ಈಗ ಪಡೆದುಕೊಳ್ಳಿ ಸಬ್ಸಿಡಿ ದರದಲ್ಲಿ ಗ್ಯಾಸ್…!
ಕರುನಾಡ ಜನತೆಗೆ ನಮಸ್ಕಾರಗಳು…!
ಕೇಂದ್ರ ಸರ್ಕಾರದಿಂದ ಮತ್ತೆ ಸಬ್ಸಿಡಿ ದರದಲ್ಲಿ ಗ್ಯಾಸ್ ವಿತರಿಸಲಾಗುತ್ತಿದ್ದು ಎಷ್ಟು ಹಣ ಕಡಿಮೆಯಾಗಲಿದೆ ಸಂಪೂರ್ಣ ಮಾಹಿತಿಯನ್ನು ಇಲ್ಲಿದೆ ನೋಡಿ…
ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯನ್ನು ಇಳಿಕೆ ಮಾಡಲು ನಿರ್ಧಾರ ಮಾಡಲಾಗಿದೆ.
ಬೆಲೆಯಲ್ಲಿ ಇಷ್ಟು ಇಳಿಕೆ ಮಾಡಲು ಚಿಂತನೆ
ದೇಶದ ಜನತೆಗೆ ಬಿಗ್ ರಿಲೀಫ್
ದೇಶದ ಜನತೆ 2023 ರ ಆರಂಭದಿಂದ ಹಣದುಬ್ಬರತೆಯ ಪರಿಸ್ಥಿತಿಯನ್ನು ಕೂಡ ಎದುರಿಸುತ್ತಿದ್ದಾರೆ. ದಿನಬಳಕೆಯ ವಸ್ತುಗಳ ಬೆಲೆಯೂ ಕೂಡ ಹೆಚ್ಚಾಗುತ್ತಿತ್ತು. ಅದರಲ್ಲೂ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯೂ ಕೂಡ ಕಂಡು ಬಂದಿತ್ತು.
ಸದ್ಯ ಕೇಂದ್ರ ಸರ್ಕಾರ ಹೊಸ ವರ್ಷದ ವಿಶೇಷಕ್ಕೆ LPG ವಾಣಿಜ್ಯ ಸಿಲಿಂಡರ್ ನ ಬೆಲೆ ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ಸಿಹಿ ಸುದ್ದಿಯನ್ನ ನೀಡಿತ್ತು. ಆದರೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಆಗಿರಲಿಲ್ಲ. ಸಧ್ಯ ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಕೇಂದ್ರದಿಂದ ಬಿಗ್ ರಿಲೀಫ್ ಸಿಗಲಿದೆ ಅಂತಾನೆ ಹೇಳಬಹುದು. ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆಗೆ ಮುಂದಾಗಿದೆ ಎಂದು ತಿಳಿಸಲಾಗಿದೆ.
ಇನ್ನು ಗ್ಯಾಸ್ ಸಿಲಿಂಡರ್ ಬೆಲೆಯ ಏರಿಕೆಗೆ ಬ್ರೇಕ್ ಹಾಕಲು ಕೇಂದ್ರದ ಮೋದಿ ಸರ್ಕಾರ PMUY ಅನ್ನು ಕೂಡ ಪ್ರಾರಂಭಿಸಿತ್ತು. ಈ ಯೋಜನೆಯಡಿ ಅರ್ಹ ಫಲಾನುಭವಿಗಳು ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಕೂಡ ಪಡೆಯಬಹುದಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟೇ ಹೆಚ್ಚಾದರೂ PMUY ಯೋಜನೆಯಡಿ ಸಿಗುವ ಸಬ್ಸಿಡಿ 200 ರೂ. ಜನರಿಗೆ ಒಂದು ರೀತಿಯಲ್ಲಿ ಇದು ಸಹಕಾರಿಯಾಗುತ್ತಿತ್ತು.
ಬೆಲೆಯಲ್ಲಿ ಇಷ್ಟು ಇಳಿಕೆ ಮಾಡಲು ಚಿಂತನೆ ಮಾಡಲಾಗಿದೆ!
ಸದ್ಯ ಕೇಂದ್ರ ಸರ್ಕಾರ Gas Cylinder ಬೆಲೆಯನ್ನು ಇಳಿಕೆ ಮಾಡಲು ನಿರ್ಧಾರ ಮಾಡಲಾಗಿದೆ. 2024 ರಲ್ಲಿ ಬರುವ ಲೋಕಸಭಾ ಚುನಾವಣೆಗೂ ಮುನ್ನ ದೇಶದ ಜನತೆಗೆ ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಯ ಸುದ್ದಿಯನ್ನು ನೀಡಬೇಕು ಎಂದು ಕೂಡ ಸರ್ಕಾರವೂ ಚಿಂತಿಸಿದೆ. ಇನ್ನು PMUY ಯೋಜನೆಯಡಿ ನೀಡಲಾಗುವ 200 ರೂ. ಸಬ್ಸಿಡಿ ಹಣವನ್ನು 300 ರೂ. ಹೆಚ್ಚಿಸಲು ಸರ್ಕಾರ ನಿರ್ಧಾರವಾನ್ನು ಕೂಡ ಕೈಗೊಳ್ಳುತ್ತಿದೆ. ಸದ್ಯದಲ್ಲೇ ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಯ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಲಿದೆ ಎಂದು ತಿಳಿಸಲಾಗಿದೆ.