದೆಗಳು
ತಿಂಗಳ ಸಂಬಳ ಏಷ್ಟು ಇರುತ್ತದೆ?
ಸದರಿ ಹುದ್ದೆಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ ಸಂಭಾವನೆ 40,000 ರೂಪಾಯಿ ಇರುತ್ತದೆ.
ಪ್ರತಿ ತಿಂಗಳು ಒಂದು ಸಾಂದರ್ಭಿಕ ರಜೆ ಕೂಡಾ ನೀಡಲಾಗುವುದು ಎಂದು ಅಧಿಸುಚನೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ನೇಮಕಾತಿ ಹೊಂದಿದ ಎಲ್ಲಾ ಅಭ್ಯರ್ಥಿಗಳಿಗೂ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಿರುವ ಪ್ರಯಾಣಗಳಿಗೆ ನಿಗಮದ ಸಹಾಯಕ ಕಾನೂನು ಅಧಿಕಾರಿ/ಸಹಾಯಕ ಅಭಿಯಂತರರು ಹುದ್ದೆಗೆ ಅರ್ಹವಿರುವ TA / DA ಭತ್ಯೆಯನ್ನು ಯನ್ನು ನೀಡಲಾಗುವುದು.
ನಿಗದಿಪಡಿಸಿದ ಅರ್ಹತೆ ಮತ್ತು ಅನುಭವ
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಖಾಲಿ ಇರುವ ಸಹಾಯಕ ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ (ಮೂರು ಅಥವಾ ಐದು ವರ್ಷಗಳ) ಕಾನೂನು ಪದವಿ (Degree in law) ಪಡೆದಿರಬೇಕು.
ಕನಿಷ್ಟ ಶೇಕಡ.40 ರಷ್ಟು ಅಂಕಗಳನ್ನು ಕಾನೂನು ಪದವಿ (Degree in law) ಯಲ್ಲಿ ಗಳಿಸಿರಬೇಕು (ಮೂರು ಅಥವಾ ಐದು ವರ್ಷಗಳ ಸರಾಸರಿ);
ವಕೀಲ ವೃತ್ತಿಯಲ್ಲಿ ಕನಿಷ್ಟ 05 ವರ್ಷಗಳ ಅನುಭವವಿರಬೇಕು.
ವಯೋಮಿತಿ: 40 ವರ್ಷ ಮೇಲ್ಪಟ್ಟ.
ಈ ಹುದ್ದೆಗಳಿಗೆ ಆಯ್ಕೆ ವಿಧಾನ ಹೇಗೆ?
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಖಾಲಿ ಇರುವ ಸಹಾಯಕ ಕಾನೂನು ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಲಾಗುವುದು.
ಆದ್ಯತೆ: ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧೀಕರಣದಲ್ಲಿ (ಕೆಎಸ್‌ಎಟಿ) ಹಾಗೂ ಉಚ್ಚ ನ್ಯಾಯಾಲಯದಲ್ಲಿ ಕರ್ನಾಟಕ ಸಿವಿಲ್ ಸೇವಾ ನಿಯಮಗಳ ವೃತ್ತಿಯಲ್ಲಿ ಅನುಭವವಿದ್ದವವರಿಗೆ ಹಾಗೂ ಆಂಗ್ಲ ಭಾಷೆಯ ಕಂಪ್ಯೂಟರ್ ಹಾಗೂ ಬೆರಳಚ್ಚು ಅನುಭವವುಳ್ಳವರಿಗೆ ಆದ್ಯತೆ.
ಗುತ್ತಿಗೆ ನೇಮಕಾತಿಯ ಅವಧಿ:
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಖಾಲಿ ಇರುವ ಸಹಾಯಕ ಕಾನೂನು ಅಧಿಕಾರಿ ಹುದ್ದೆಗಳ ಸದರಿ ಗುತ್ತಿಗೆ ನೇಮಕಾತಿಯು ಸೇರ್ಪಡೆಗೊಂಡ ದಿನಂಕದಿಂದ 2 ವರ್ಷಗಳ ಅವಧಿಗೆ ಆಗಿದ್ದು, ಸದರಿ ಅವಧಿಯಲ್ಲಿ ತೃಪ್ತಿಕರವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಮುಂದಿನ ವರ್ಷ ಅವಧಿಗೆ ವಿಸ್ತರಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು –
ಅಭ್ಯರ್ಥಿಗಳು ವಯಸ್ಸು, ವಿದ್ಯಾರ್ಹತೆ, ಅನುಭವ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ಈ ಕೆಳಕಂಡ ಮೂಲ ದಾಖಲೆಗಳ ಜೊತೆಗೆ ಸ್ವದೃಢೀಕೃತ (Self attested) ಜೆರಾಕ್ಸ್ ಪ್ರತಿ ಮತ್ತು ಇತ್ತೀಚಿನ ಒಂದು ಭಾವಚಿತ್ರದೊಂದಿಗೆ ಹಾಜರಾಗತಕ್ಕದ್ದು.
i) ಜನ್ಮ ದಿನಾಂಕಕ್ಕೆ ಆಧಾರವಾಗಿ ಹಾಗೂ ಜೇಷ್ಠತೆಯನ್ನು ನಿರ್ಧರಿಸಲು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಅಂಕಪಟ್ಟಿ.
ii) ನೋಂದಣೆ ಸಂಖ್ಯೆ ಹಾಗೂ ನೋಂದಣೆ ದಿನಾಂಕವುಳ್ಳ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ರವರು ನೀಡಿದ ಮೂಲ ಗುರುತಿನ ಕಾರ್ಡ್
iii) ವಕೀಲ ವೃತ್ತಿಯ 05 ವರ್ಷ ಅನುಭವದ ಬಗ್ಗೆ ಬಾರ್ ಅಧ್ಯಕ್ಷರ/ಕಾರ್ಯದರ್ಶಿಯ ರವರಿಂದ ಮೂಲ ಪ್ರಮಾಣ ಪತ್ರ ಹೊಂದಿರಬೇಕು. ಅಸೋಸಿಯೇಷನ್‌ನಿನ
iv) ಪದವಿ ಮತ್ತು ಕಾನೂನು ವಿಷಯದಲ್ಲಿ ಪದವಿಗೆ ಸಂಬಂಧಪಟ್ಟ ಪ್ರಮಾಣ ಪತ್ರ. (Degree/ Convocation certificate) ಮತ್ತು ಎಲ್ಲಾ ಪರೀಕ್ಷೆಗಳ(ಪ್ರತಿ ವರ್ಷ/ಪ್ರತಿ ಸೆಮಿಸ್ಟರ್‌ಗಳ) ಅಂಕಪಟ್ಟಿಗಳು.
ಅ. ಗುತ್ತಿಗೆ ಆಧಾರದ ಮೇಲೆ ನೇಮಕ ಹೊಂದುವ ಎಎಲ್‌ಓ ರವರು ನಿಗಮದ ಪ್ರಧಾನ ಕಛೇರಿ, ಬೆಂಗಳೂರು ಹಾಗೂ ನಿಗಮದ ವಿವಿಧ ಯೋಜನಾ ಪ್ರದೇಶಗಳಾದ ಆರ್‌ಟಿಪಿಎಸ್/ಶಕ್ತಿನಗರ, ರಾಯಚೂರು ಜಿಲ್ಲೆ, ಬಿಟಿಪಿಎಸ್/ಕುಡಿತಿನಿ, ಬಳ್ಳಾರಿ ಜಿಲ್ಲೆ, ಕಾಳಿ ಯೋಜನೆ/ಅಂಬಿಕಾನಗರ/ಗಣೇಶಗುಡಿ, ಉತ್ತರ ಕನ್ನಡ ಜಿಲ್ಲೆ, ಶರಾವತಿ/ವರಾಹಿ ಯೋಜನೆಗಳು, ಜೋಗ್ ಶಿವಮುಗ್ಗ ಜಿಲ್ಲೆ ಮತ್ತು ಹೊಸಂಗಡಿ, ಉಡಪಿ ಶಿವಮುಗ್ಗ ಜಿಲ್ಲೆ ಈ ಸ್ಥಳಗಳಲ್ಲಿ ಎಲ್ಲಿ ಅವಶ್ಯಕತೆ ಕಂಡು ಬರುತ್ತದೆಯೋ ಅಲ್ಲಿ ನಿಯೋಜಿಸಲಾಗುವುದು.
ಆ. ಈ ಗುತ್ತಿಗೆ ಆಧಾರದ ನೇಮಕಾತಿಯು ನಿಗಮದ ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ರೂ.200/- ಮೌಲ್ಯದ ಎಂಬೋಸ್ ಮಾಡಿದ ಛಾಪ ಕಾಗದದಲ್ಲಿ ನಿಗಮದೊಂದಿಗೆ ಸೇವಾ ಒಪ್ಪಂದವನ್ನು ಮಾಡಿಕೊಳ್ಳತಕ್ಕದ್ದು.
ಇ. ಅಭ್ಯರ್ಥಿಯು ಯಾವುದೇ ತಪ್ಪು ಮಾಹಿತಿಯನ್ನು ನೀಡಿರುವುದು ಕಂಡು ಬಂದಲ್ಲಿ ಅದಕ್ಕೆ ಅವನು/ಅವಳ ಗುತ್ತಿಗೆ ನೇಮಕಾತಿಯ ಅನರ್ಹಗೊಳಿಸುವುದಲ್ಲದೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಲಾಗುವುದು.
- ಅರ್ಜಿ ಸಲ್ಲಿಸಲು 19-01-2024 ರಂದು ಪ್ರಾರಂಭವಾಗುತ್ತದೆ.
- ಅರ್ಜಿ ಸಲ್ಲಿಸುವುದು 19-02-2024 ರಂದು ಮುಕ್ತಾಯಗೊಳ್ಳುತ್ತದೆ.
ಅರ್ಜಿ ಸಲ್ಲಿಸುವ ಲಿಂಕ್ – https://kpcl.karnataka.gov.in/